ನಟ ಶಿವರಾಜ್ ಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್!

ಡಿಸೆಂಬರ್ 18, 2024 - 15:59
 0  22
ನಟ ಶಿವರಾಜ್ ಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್!

ನಟ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು ಪ್ರಮುಖ ಶಸ್ತ್ರಚಿಕಿತ್ಸೆಯೊಂದಕ್ಕಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಇಂದು ಶಿವಣ್ಣ ತೆರಳಲಿದ್ದು, ಸುದೀಪ್ ಸೇರಿದಂತೆ ಹಲವು ಗಣ್ಯರು ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್ ಅವರು ಶಿವಣ್ಣ ಅವರ ನಿವಾಸಕ್ಕೆ ತೆರಳಿ ಅವರಿಗೆ ಶುಭ ಹಾರೈಸಿದ್ದಾರೆ. ಧೈರ್ಯ ತುಂಬವ ಕಾರ್ಯ ಮಾಡಿದ್ದಾರೆ. ಶಿವಣ್ಣ ಅವರು ಎದುರು ಕಾಣುತ್ತಿದ್ದಂತೆ ಸುದೀಪ್ ಅವರು ಪ್ರೀತಿಯಿಂದ ಹಗ್ ಕೊಟ್ಟರು. 

ಶಿವರಾಜ್​ಕುಮಾರ್ ಅವರಿಗೆ ಇರುವ ಅನಾರೋಗ್ಯದ ವಿಚಾರ ತಿಳಿದು ಸುದೀಪ್ ಗಾಬರಿಗೊಂಡಿದ್ದರು. ಆದರೆ, ಶಿವಣ್ಣ ಅವರ ಪಾಸಿಟಿವ್​ ಎನರ್ಜಿಯಿಂದ ಅವರು ಖುಷಿಪಟ್ಟಿದ್ದಾರೆ.  ಈಗ ಶಿವರಾಜ್​ಕುಮಾರ್ ಚಿಕಿತ್ಸೆಗಾಗಿ ಮಿಯಾಮಿಗೆ ತೆರಳುತ್ತಿದ್ದಾರೆ. ಹೀಗಾಗಿ, ಕಿಚ್ಚ ಶುಭ ಹಾರೈಸಿದ್ದಾರೆ. ಅವರು ಸಂಪೂರ್ಣ ಚೇತರಿಕೆ ಕಾಣಲಿ ಎಂದು ಕೋರಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow