ನೀವ್ ವಾಟ್ಸಾಪ್ʼನಲ್ಲಿ ಆನ್ ಲೈನ್ ಇರೋದು ಗೋತ್ತಾಗ್ಬಾರ್ದು ಅಂದ್ರೆ ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ..!

ಫೆಬ್ರವರಿ 12, 2025 - 08:02
 0  14
ನೀವ್ ವಾಟ್ಸಾಪ್ʼನಲ್ಲಿ ಆನ್ ಲೈನ್ ಇರೋದು ಗೋತ್ತಾಗ್ಬಾರ್ದು ಅಂದ್ರೆ ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ..!

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ತತ್‌ಕ್ಷಣ ಸಂದೇಶ ಕಳುಹಿಸುವ ವೇದಿಕೆಯಾಗಿರುವ ವಾಟ್ಸಪ್ ಪ್ರಪಂಚದಾದ್ಯಂತ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಅಪ್ಲಿಕೇಶನ್. ಶತಕೋಟಿ ಬಳಕೆದಾರರೊಂದಿಗೆ, ಮೆಟಾ ಒಡೆತನದಲ್ಲಿರುವ ವಾಟ್ಸಪ್ ಪ್ಲಾಟ್‌ಫಾರ್ಮ್ ಹೊಸ ಹೊಸ ವೈಶಿಷ್ಟ್ಯಗಳನ್ನು ತನ್ನ ಬಳಕೆದಾರರ ಗೌಪ್ಯತೆ, ಭದ್ರತೆಯ ಸಲುವಾಗಿ ಪರಿಚಯಿಸುತ್ತಲೇ ಇರುತ್ತದೆ. 

ಆನ್​ಲೈನ್ ಇದ್ದರೂ ಆಫ್​ಲೈನ್ ಹೇಗೆ?:

ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ ಇದ್ದರೂ ಆಫ್​ಲೈನ್ ಇರುವಂತೆ ಕಾಣಲಿ ಈ ಕೆಳಗಿನ ಸೂತ್ರ ಅನುಸರಿಸಿ.

  • ಮೊದಲಿಗೆ ನಿಮ್ಮ ವಾಟ್ಸ್​ಆ್ಯಪ್ ಅನ್ನು ಹೊಸ ವರ್ಷನ್​ಗೆ ಅಪ್ಡೇಟ್ ಮಾಡಿಕೊಳ್ಳಿ.
  • ಆ ಬಳಿಕ, ವಾಟ್ಸ್​ಆ್ಯಪ್ ತೆರೆಯಿರಿ ಮತ್ತು ಸೆಟ್ಟಿಂಗ್ ಟ್ಯಾಬ್‌ಗೆ ಹೋಗಿ
  • ನಂತರ ಅಲ್ಲಿ ಕಾಣಿಸುವ ಪ್ರೈವಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಈಗ ಮೊದಲಿಗೆ ಕಾಣಿಸುವ ಲಾಸ್ಟ್​ ಸೀನ್ ಮತ್ತು ಆನ್​ಲೈನ್ ಎಂಬ ಆಯ್ಕೆ ಸೆಲೆಕ್ಟ್ ಮಾಡಿರಿ
  • ಇಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತದೆ. ನನ್ನ ಲಾಸ್ಟ್ ಸೀನ್ ಯಾರು ನೋಡಬೇಕು ಮತ್ತು ನಾನು ಆನ್​ಲೈನ್​ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು?
  • ಆನ್​ಲೈನ್​ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು ಎಂಬಲ್ಲಿ Everyone ಹಾಗೂ Same as Last Seen ಎರಡು ಆಯ್ಕೆ ಇದೆ
  • ಇಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಸೆಲೆಕ್ಟ್ ಮಾಡಿದರೆ ಆಯಿತು

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow