ನಟ​ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು..!? ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಏನಾಯ್ತು? 

ಆಗಸ್ಟ್ 16, 2025 - 15:57
 0  21
ನಟ​ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು..!? ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಏನಾಯ್ತು? 

ನಟ ಅಜಯ್ ರಾವ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಅವರ ಪತ್ನಿ ಸ್ವಪ್ನಾ ರಾವ್ ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 11 ವರ್ಷಗಳ ವೈವಾಹಿಕ ಬದುಕಿನ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇದೀಗ ವಿಚ್ಛೇದನ ಅರ್ಜಿ ಸಲ್ಲಿಕೆಯಾಗಿದೆ. ದಂಪತಿಗೆ ಒಬ್ಬ ಮಗಳು ಕೂಡ ಇದ್ದಾಳೆ.ಅಜಯ್ ರಾವ್ ಮತ್ತು ಸ್ವಪ್ನಾ 2014ರ ಡಿಸೆಂಬರ್ 18ರಂದು ಪ್ರೀತಿಸಿ ಮದುವೆಯಾಗಿದ್ದರು. ಹೊಸಪೇಟೆಯಲ್ಲಿ ಸರಳವಾಗಿ ವಿವಾಹವಾದ ಈ ಜೋಡಿ ಇತ್ತೀಚೆಗೆ ಹೊಸ ಮನೆಗೆ ಗೃಹಪ್ರವೇಶ ಮಾಡಿಕೊಂಡಿದ್ದರು.

ಅಜಯ್ ರಾವ್ 2014 ಡಿಸೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಜಯ್ ರಾವ್ ಹಾಗೂ ಸಪ್ನ ಒಂದೇ ಊರಿನವರು. ಇಬ್ಬರದ್ದು ಲವ್ ಕಂ ಅರೇಂಜ್ ಮ್ಯಾರೇಜ್. ಸಪ್ನ ಅವರನ್ನು ಮದುವೆಯಾಗಿರುವ ಅಜಯ್ ರಾವ್ ಹೊಸಪೇಟೆಗೆ ಭೇಟಿ ನೀಡಿದ್ದಾಗ ಇಬ್ಬರ ಪರಿಚಯವಾಗಿತ್ತು.

ಇದು ಸ್ನೇಹಕ್ಕೆ ತಿರುಗಿ, ಪ್ರೇಮವಾಗಿ ಇಬ್ಬರು ಮದುವೆಯಾಗಿದ್ದರು. ಈ ಜೋಡಿಗೆ ಈಗ ಒಂದು ಮುದ್ದಾದ ಮಗುವಿದೆ. ಚೆರಿಷ್ಮಾ ಮಗುವಿನ ಹೆಸರು. ಸ್ಯಾಂಡಲ್ವುಡ್ ನಲ್ಲಿ ಅಜಯ್ ರಾವ್, ಕೃಷ್ಣ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಅಜಯ್ ರಾವ್, ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ಸುಂದರ ಮನೆ ಪ್ರವೇಶ ಮಾಡಿದ್ದಾರೆ. ಈ ಗೃಹ ಪ್ರವೇಶ ಸಮಾರಂಭಕ್ಕೆ ತಾರಾಬಳಗವೇ ಬಂದಿತ್ತು. 

 2003ರಲ್ಲಿ ಕಿಚ್ಚ ಚಿತ್ರದಲ್ಲಿ ಸುದೀಪ್ ಸ್ನೇಹಿತನಾಗಿ ಕಾಣಿಸಿಕೊಂಡಿದ್ದ ಅಜಯ್ ರಾವ್, ನಾಯಕನಟನಾಗಿ ಎಕ್ಸ್ ಕ್ಯೂಸ್ ಮೀ ಚಿತ್ರದಲ್ಲಿ ನಟಿಸಿದ್ರು. ಈ ಚಿತ್ರ ಕೂಡ 2003ರಲ್ಲಿ ತೆರೆಗೆ ಬಂದಿತ್ತು. ಎಕ್ಸ್ ಕ್ಯೂಸ್ ಮೀ ಚಿತ್ರದಲ್ಲಿ ತಮ್ಮ ನಟನೆ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಅಜಯ್ ರಾವ್, ಸೂರ್ಯ, ತಾಜ್ ಮಹಲ್, ಅಮೃತವಾಣಿ,ಮನದ ಮರೆಯಲ್ಲಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ, ಶೋಕಿವಾಲಾ, ಯುದ್ಧಕಾಂಡ, ದಂಡಯಾತ್ರೆ ಸೇರಿದಂತೆ ಅಜಯ್ ರಾವ್ ಈವರೆಗೆ 34ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ ಅವರು ಚಿತ್ರ ನಿರ್ಮಾಣದ ಕೆಲಸ ಕೂಡ ಮಾಡ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow