ನಿವೃತ್ತಿ ಬಗ್ಗೆ ಮೌನ ಮುರಿದ ಭುವನೇಶ್ವರ್ ಕುಮಾರ್: ಹೇಳಿದ್ದೇನು?
ಬರೋಬ್ಬರಿ ಟೀಮ್ ಇಂಡಿಯಾದಿಂದ ಮೂರು ವರ್ಷದಿಂದ ಹೊರಗುಳಿದಿರುವ ಭುವನೇಶ್ವರ್ ಕುಮಾರ್ ಅವರು ನಿವೃತ್ತಿಯ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. 2022 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಎದುರಿಸಿದಾಗಿನಿಂದ ಟೀಮ್ ಇಂಡಿಯಾ ಬಹಳಷ್ಟು ಬದಲಾಗಿದೆ. ಆ ಪಂದ್ಯದವರೆಗೂ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಭಾರತೀಯ ತಂಡದ ಖಾಯಂ ಸದಸ್ಯ ಎಂದು ಪರಿಗಣಿಸಲಾಗಿತ್ತು.
ಆದರೆ ಆ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳಿಂದ ಸೋತ ತಕ್ಷಣ, ಭುವಿಯನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಯಿತು. ಈಗ 3 ವರ್ಷಗಳ ನಂತರವೂ ಅವರು ಯಾವುದೇ ಸ್ವರೂಪದಲ್ಲಿ ಮರಳಲು ಸಾಧ್ಯವಾಗಿಲ್ಲ. ಇದೀಗ ಭುವನೇಶ್ವರ್ ತಮ್ಮ ನಿವೃತ್ತಿ ಮತ್ತು ಭವಿಷ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಭುವನೇಶ್ವರ್ ಕುಮಾರ್ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಆಯ್ಕೆ ನನ್ನ ಕೈಯಲ್ಲಿಲ್ಲ ಎಂದು ಹೇಳಿದ್ದಾರೆ. ನನ್ನ ಕೆಲಸ ಮೈದಾನದಲ್ಲಿ 100 ಪ್ರತಿಶತ ನೀಡುವುದು ಮತ್ತು ನಾನು ಅದನ್ನೇ ಮಾಡುತ್ತಿದ್ದೇನೆ. ಯುಪಿ ಲೀಗ್ ನಂತರ ಮುಷ್ತಾಕ್ ಅಲಿ, ರಣಜಿ ಅಥವಾ ಏಕದಿನ ಮಾದರಿಯಲ್ಲಿ ಉತ್ತರ ಪ್ರದೇಶ ಪರ ಆಡಲು ಅವಕಾಶ ಸಿಕ್ಕರೆ, ಅಲ್ಲಿಯೂ ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ’ ಎಂದು ಹೇಳಿದರು.
ಶಿಸ್ತಿನ ಬೌಲರ್ ಆಗಿ, ನನ್ನ ಗಮನ ಫಿಟ್ನೆಸ್ ಮತ್ತು ಲೈನ್-ಲೆಂತ್ ಮೇಲೆ ಇರುತ್ತದೆ. ನೀವು ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ, ಕೆಲವೊಮ್ಮೆ ಅದೃಷ್ಟವು ನಿಮಗೆ ಅನುಕೂಲಕರವಾಗಿರುವುದಿಲ್ಲ. ನಿಮ್ಮ ಪ್ರದರ್ಶನವೇ ಅತ್ಯಂತ ಮುಖ್ಯ. ಯಾರಾದರೂ ಸ್ಥಿರವಾಗಿ ಉತ್ತಮ ಕ್ರಿಕೆಟ್ ಆಡಿದರೆ, ಅವರನ್ನು ದೀರ್ಘಕಾಲ ನಿರ್ಲಕ್ಷಿಸಲಾಗುವುದಿಲ್ಲ. ನೀವು ಆಯ್ಕೆಯಾಗದಿದ್ದರೂ ಸಹ, ನಿಮ್ಮ 100 ಪ್ರತಿಶತವನ್ನು ನೀಡುವತ್ತ ಗಮನಹರಿಸಿ. ಉಳಿದೆಲ್ಲವೂ ಆಯ್ಕೆದಾರರ ಮೇಲೆ ಅವಲಂಬಿತವಾಗಿದೆ” ಎಂದು ಭುವನೇಶ್ವರ ಕುಮಾರ್ ಹೇಳಿದರು. ಇದರ ಹೊರತಾಗಿ, ನಿವೃತ್ತಿಯ ಪ್ರಶ್ನೆಯ ಬಗ್ಗೆ ಮಾತನಾಡುತ್ತಾ, ಭುವಿ ಅವರು ಪ್ರಸ್ತುತ ಅಂತಹ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?