ಪ್ರಭಾವಿ ಸಚಿವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಹೊಸ ಬಾಂಬ್‌ ಸಿಡಿಸಿದ ಸತೀಶ್ ಜಾರಕಿಹೊಳಿ !

ಮಾರ್ಚ್ 20, 2025 - 15:59
 0  15
ಪ್ರಭಾವಿ ಸಚಿವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಹೊಸ ಬಾಂಬ್‌ ಸಿಡಿಸಿದ ಸತೀಶ್ ಜಾರಕಿಹೊಳಿ !

 ಬೆಂಗಳೂರು: ಪ್ರಭಾವಿ ಸಚಿವರ ಮೇಲೆ ಎರಡು ಬಾರಿ ​ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರಭಾವಿ ಸಚಿವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್​ ಆಗಿದ್ದು,

ಸಚಿವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ. ಹನಿಟ್ರ್ಯಾಪ್​ ಹಿಂದೆ ಯಾರಿದ್ದಾರೆ ಅಂದ್ರೆ ಆರೋಪಿಸಿದಂತಾಗುತ್ತೆ. ಅದು ರಾಜಕೀಯ ಆರೋಪ ಮಾಡಿದಂತಾಗುತ್ತೆ. ಹನಿಟ್ರ್ಯಾಪ್​ ಯತ್ನ ಅಂತು ನಡೆದಿದೆ ಎಂದು ಖಚಿತಪಡಿಸಿದರು.

ಸಚಿವರು ದೂರು ಕೊಟ್ಟರಷ್ಟೇ ಅದು ಅಧಿಕೃತ. ಹನಿಟ್ರ್ಯಾಪ್​ ಯಾರು ಮಾಡುತ್ತಿದ್ದಾರೆಂದು ಎಲ್ಲರಿಗೂ ಗೊತ್ತು. ಹನಿಟ್ರ್ಯಾಪ್​ ಮಾಡುವುದಕ್ಕೆಂದೇ ಒಂದು ತಂಡ​ ಇದೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಎಲ್ಲ ಪಕ್ಷದವರೂ ಚರ್ಚಿಸಬೇಕಾದ ವಿಷಯ ಎಂದಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow