ನೋಡ ನೋಡುತ್ತಿದ್ದಂತೆ ಕುಸಿದ ವೇದಿಕೆ: ನಟಿಯೊಬ್ಬರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅಂತದ್ದೇನಾಯ್ತು!?

ಅಕ್ಟೋಬರ್ 4, 2024 - 17:23
 0  14
ನೋಡ ನೋಡುತ್ತಿದ್ದಂತೆ ಕುಸಿದ ವೇದಿಕೆ: ನಟಿಯೊಬ್ಬರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅಂತದ್ದೇನಾಯ್ತು!?

ನೋಡ ನೋಡುತ್ತಿದ್ದಂತೆ ಕುಸಿದ ವೇದಿಕೆ: ನಟಿಯೊಬ್ಬರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅಂತದ್ದೇನಾಯ್ತು!? 

ನೋಡ ನೋಡುತ್ತಿದ್ದಂತೆ ವೇದಿಕೆ ಕುಸಿದು ನಟಿಯೊಬ್ಬರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಜರುಗಿದೆ. 

ನಟಿ ಪ್ರಿಯಾಂಕಾ ಈ ಅವಘಡದಲ್ಲಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತೆರೂರಿನಲ್ಲಿ ಗುರುವಾರ ಕಸಮ್ ಶಾಪಿಂಗ್ ಮಾಲ್ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಮೋಹನ್ ಭಾಗವಹಿಸಿದ್ದರು. ಮಾಲ್ ಉದ್ಘಾಟನಾ ಸಮಾರಂಭದಲ್ಲಿ ನಟಿಯನ್ನು ಕಾಣಲು ಪ್ರೇಕ್ಷಕರೂ ಕಿಕ್ಕಿರಿದು ಸೇರಿದ್ದರು. ಆದರೆ ಈ ವೇಳೆ ಇದ್ದಕ್ಕಿದ್ದಂತೆಯೇ ವೇದಿಕೆ ಕುಸಿದಿದೆ.

ವೇದಿಕೆ ಕುಸಿದ ಪರಿಣಾಮ ಕಾಂಗ್ರೆಸ್ ಶಾಸಕಿ ಯಶಸ್ವಿನಿ ಅವರ ತಾಯಿ ಝಾನ್ಸಿ ರೆಡ್ಡಿ, ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹನುಮಂಡ್ಲ ಝಾನ್ಸಿ ರೆಡ್ಡಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಆದರೆ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ನಟಿ ಪ್ರಿಯಾಂಕಾ ಕೂಡ ಸಣ್ಣ ಪುಟ್ಟ ಗಾಯದಿಂದ ಬಚಾವ್ ಆಗಿದ್ದಾರೆ. ಸದ್ಯ ವೇದಿಕೆ ಕುಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಿಯಾಂಕಾ ಮೋಹನ್ ಎಕ್ಸ್ನಲ್ಲಿ ಘಟನೆ ಬಗ್ಗೆ ಬರೆದಿದ್ದು, ‘ನಾನು ಇಂದು ತೊರೂರಿನಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಪಘಾತದ ಸಂಭವಿಸಿತ್ತು. ಸದ್ಯ ನಾನು ಚೆನ್ನಾಗಿದ್ದೇನೆ ಮತ್ತು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟದಿಂದ ಪಾರಾಗಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow