ಫೋನ್ ಪದೇಪದೇ ಬಿಸಿ ಆಗಲು ಕಾರಣ ಏನು? ಈ ತಪ್ಪುಗಳನ್ನು ಮೊದಲು ನಿಲ್ಲಿಸಿ!

ಕಂಪ್ಯೂಟರ್‌ಗಳನ್ನೇ ಮೀರುವಂಥ ಸಾಮರ್ಥ್ಯವುಳ್ಳ ಸ್ಮಾರ್ಟ್‌ಫೋನ್‌ಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಫೋನ್‌ಗಳ ಪ್ರೊಸೆಸರ್‌ಗಳು, ಬ್ಯಾಟರಿಗಳು ಅತ್ಯಂತ ಶಕ್ತಿಶಾಲಿ ಹಾಗೂ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ, ಸ್ಮಾರ್ಟ್‌ಫೋನ್‌ಗಳ ಮೂಲಕ ಅತಿ ಎನ್ನಬಹುದಾದಂಥ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಆದರೆ, ಅತಿಯಾದ ಬಳಕೆಯಿಂದಾಗಿ ಈ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮುಖ್ಯ ಕಾರಣ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ.
ಇನ್ನೂ ನಿಮ್ಮ ಫೋನ್ ಮತ್ತೆ ಮತ್ತೆ ಬಿಸಿಯಾಗುತ್ತಿದೆ ಅಂದ್ರೆ ನೀವು ಸಣ್ಣ ತಪ್ಪುಗಳನ್ನು ಮಾಡ್ತಿದ್ದೀರಿ ಎಂದರ್ಥ.
ಕಾರಣಗಳೇನು?
ನಿರಂತರವಾಗಿ ಗೇಮ್ ಆಡುವುದು, ವೀಡಿಯೋ ವೀಕ್ಷಿಸುವುದು ಅಥವಾ ಭಾರೀ ಅಪ್ಲಿಕೇಶನ್ಸ್ ಬಳಸುವುದರಿಂದ ಫೋನ್ ಬಿಸಿಯಾಗಬಹುದು. ಇದರಿಂದ ಪ್ರೊಸೆಸರ್ ಮೇಲೆ ಹೆಚ್ಚು ಒತ್ತಡ ಬಿದ್ದು ಬಿಸಿಯಾಗಲು ಕಾರಣವಾಗುತ್ತದೆ.
ಚಾರ್ಜ್ ಮಾಡುವಾಗ ಫೋನ್ ಬಳಸುವುದು: ಅನೇಕರು ಕರೆ ಮಾಡುವಾಗ ಬ್ರೌಸ್ ಮಾಡುವಾಗ ಅಥವಾ ಗೇಮಿಂಗ್ ಮಾಡುವಾಗ ಫೋನ್ ಚಾರ್ಜ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ಬ್ಯಾಟರಿ ಮತ್ತು ಪ್ರೊಸೆಸರ್ ಮೇಲೆ ಲೋಡ್ ಬೀಳುತ್ತದೆ. ಇದರಿಂದ ನಿಮ್ಮ ಫೋನ್ ಬಿಸಿಯಾಗುತ್ತದೆ.
ಅಪ್ಲಿಕೇಶನ್ಸ್ ಮತ್ತು ಗೇಮ್ಸ್ ಬಳಕೆ: ಗ್ರಾಫಿಕ್ಸ್ ಹೊಂದಿರುವ ಆಟಗಳು, ಭಾರೀ ಅಪ್ಲಿಕೇಶನ್ಸ್ ಪ್ರೊಸೆಸರ್, ಜಿಪಿಯು ಮೇಲೆ ಹೆಚ್ಚಿನ ಹೊರೆ ಹಾಕುತ್ತವೆ. ಇದು ಹೆಚ್ಚು ಬಿಸಿಯಾಗಲು ಕಾರಣವಾಗುತ್ತದೆ.
ಬ್ರೈಟ್‌ನೆಸ್: ಸ್ಕ್ರೀನ್ ಬ್ರೈಟ್‌ನೆಸ್ ಹೆಚ್ಚು ಇಟ್ಟುಕೊಂಡರೆ ಬ್ಯಾಟರಿ ಬೇಗ ಖಾಲಿ ಆಗುತ್ತದೆ. ಅಲ್ಲದೇ ಫೋನ್ ಬಿಸಿ ಆಗಲು ಪ್ರಾರಂಭವಾಗುತ್ತದೆ.
ದುರ್ಬಲ ನೆಟ್‌ವರ್ಕ್ ಸಿಗ್ನಲ್ ಇದ್ದಾಗ ಫೋನ್ ನಿರಂತರವಾಗಿ ಸಿಗ್ನಲ್‌ಗಾಗಿ ಹುಡುಕುತ್ತದೆ. ಈ ಕಾರಣದಿಂದಾಗಿ ಬ್ಯಾಟರಿ ಮತ್ತು ಪ್ರೊಸೆಸರ್ ಬಿಸಿಯಾಗುತ್ತದೆ.
ಬಿಸಿ ವಾತಾವರಣದಲ್ಲಿ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಫೋನ್ ಇಡೋದ್ರಿಂದ ಫೋನ್ ಬಿಸಿ ಆಗುತ್ತದೆ.
ಪರಿಹಾರ ಏನು..?
ಚಾರ್ಜ್ ಮಾಡುವಾಗ ಫೋನ್ ಬಳಸಬೇಡಿ, ರೆಸ್ಟ್ ಮೂಡ್ನಲ್ಲಿರಿಸಿ
ಭಾರೀ ಅಪ್ಲಿಕೇಶನ್ಸ್ ಕಡಿಮೆ ಬಳಸಿ
ಫೋನ್ ಹೆಚ್ಚು ಬಿಸಿಯಾಗುತ್ತಿದ್ದರೆ ಬ್ಯಾಕ್ ಕವರ್ ತೆಗೆದುಹಾಕಿ
ತಂಪಾದ ಸ್ಥಳದಲ್ಲಿರಿಸಿ
ಸಾಫ್ಟ್‌ವೇರ್ ಅಪ್ಡೇಟ್ ಮಾಡಿ.
ಸ್ಮಾರ್ಟ್‌ಫೋನ್ ಬಿಸಿಯಾಗುವುದು ಸಹಜ. ಅದರಿಂದ ಅಪಾಯ ಕೂಡ ಇದೆ. ಸಣ್ಣ ತಪ್ಪುಗಳನ್ನು ಸರಿಪಡಿಸುವ ಮೂಲಕ ನಿಮ್ಮ ಫೋನ್ ಹೆಚ್ಚು ಬಿಸಿಯಾಗದಂತೆ ಉಳಿಸಬಹುದು.
ನಿಮ್ಮ ಪ್ರತಿಕ್ರಿಯೆ ಏನು?






