ಫೈನಲ್ ಸ್ಥಾನ ಯಾರಿಗೆ?.. ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ - ಬೆಂಗಳೂರು ಸೆಣಸಾಟ: RCB ಪ್ಲೇಯಿಂಗ್ 11 ಪಟ್ಟಿ ಹೀಗಿದೆ

ಮೇ 29, 2025 - 18:06
 0  9
ಫೈನಲ್ ಸ್ಥಾನ ಯಾರಿಗೆ?.. ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ - ಬೆಂಗಳೂರು ಸೆಣಸಾಟ: RCB ಪ್ಲೇಯಿಂಗ್ 11 ಪಟ್ಟಿ ಹೀಗಿದೆ

ಐಪಿಎಲ್ ನಿರ್ಣಾಯಕ ಪ್ಲೇಆಫ್ಗಳು ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗಲಿವೆ. ಪಂಜಾಬ್ ಕಿಂಗ್ಸ್ ಮತ್ತು ಆರ್ಸಿಬಿ ನಡುವಿನ ಕ್ವಾಲಿಫೈಯರ್ -1 ಪಂದ್ಯ ಚಂಡೀಗಢದ ಹೊಸದಾಗಿ ನವೀಕರಿಸಿದ ಮುಲ್ಲನ್ಪುರ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂಜಾಬ್ ಮತ್ತು ಆರ್ಸಿಬಿ ಲೀಗ್ ಹಂತದಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಅದ್ಭುತ ಜಯಗಳಿಸಿ ಅಗ್ರ -2 ಸ್ಥಾನಗಳನ್ನು ಪಡೆದುಕೊಂಡಿವೆ.

 ಅದೇ ರೀತಿ, ಪಂಜಾಬ್ ಮತ್ತು ಬೆಂಗಳೂರು ತಂಡಗಳು ತಮಗೆ ಸಿಗದ ಐಪಿಎಲ್ ಪ್ರಶಸ್ತಿಯನ್ನು ಹೇಗಾದರೂ ಪಡೆಯಲು ತಮ್ಮ ಕಾಯಿಗಳನ್ನು ನಡೆಸುತ್ತಿವೆ. ಪಂಜಾಬ್ ಕೊನೆಯ ಬಾರಿಗೆ 2014 ರಲ್ಲಿ ಫೈನಲ್ ತಲುಪಿದ್ದರೆ, ಆರ್ಸಿಬಿ 2016 ರಲ್ಲಿ ಫೈನಲ್ ತಲುಪಿದೆ.

ಪ್ಲೇಆಫ್ ಪಂದ್ಯಗಳಿಗೆ ಜಾಕೋಬ್ ಬೆಥಾಲ್ ಬದಲಿಗೆ ನ್ಯೂಜಿಲೆಂಡ್ ಟಿಮ್ ಸೀಫರ್ಟ್ ಆರ್ಸಿಬಿ ಸೇರಿಕೊಂಡಿದ್ದಾರೆ. ಜೋಶ್ ಹೇಜಲ್ವುಡ್ ತಂಡಕ್ಕೆ ಎಂಟ್ರಿಯಾಗಿದ್ದಾರೆ. ಹೇಜಲ್ವುಡ್ ಆಡೋದು ಕನ್ಫರ್ಮ್ ಆಗಿದೆ.

ಆರಂಭಿಕ ಆಟಗಾರರ ಬಗ್ಗೆ ಹೇಳುವುದಾದರೆ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಲೀಗ್ ಹಂತದ ಇವರೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇಂದು ಟಿಮ್ ಸೀಫರ್ಟ್ ಅವರನ್ನು ಮೂರನೇ ಸ್ಥಾನದಲ್ಲಿ ಪ್ರಯತ್ನಿಸಬಹುದು. ನಾಯಕ ರಜತ್ ಪಾಟಿದಾರ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ. ನಂತರ ಜಿತೇಶ್ ಶರ್ಮಾ ಐದನೇ ಸ್ಥಾನದಲ್ಲಿ ಮತ್ತು ಮಾಯಾಂಕ್ ಅಗರ್ವಾಲ್ ಆರನೇ ಸ್ಥಾನದಲ್ಲಿ ಬರಬಹುದು.

ಟಿಮ್ ಡೇವಿಡ್ ಫಿನಿಷರ್ ಪಾತ್ರಕ್ಕಾಗಿ ತಂಡಕ್ಕೆ ಮರಳಬಹುದು. ಅವರು ಏಳನೇ ಕ್ರಮಾಂಕದಲ್ಲಿ ಆಡಬಹುದು ಮತ್ತು ಕೃನಾಲ್ ಪಾಂಡ್ಯ ಎಂಟನೇ ಕ್ರಮಾಂಕದಲ್ಲಿ ಆಡುವುದನ್ನು ಕಾಣಬಹುದು. ಋತುವಿನಲ್ಲಿ ಅಗತ್ಯವಿದ್ದಾಗ ಕೃನಾಲ್ ತಂಡಕ್ಕೆ ಉಪಯುಕ್ತ ಇನ್ನಿಂಗ್ಸ್ ಆಡಿದ್ದಾರೆ. ಬೌಲಿಂಗ್ನಲ್ಲಿ ಜೋಶ್ ಹೇಜಲ್​​ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಸುಯಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿಯಲಿದ್ದಾರೆ.

RCB ಸಂಭಾವ್ಯ ತಂಡಫಿಲ್ ಸಾಲ್ಟ್, ವಿರಾಟ್ ಕೊಹ್ಲಿ , ಟಿಮ್ ಸೀಫರ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್​​ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್.

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow