ಪರ್ಸನಲ್ ಲೋನ್ ಕಡಿಮೆ ಬಡ್ಡಿ ದರದಲ್ಲಿ ಪಡೆಯಲು ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್!

ಪ್ರತಿಯೊಬ್ಬ ಮಧ್ಯಮ ವರ್ಗದ ಭಾರತೀಯನ ದೊಡ್ಡ ಕನಸು ಸ್ವಂತ ಮನೆ ಹೊಂದುವುದು. ಮನೆ ಖರೀದಿಸಿದ ನಂತರ ಕಾರು, ಇತರ ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಉಳಿತಾಯವಿದ್ದರೂ ಕೆಲವು ತುರ್ತು ಪರಿಸ್ಥಿತಿಗಳಿಗೆ ನಾವು ಕೂಡಿಟ್ಟ ಹಣ ಸಾಲುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ಪಡೆಯುವುದು ಉತ್ತಮ ಆಯ್ಕೆಯಾಗಿರುತ್ತದೆ.
ಅದರಲ್ಲೂ ವಿಶೇಷವಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಕಡಿಮೆ ಬಡ್ಡಿದರ ಸಾಲವನ್ನು ಆಯ್ಕೆ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ವೇತನದಾರರು ಮತ್ತು ಉದ್ಯಮಿಗಳಿಗೆ ಪರ್ಸನಲ್ ಲೋನ್ ಎನ್ನುವುದು ಒಂದು ಹಣ ಪಡೆಯಲು ಸುಲಭ ಮಾರ್ಗವಾಗಿದ್ದು, ಇದು ತುರ್ತು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸುತ್ತದೆ.
ಕನಿಷ್ಠ ಬಡ್ಡಿದರದಲ್ಲಿ ಸಾಲ ಸಿಗಲು ಏನು ಮಾಡಬೇಕು?
ಪರ್ಸನಲ್ ಲೋನ್ ಅಡಮಾನರಹಿತ ಸಾಲವಾದುದರಿಂದ ಬ್ಯಾಂಕುಗಳಿಗೆ ರಿಸ್ಕ್ ಹೆಚ್ಚು. ಗ್ರಾಹಕನ ಮೇಲಿನ ನಂಬುಗೆಯಿಂದ ಒಂದು ಅಂದಾಜಿನಲ್ಲಿ ಬ್ಯಾಂಕುಗಳು ಸಾಲ ಕೊಡುತ್ತವೆ. ಅಂತೆಯೇ ಹೆಚ್ಚಿನ ಬಡ್ಡಿದರ ವಿಧಿಸುತ್ತವೆ. ಗ್ರಾಹಕನಿಂದ ಸಾಲ ಮರುಪಾವತಿ ಸಾಧ್ಯತೆ ಕಡಿಮೆ ಎಂಬ ಅಂದಾಜು ಇದ್ದಷ್ಟೂ ಬಡ್ಡಿ ಹೆಚ್ಚು ನಿಗದಿ ಮಾಡಲಾಗುತ್ತದೆ.
ಗ್ರಾಹಕನ ಮರುಪಾವತಿ ಶಕ್ತಿ ಎಷ್ಟು ಎಂದು ತಿಳಿಯಲು ಬ್ಯಾಂಕಿಗೆ ಇರುವ ಪ್ರಮುಖ ಉಪಾಯ ಕ್ರೆಡಿಟ್ ಸ್ಕೋರ್. ಪರ್ಸನಲ್ ಲೋನ್ ಅಷ್ಟೇ ಅಲ್ಲ ಯಾವುದೇ ಸಾಲಕ್ಕೆ ಒಬ್ಬ ಗ್ರಾಹಕ ಅರ್ಜಿ ಸಲ್ಲಿಸಿದಾಗ ಮೊದಲು ಅವರ ಕ್ರೆಡಿಟ್ ಸ್ಕೋರ್ ಅನ್ನು ಬ್ಯಾಂಕು ಪರಿಶೀಲಿಸುತ್ತದೆ. 750ಕ್ಕೂ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿದರಕ್ಕೆ ಸಾಲ ಮಂಜೂರು ಮಾಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಷ್ಟೂ ಸಾಲಕ್ಕೆ ಬಡ್ಡಿದರ ಹೆಚ್ಚು ಇರುತ್ತದೆ.
ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳು
ಬ್ಯಾಂಕುಗಳು ಮತ್ತು NBFCಗಳು ಸಾಲಗಳ ಮೇಲೆ ರಿಯಾಯಿತಿಗಳನ್ನು ಘೋಷಿಸುತ್ತವೆ. ಇವುಗಳನ್ನು ಹಬ್ಬದ ಋತುಗಳಲ್ಲಿ ಮತ್ತು ವಿವಿಧ ಸಮಯಗಳಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಉದಾಹರಣೆಗೆ, ನೀವು ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಕಾರ್ಪೊರೇಟ್ ಒಪ್ಪಂದಗಳ ಮೂಲಕ ಕಡಿಮೆ ಬಡ್ಡಿದರದ ಸಾಲಗಳನ್ನು ಪಡೆಯಲು ನಿಮಗೆ ಸಾಧ್ಯವಾಗಬಹುದು.
ಪೂರ್ವ-ಅನುಮೋದಿತ ಸಾಲದ ಕೊಡುಗೆಗಳು
ನಿಯಮಿತವಾಗಿ ಸಾಲವನ್ನು ಪಾವತಿಸಿದ ಗ್ರಾಹಕರಿಗೆ ಬ್ಯಾಂಕುಗಳು ಪೂರ್ವ-ಅನುಮೋದಿತ ಸಾಲ ಕೊಡುಗೆಗಳನ್ನು ಘೋಷಿಸುತ್ತವೆ. ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಾಗುತ್ತದೆ.
ಅನಗತ್ಯ ಶುಲ್ಕಗಳು
ಕೆಲವು ಸಾಲದಾತರು ವೈಯಕ್ತಿಕ ಸಾಲಗಳನ್ನು ನೀಡುವಾಗ ವಿಮಾ ಪಾಲಿಸಿಗಳನ್ನು ಸಹ ಮಾರಾಟ ಮಾಡುತ್ತಾರೆ. ಇದು ನಿಮ್ಮ ವೆಚ್ಚವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಸಾಲ ಒಪ್ಪಂದಕ್ಕೆ ಸಹಿ ಹಾಕುವಾಗ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕು.
FD ಗಳ ಮೇಲೆ ಸಾಲ
ನೀವು ಸ್ಥಿರ ಠೇವಣಿ ಮತ್ತು ಇತರ ಆಸ್ತಿಗಳನ್ನು ಹೊಂದಿದ್ದರೆ, ನೀವು ಅವುಗಳ ಮೇಲೆ ಸಾಲ ಪಡೆಯಬಹುದು. ಇವುಗಳಿಗೆ ಕಡಿಮೆ ಬಡ್ಡಿದರ ವಿಧಿಸಲಾಗುತ್ತದೆ. ಅನುಕೂಲಕರ ಆಯ್ಕೆಗಳು, ಕನಿಷ್ಠ ದಾಖಲೆಗಳೊಂದಿಗೆ ತ್ವರಿತ ಅನುಮೋದನೆಗಳು.
ನಿಮ್ಮ ಪ್ರತಿಕ್ರಿಯೆ ಏನು?






