ನೆಪೋಟಿಸಂಗೆ ಇಂಡಸ್ಟ್ರಿ ಮಾತ್ರ ಜವಾಬ್ದಾರಿ ಅಲ್ಲ, ಪ್ರೇಕ್ಷಕರು ಕೂಡ ಕಾರಣ: ಕೃತಿ ಸನೋನ್

ಡಿಸೆಂಬರ್ 1, 2024 - 20:28
 0  8
ನೆಪೋಟಿಸಂಗೆ ಇಂಡಸ್ಟ್ರಿ ಮಾತ್ರ ಜವಾಬ್ದಾರಿ ಅಲ್ಲ, ಪ್ರೇಕ್ಷಕರು ಕೂಡ ಕಾರಣ: ಕೃತಿ ಸನೋನ್

ಬಾಲಿವುಡ್‌ ಬೆಡಗಿ ಕೃತಿ ಸನೋನ್‌ಗೆ ತಕ್ಕ ಮಟ್ಟಿಗೆ ಅಭಿಮಾನಿಗಳಿದ್ದಾರೆ.. ತಮ್ಮ ಅಭಿನಯದಿಂದಲೇ ಜನರ ಮನಗೆದ್ದ ಈ ಚೆಲುವೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.. ಹೌದು ನೆಪೋಟಿಸಂ ಬಗ್ಗೆ ಕೃತಿ ಸನೋನ್ ಅವರು ಮಾತನಾಡಿದ್ದಾರೆ. ಕೃತಿ ಸನೋನ್​ ನೆಪೋ ಕಿಡ್ ಅಲ್ಲ. ಆದರೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಅವರು ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರಿಗೆ ನ್ಯಾಷನಲ್ ಅವಾರ್ಡ್ ಕೂಡ ಬಂದಿದೆ. ಈಗ ಅವರು ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ. ಟ್ಯಾಲೆಂಟ್ ಇದ್ದರೆ ಮಾತ್ರ ಯಶಸ್ಸು ಕಾಣಬಹುದು ಎಂಬುದು ಕೃತಿ ಸನೋನ್ ಅಭಿಪ್ರಾಯ.

‘ನೆಪೋಟಿಸಂಗೆ ಇಂಡಸ್ಟ್ರಿ ಮಾತ್ರ ಜವಾಬ್ದಾರಿ ಅಲ್ಲ. ಇದಕ್ಕೆ ಮಾಧ್ಯಮಗಳು ಮತ್ತು ಪ್ರೇಕ್ಷಕರು ಕೂಡ ಕಾರಣ. ಕೆಲವು ಸ್ಟಾರ್ ಮಕ್ಕಳ ಬಗ್ಗೆ ಮಾಧ್ಯಮಗಳು ಏನು ಹಾಕುತ್ತಿವೆ ಎಂಬುದನ್ನು ಪ್ರೇಕ್ಷಕ ನೋಡ ಬಯಸುತ್ತಾನೆ. ಪ್ರೇಕ್ಷಕರಿಗೆ ಅವರ ಬಗ್ಗೆ ಆಸಕ್ತಿ ಇರುವುದರಿಂದ ಅವರ ಜೊತೆ ಸಿನಿಮಾ ಮಾಡೋಣ ಎಂದು ಇಂಡಸ್ಟ್ರಿ ಭಾವಿಸುತ್ತದೆ.

ಹಾಗಾಗಿ ಇದು ಒಂದು ವೃತ್ತ ಎಂದು ನಾನು ಭಾವಿಸುತ್ತೇನೆ. ಆದರೆ ನೀವು ಪ್ರತಿಭಾವಂತರಾಗಿದ್ದರೆ ಮಾತ್ರ ನೀವು ಅಲ್ಲಿಗೆ ಬರುತ್ತೀರಿ ಎಂದು ನನಗೆ ಅನಿಸುತ್ತದೆ. ನೀವು ಪ್ರತಿಭಾವಂತರಲ್ಲದಿದ್ದರೆ ಮತ್ತು ಪ್ರೇಕ್ಷಕರೊಂದಿಗೆ ಸಂಪರ್ಕವಿಲ್ಲದಿದ್ದರೆ ನೀವು ಈ ಹಂತಕ್ಕೆ ಬರೋದಿಲ್ಲ’ ಎಂದಿದ್ದಾರೆ.

ಕೃತಿ ಸನೋನ್ ಚಿತ್ರರಂಗಕ್ಕೆ ಕಾಲಿಟ್ಟು ದಶಕ ಕಳೆದಿದೆ. 2014ರಲ್ಲಿ ರಿಲೀಸ್ ಆದ ‘1-ನೇನೊಕ್ಕಡಿನೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದೇ ವರ್ಷ ‘ಹೀರೋಪಂತಿ’ ಸಿನಿಮಾದಲ್ಲಿ ಅವರು ನಟಿಸಿದರು. ಈ ಮೂಲಕ ಹಿಂದಿ ಚಿತ್ರರಂಗಕ್ಕೆ ಬಂದರು. ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಈ ವರ್ಷ ‘ಕ್ರ್ಯೂ’ ಹಾಗೂ ‘ದೋ ಪತ್ತಿ’ ಸಿನಿಮಾಗಳಲ್ಲಿ ಕೃತಿ ಸನೋನ್ ನಟಿಸಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow