ಪ್ಲೇ ಆಫ್ ಪ್ರವೇಶಿಸಲು ಆರ್ ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು!? ಇದು ಅಷ್ಟು ಸುಲಭವಲ್ಲ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮತ್ತೊಂದು ಲೀಗ್ ಪಂದ್ಯದಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಸುಧಾರಣೆ ಕಂಡಿತು.
ಹೌದು, 2025ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯದ್ಭುತ ಪ್ರದರ್ಶನ ನೀಡುತ್ತಿದೆ. ಆಡಿರುವ 8 ಪಂದ್ಯದಲ್ಲಿ ಐದರಲ್ಲಿ ಗೆಲುವು ಸಾಧಿಸಿ ಮೂರರಲ್ಲಿ ಸೋಲು ಕಂಡಿದೆ.
ಆರ್ಸಿಬಿ ನಿನ್ನೆಯವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದೆ. ಆಡಿರುವ 8 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಂದ್ಹಾಗೆ ಲೀಗ್ ಹಂತದಲ್ಲಿ ಆರ್ಸಿಬಿಗೆ ಇನ್ನೂ 6 ಪಂದ್ಯಗಳಿವೆ. ಆ 6 ಪಂದ್ಯಗಳಲ್ಲಿ 4 ಮ್ಯಾಚ್ ತವರು ಮೈದಾನದಲ್ಲಿಯೇ ನಡೆಯಲಿದೆ. ಈ ಪಂದ್ಯಗಳಲ್ಲಿ ಆರ್ಸಿಬಿ ಕನಿಷ್ಟ ಅಂದರೂ ಮೂರು ಮ್ಯಾಚ್ ಗೆಲ್ಲಲೇಬೇಕಿದೆ. ಹಾಗಿದ್ದರೆ ಮಾತ್ರ ಆರ್ಸಿಬಿ ಪ್ಲೇ-ಆಫ್ ಹಾದಿ ಸುಲಭ ಆಗಲಿದೆ.
ಒಂದು ವೇಳೆ ಮುಂದಿನ ನಾಲ್ಕು ಅಥವಾ ಐದು ಪಂದ್ಯಗಳನ್ನು ಗೆದ್ದರೆ ಆರ್ಸಿಬಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಅಲಂಕರಿಸಲಿದೆ. ಒಂದು ವೇಳೆ ಮೊದಲ ಎರಡು ಸ್ಥಾನದಲ್ಲಿ ಆರ್ಸಿಬಿ ಬಂದರೆ, ಫೈನಲ್ ಪ್ರವೇಶಕ್ಕೆ ಎರಡು ಅವಕಾಶ ಸಿಗಲಿದೆ.
ಆರ್ಸಿಬಿ ಮುಂದಿನ ಪಂದ್ಯಗಳು:-
ಏಪ್ರಿಲ್ 24, ರಾಜಸ್ಥಾನ್ ರಾಯಲ್ಸ್ ವಿರುದ್ಧ, ಚಿನ್ನಸ್ವಾಮಿ ಮೈದಾನ
ಏಪ್ರಿಲ್ 27, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಅರುಣ್ ಜೆಟ್ಲಿ ಸ್ಟೇಡಿಯಂ
ಮೇ 3, ಚೆನ್ನೈ ವಿರುದ್ಧ, ಚಿನ್ನಸ್ವಾಮಿ ಮೈದಾನ
ಮೇ 9, ಲಕ್ನೋ ವಿರುದ್ಧ ಲಕ್ನೋದಲ್ಲಿ ಪಂದ್ಯ
ಮೇ 13, ಹೈದರಾಬಾದ್ ವಿರುದ್ಧ ಚಿನ್ನಸ್ವಾಮಿ ಮೈದಾನ
ಮೇ 17, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ, ಬೆಂಗಳೂರಲ್ಲಿ ಪಂದ್ಯ
ನಿಮ್ಮ ಪ್ರತಿಕ್ರಿಯೆ ಏನು?






