ನೀವು ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುತ್ತಿದ್ದೀರಾ? ಹಾಗಿದ್ರೆ ಈ ನ್ಯೂಸ್ ಮಿಸ್ ಮಾಡ್ದೆ ನೋಡಿ
ಬಹುತೇಕ ಜನರು ಉದ್ಯೋಗ, ವ್ಯಾಪಾರ, ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಾಯಾಮಕ್ಕೆ ಸಮಯ ನೀಡಲಾಗುತ್ತಿಲ್ಲ. ಆದರೆ, ಕೇವಲ 10 ನಿಮಿಷಗಳವರೆಗೆ ವ್ಯಾಯಾಮಕ್ಕೆ ಮೀಸಲಿಟ್ಟರೆ ಸಾಕು ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ತಜ್ಞರು ತಿಳಿಸುತ್ತಾರೆ. ಆ ವ್ಯಾಯಾಮ ಯಾವುದು ಹಾಗೂ ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಹತ್ತು ನಿಮಿಷವರೆಗೆ ತಾವು ಇರುವ ಸ್ಥಳದಲ್ಲಿ ಜಾಗಿಂಗ್ ಮಾಡುವುದು ಹೃದಯದ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಇದಷ್ಟೇ ಅಲ್ಲ ರಕ್ತ ಸಂಚಾರ ಸುಧಾರಿಸುತ್ತದೆ ಹಾಗೂ ಹೃದಯ ಸಂಬಂಧಿ ರೋಗಗಳು ಕಡಿಮೆಯಾಗುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ
ದೇಹವನ್ನು ದಂಡಿಸುವಂತಹ ಯಾವುದೇ ವ್ಯಾಯಾಮವಾದರೂ ಅದು ಆರೋಗ್ಯಕ್ಕೆ ಒಳ್ಳೆಯದು ಎಂದೇ ಪರಿಗಣಿಸಲಾಗಿದೆ. ಹೀಗಾಗಿ ಜಾಗಿಂಗ್, ಓಡುವುದು, ಯೋಗ, ವ್ಯಾಯಾಮ ಇತ್ಯಾದಿಗಳನ್ನು ನಿತ್ಯ ಬೆಳಗ್ಗೆ ಮಾಡಿದರೆ ಆಗ ಹಲವಾರು ಬಗೆಯ ಆರೋಗ್ಯ ಲಾಭಗಳು ಸಿಗುವುದು.
ಮುಖ್ಯವಾಗಿ ಬೆಳಗ್ಗಿನ ಸಮಯದಲ್ಲಿ ಓಡಿದರೆ ಅದರಿಂದ ನಾನಾ ರೀತಿಯ ಲಾಭಗಳು ದೇಹಕ್ಕೆ ಸಿಗುವುದು. ದೇಹವನ್ನು ಫಿಟ್ ಆಗಿಡಲು, ಮಾನಸಿಕವಾಗಿ ಉಲ್ಲಾಸಿತ ವಾಗಿರಲು ಇದು ಸಹಕಾರಿ ಆಗಿರುವುದು. ದಿನದ ಯಾವ ಸಮಯದಲ್ಲಿ ಓಡಿದರೆ ಅದರಿಂದ ಹೆಚ್ಚು ಲಾಭವಾಗಲಿದೆ ಎನ್ನುವುದನ್ನು ತಿಳಿದು ಓಡಿದರೆ ಒಳ್ಳೆಯದು. ನಿತ್ಯವೂ ಓಡಲು ಸರಿಯಾದ ಸಮಯ ಯಾವುದು ಮತ್ತು ಯಾವುದರಿಂದ ಲಾಭವಾಗಲಿದೆ ಎಂದು ತಿಳಿಯೋಣ.
ಬೆಳಗ್ಗೆ-ಸಂಜೆ: ಇದರಲ್ಲಿ ಓಡಲು ಒಳ್ಳೆಯ ಸಮಯ ಯಾವುದು?
ಯಾವ ಸಮಯದಲ್ಲಿ ಓಡಬೇಕು ಎಂದು ತಿಳಿದುಕೊಂಡರೆ, ಆಗ ಖಂಡಿತವಾಗಿಯೂ ಅದರಿಂದ ದೇಹಾರೋಗ್ಯಕ್ಕೆ ಹಲವಾರು ಲಾಭಗಳು ಆಗಲಿದೆ. ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಲು ಯಾವ ಸಮಯವು ಸರಿಯಾಗಿದೆ ಎಂದು ತಿಳಿಯಬೇಕು
ಓಡುವುದರಿಂದ ದೇಹದ ತೂಕ ಇಳಿಸುವುದು ಮಾತ್ರವಲ್ಲದೆ, ಹೃದಯದ ಆರೋಗ್ಯ ವೃದ್ಧಿಸಿ, ಮೆದುಳಿನ ಕಾರ್ಯ ಚಟುವಟಿಕೆಗಳನ್ನು ಕೂಡ ಸುಧಾರಿಸಬಹುದು. ಆದರೆ ಇದೆಲ್ಲವೂ ಯಾವ ಸಮಯದಲ್ಲಿ ಓಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಓಡಿದರೆ, ಆಗ ಅದರಿಂದ ಹಲವಾರು ಬಗೆಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಆ ಲಾಭಗಳು ಯಾವುದು ಎಂದು ತಿಳಿಯಲು ತಯಾರಾಗಿ.
ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೇಹವು ಸ್ನಾಯುಗಳಿಗಿಂತ ಹೆಚ್ಚಿನ ಕೊಬ್ಬು ಕರಗಿಸುವುದು. ಉಪಾಹಾರದ ಬಳಿಕ ಓಡಲು ಆರಂಭಿಸಿದರೆ ಆಗ ದೇಹವು ಸ್ನಾಯು ಮತ್ತು ಯಕೃತ್ ನಲ್ಲಿ ಇರುವ ಕಾರ್ಬೋಹೈಡ್ರೇಟ್ಸ್ ನ್ನು ಬಳಕೆ ಮಾಡಿಕೊಳ್ಳುವುದು
ದೇಹವು ಇದನ್ನು ಶಕ್ತಿಯ ಮೂಲವಾಗಿ ಬಳಸಿಕೊಳ್ಳುವುದು. ಅದಾಗ್ಯೂ, ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೇಹವು ಬೇರೆ ಶಕ್ತಿಯ ಮೂಲಕ್ಕಾಗಿ ಹುಡುಕುವುದು. ಇದರಿಂದ ದೇಹದ ಕೊಬ್ಬನ್ನು ಅದು ಕರಗಿಸುವುದು.
ಉಪಾಹಾರ ಮಾಡದೆ ಇದ್ದರೆ ಆಗ ದೇಹಕ್ಕೆ ತೀವ್ರತೆಯು ಸಿಗದೆ ಇರುವು ದನ್ನು ನೀವು ಗಮನಿಸಬಹುದು. ಆದರೆ ಇದರಿಂದ ಲಾಭಗಳು ಇದೆ ಎಂದು ತಜ್ಞರು ಹೇಳುವರು. ಕಡಿಮೆ ತೀವ್ರತೆಯೊಂದಿಗೆ ಓಡಿದಾಗ ಅಥವಾ ಜಾಗಿಂಗ್ ಮಾಡಿದರೆ ಆಗ ದೇಹವು ಕಾರ್ಬೋಹೈಡ್ರೇಟ್ಸ್ ಬದಲಿಗೆ ಕೊಬ್ಬನ್ನು ಶಕ್ತಿಯ ಮೂಲವಾಗಿ ತೆಗೆದುಕೊಳ್ಳುವುದು.
ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೇಹದಲ್ಲಿನ ಕೊಬ್ಬು ಕರಗುವ ಕಾರಣದಿಂದಾಗಿ ತೂಕ ಇಳಿಸಲು ಇದು ತುಂಬಾ ಸಹಕಾರಿ ಆಗಿರುವುದು. ಓಡುವಂತಹ ಏರೋಬಿಕ್ಸ್ ವ್ಯಾಯಾಮವು ತೂಕ ಇಳಿಕೆಗೆ ಸಹಕಾರಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೈಹಿಕ ಫಿಟ್ನೆಸ್ ಸುಧಾರಣೆ ಆಗುವುದು ಎಂದು ಅಧ್ಯಯನಗಳು ಹೇಳಿವೆ. ಉಪಾಹಾರ ಮಾಡದೆ ಓಡಿದಾಗ ದೇಹದಲ್ಲಿ ಆಮ್ಲಜನಕದ ಪೂರೈಕೆಯು ಸುಧಾರಣೆ ಆಗುವುದು.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಓಡಿದರೆ ಆಗ ದೈಹಿಕ ಫಿಟ್ನೆಸ್ ಸುಧಾರಣೆ ಆಗುವುದು ಎಂದು ಅಧ್ಯಯನಗಳು ಹೇಳಿವೆ. ಉಪಾಹಾರ ಮಾಡದೆ ಓಡಿದಾಗ ದೇಹದಲ್ಲಿ ಆಮ್ಲಜನಕದ ಪೂರೈಕೆಯು ಸುಧಾರಣೆ ಆಗುವುದು.
ನಿಮ್ಮ ಪ್ರತಿಕ್ರಿಯೆ ಏನು?