ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಪ್ರಿಯಕರ ಶವವಾಗಿ ಪತ್ತೆ!
ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಕೋಪಗೊಂಡ ಪ್ರೇಮಿ ಕಾರ್ತಿಕ್, ತನ್ನ ಪ್ರೇಯಸಿ ರಕ್ಷಿತಾ ಪೂಜಾರಿ (ಹುಟ್ಟುಹಬ್ಬದ ದಿನವೇ) ಕತ್ತು ಹಾಗೂ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ನಂತರ,
ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ತಿಕ್ ಮತ್ತು ರಕ್ಷಿತಾ ಅಕ್ಕಪಕ್ಕದ ನಿವಾಸಿಗಳು. ಕಾರ್ತಿಕ್ ಪ್ರೀತಿಯನ್ನು ರಕ್ಷಿತಾಳ ಮನೆಮಂದಿ ಒಪ್ಪಿರಲಿಲ್ಲ. ಇದರಿಂದ ರಕ್ಷಿತಾ, ಕಾರ್ತಿಕ್ ನಂಬರ್ ಬ್ಲಾಕ್ ಮಾಡಿದ್ದಳು. ಇದರಿಂದ ಕೆರಳಿದ ಕಾರ್ತಿಕ್ ಈ ಅತಿರೇಕದ ಹೆಜ್ಜೆ ಇಟ್ಟಿದ್ದಾನೆ.
ಗಂಭೀರವಾಗಿ ಗಾಯಗೊಂಡ ರಕ್ಷಿತಾ, ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಕಳೆದುಕೊಂಡಳು. ಘಟನೆ ಬಳಿಕ ಕಾರ್ತಿಕ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಸ್ಥಳದಲ್ಲಿ ಶವ ಪತ್ತೆಹಚ್ಚಿದರು.
ನಿಮ್ಮ ಪ್ರತಿಕ್ರಿಯೆ ಏನು?