ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಮಾಜಿ ಸಂಸದನ ಮುಂದಿರುವ ಆಯ್ಕೆಗಳೇನು..?

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೆಡಿಎಸ್‌ನ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿಯಾಗಿದ್ದಾರೆ ಎಂಬ ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. ತೀವ್ರ ಕುತೂಹಲ ಮೂಡಿಸಿದ್ದ ಈ ಪ್ರಕರಣಕ್ಕೆ ಕೊನೆಗೂ ನ್ಯಾಯಾಲಯವು ಜೀವನಪರ್ಯಂತ ಜೈಲು ಶಿಕ್ಷೆ ಹಾಗೂ ದಂಡದ ತೀರ್ಪು ನೀಡಿದೆ.
IPC ಸೆಕ್ಷನ್ 376(2)(N) ಅಡಿಯಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಸೆಕ್ಷನ್ 376(2)(K) ಅಡಿಯಲ್ಲಿ 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದಲ್ಲದೆ, ಮತ್ತು ಸೆಕ್ಷನ್ 376(2)(N) ಅಡಿಯಲ್ಲಿ ಮತ್ತೊಂದು 5 ಲಕ್ಷ ರೂ. ದಂಡ ವಿಧಿಸಲಾಗಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಈ ದಂಡದ ಮೊತ್ತದಿಂದ ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸೂಚಿಸಲಾಗಿದೆ. ಈ ತೀರ್ಪು ಪ್ರಜ್ವಲ್ ರೇವಣ್ಣ ಪಾಲಿಗೆ ಭಾರೀ ಪೆಟ್ಟಾಗಿ ಪರಿಣಮಿಸಿದೆ. ಅವರು ಜೀವನಪರ್ಯಂತ ಜೈಲಿನಲ್ಲಿ ಉಳಿಯಬೇಕಿದೆ.
ಮುಂದಿನ ಹಂತಗಳಲ್ಲಿ ಪ್ರಜ್ವಲ್ ರೇವಣ್ಣ ಏನು ಮಾಡಬಹುದು?
-
ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು:
ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಬಹುದಾಗಿದೆ. -
ತಡೆಯಾಜ್ಞೆಿಗಾಗಿ ಮನವಿ:
ಹೈಕೋರ್ಟ್, ವಿಶೇಷ ಕೋರ್ಟ್‌ನ ತೀರ್ಪು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡುವ ಸಾಧ್ಯತೆ ಇದೆ.
ಹೀಗಾದರೆ, ತಾತ್ಕಾಲಿಕವಾಗಿ ಜೈಲಿನಿಂದ ರಿಲೀಸ್ ಆಗುವ ಅವಕಾಶ ಸಿಗಬಹುದು. -
ಇನ್ನೂ ಮೂರು ಪ್ರಕರಣಗಳ ವಿಚಾರಣೆ ಬಾಕಿ:
ಉಳಿದ ಮೂರು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತೀರ್ಪು ಬಾಕಿಯಿದ್ದು,
ಈ ಪ್ರಕರಣಗಳಲ್ಲಿ ಪ್ರಜ್ವಲ್ ನಿರಪರಾಧಿ ಎಂಬುದು ಸಾಬೀತಾದರೆ ಮಾತ್ರ ಸಂಪೂರ್ಣ ರೀಲೀಫ್ ಸಾಧ್ಯ. -
ಸುಪ್ರೀಂ ಕೋರ್ಟ್ ಪರ್ಯಂತ ಹೋರಾಟ:
ಹೈಕೋರ್ಟ್ ತೀರ್ಪು ಪ್ರತಿಕೂಲವಾದರೂ, ಸುಪ್ರೀಂ ಕೋರ್ಟ್ ಗೆ ಹೋಗುವ ಅವಕಾಶ ಇದೆ.
ಆದರೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಇಬ್ಬರೂ ತೀರ್ಪನ್ನು ಎತ್ತಿ ಹಿಡಿದರೆ,
ಪ್ರಜ್ವಲ್ ರೇವಣ್ಣಗೆ ಜೀವಾವಧಿಯ ಜೈಲು ಶಿಕ್ಷೆ ಖಚಿತ.
ನಿಮ್ಮ ಪ್ರತಿಕ್ರಿಯೆ ಏನು?






