ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: 2029ರ ವೇಳೆಗೆ 5 ಲಕ್ಷ ಉದ್ಯೋಗ ಸೃಷ್ಟಿಸಲಿದ್ದೇವೆ ಎಂದ ಟಾಟಾ ಗ್ರೂಪ್ ಮುಖ್ಯಸ್ಥ!

ಅಕ್ಟೋಬರ್ 22, 2024 - 08:01
 0  18
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: 2029ರ ವೇಳೆಗೆ 5 ಲಕ್ಷ ಉದ್ಯೋಗ ಸೃಷ್ಟಿಸಲಿದ್ದೇವೆ ಎಂದ ಟಾಟಾ ಗ್ರೂಪ್ ಮುಖ್ಯಸ್ಥ!

ನವದೆಹಲಿ:- ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 2029ರ ವೇಳೆಗೆ 5 ಲಕ್ಷ ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಟಾಟಾ ಗ್ರೂಪ್ ಮುಖ್ಯಸ್ಥ ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಅವರು, ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಗಳನ್ನು ಸೃಷ್ಟಿಸದೇ ವಿಕಸಿತ ಭಾರತದ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಮ್ಯಾನುಫ್ಯಾಕ್ಚರಿಂಗ್​ನಿಂದ ಬಹಳ ದೊಡ್ಡ ಅವಕಾಶ ಸಿಕ್ಕಿದೆ. ಈ ಸೆಕ್ಟರ್​ನಲ್ಲಿ ಉದ್ಯೋಗ ಸೃಷ್ಟಿಸದೇ ವಿಕಸಿತ ಭಾರತದ ಗುರಿ ಸಾಧಿಸಲು ಆಗುವುದಿಲ್ಲ. ಪ್ರತೀ ತಿಂಗಳು 10 ಲಕ್ಷ ಜನರು ಉದ್ಯೋಗ ಕ್ಷೇತ್ರಕ್ಕೆ ಅಡಿ ಇಡುತ್ತಿದ್ದಾರೆ ಎಂಬುದು ನಮಗೆಲ್ಲಾ ಗೊತ್ತಿರುವುದೇ. ಹೀಗಾಗಿ, 10 ಕೋಟಿ ಉದ್ಯೋಗ ಸೃಷ್ಟಿಸುವುದು ಅಗತ್ಯವಾಗಿದೆ.

ಸೆಮಿಕಂಡಕ್ಟರ್​ನಂತಹ ಕ್ಷೇತ್ರವಾದರೆ ನೀವು ಒಂದು ನೇರ ಉದ್ಯೋಗ ಸೃಷ್ಟಿಸಿದರೆ 8ರಿಂದ 10 ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಗಳು ಹಲವು ಪಟ್ಟು ಹೆಚ್ಚುವರಿ ಉದ್ಯೋಗಗಳಿಗೆ ಎಡೆ ಮಾಡಿಕೊಡುತ್ತವೆ’ ಎಂದು ಟಾಟಾ ಸನ್ಸ್ ಛೇರ್ಮನ್ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.

ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಸಂಚಲನ ಕಾಣುತ್ತಿದೆ. ಸರ್ಕಾರ ಒತ್ತು ಕೊಡುತ್ತಿದೆ. ಒಂದು ಗ್ರೂಪ್ ಸಂಸ್ಥೆಯಾಗಿ ಪ್ರಾಜೆಕ್ಟ್​​ಗಳನ್ನು ಅಚ್ಚರಿಯ ವೇಗದಲ್ಲಿ ಆರಂಭಿಸಲು ಸಾಧ್ಯವಾಗಿದೆ. ಸೆಮಿಕಂಡಕ್ಟರ್, ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್, ಅಸೆಂಬ್ಲಿಂಗ್, ಎಲೆಕ್ಟ್ರಿವ್ ವಾಹನಗಳು, ಬ್ಯಾಟರಿ ಹಾಗು ಸಂಬಂಧಿತ ಉದ್ಯಮಗಳಲ್ಲಿ ನಾವು ಮಾಡಿರುವ ಹೂಡಿಕೆಯಿಂದ ಮುಂದಿನ ಐದು ವರ್ಷದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿಸಬಹುದು ಎಂದು ಚಂದ್ರಶೇಖರನ್ ಹೇಳಿದ್ದಾರೆ.

ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಳನ್ನು ಸೃಷ್ಟಿಸಲು ಕನಿಷ್ಠ 500ರಿಂದ 1,000 ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳಾದರೂ ಸ್ಥಾಪನೆಯಾಗುವುದು ಅಗತ್ಯ ಎಂಬ ವಿಚಾರವನ್ನೂ ಟಾಟಾ ಸನ್ಸ್ ಮುಖ್ಯಸ್ಥರು ಪ್ರಸ್ತಾಪಿಸಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow