ನಡು ರಸ್ತೆಯಲ್ಲೇ ಯುವಕ-ಯುವತಿ ಲಿಪ್‌ ಲಾಕ್..! ಪ್ರಶ್ನಿಸಿದ ಬೈಕ್ ಸವಾರನಿಗೆ ಅವಾಜ್

ಮಾರ್ಚ್ 8, 2025 - 12:00
 0  15
ನಡು ರಸ್ತೆಯಲ್ಲೇ ಯುವಕ-ಯುವತಿ ಲಿಪ್‌ ಲಾಕ್..! ಪ್ರಶ್ನಿಸಿದ ಬೈಕ್ ಸವಾರನಿಗೆ ಅವಾಜ್

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಪುಂಡರ ಹಾವಳಿ ಮೀತಿಮಿರಿದ್ದು ಒಂದೆಡೆಯಾದರೆ, ನಡು ರಸ್ತೆಯಲ್ಲೇ ಯುವಕ-ಯುವತಿ ಲಿಪ್‌ಲಾಕ್ ಮಾಡ್ಕೊಂಡು ಹೋಗಿರುವ ಘಟನೆ ರಾಗಿಗುಡ್ಡ ರಸ್ತೆಯಲ್ಲಿ ನಡೆದಿದೆ. KA 05 CQ 0415 ಎಂಬ ನೋಂದಣಿ ಸಂಖ್ಯೆಯ KTM ಡ್ಯೂಕ್ ಬೈಕ್‌ನಲ್ಲಿ ಈ ಘಟನೆ ನಡೆದಿದೆ.

ಬೈಕ್‌ನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದು ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ಚಾಲನೆ ಮಾಡುತ್ತಿದ್ದ ಯುವಕನ ಹಿಂದೆ ಕುಳಿತಿದ್ದ ಯುವಕ ಮತ್ತು ಕೊನೆಯಲ್ಲಿ ಕುಳಿತ ಯುವತಿ ಪರಸ್ಪರ ಮುತ್ತು ನೀಡುತ್ತಿದ್ದರು. ಈ ವೇಳೆ ಅಕ್ಕಪಕ್ಕದಲ್ಲಿ ಬಂದ ವಾಹನ ಸವಾರರು ಇವರನ್ನು ಪ್ರಶ್ನಿಸಿದಾಗ ಅವರಿಗೆ ಧಮ್ಕಿ ಹಾಕಿ ಅವಾಜ್ ಮಾಡಿದ್ದಾರೆ.

ಈ ಘಟನೆಯ ದೃಶ್ಯವನ್ನು ಮತ್ತೊಬ್ಬ ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋವನ್ನು ಬೆಂಗಳೂರು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಘಟನೆ ಜೆ.ಪಿ.ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow