ಫ್ಯಾನ್ಸ್ ಗೆ ಗುಡ್ʼನ್ಯೂಸ್ ಕೊಟ್ಟ ಯಶ್ ಪೋಷಕರು: ಏನಪ್ಪಾ ಅದು ಹೊಸ ಸಮಾಚಾರ!?

ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರು ಸಧ್ಯ ರಾಮಾಯಣ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ಯಶ್ ಸಾಕಷ್ಟು ಹೆಸರು ಮಾಡುತ್ತಿದ್ದಾರೆ.
ಇದೀಗ ನಟ ಯಶ್ ಮಾತ್ರವಲ್ಲದೇ ಅವರ ಕುಟುಂಬದವರು ಕೂಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಹೌದು, ಯಶ್ ಅವರ ಪೋಷಕರು ಸಿನಿಮಾ ನಿರ್ಮಾಣಕ್ಕೆ ರೆಡಿ ಆಗಿದ್ದಾರೆ. ಸಿನಿಮಾ ನಿರ್ಮಾಣಕ್ಕಾಗಿ ಪಿಎ ಅನ್ನೋ ಹೊಸ ಪ್ರೊಡಕ್ಷನ್ ಆರಂಭಿಸಿದ್ದಾರೆ.
ಈ ಸಂಸ್ಥೆಗೆ ಯಶ್ ತಾಯಿ – ತಂದೆಯ ಶುರುವಾಗುವ ಮೊದಲ ಅಕ್ಷರವನ್ನು ಇಡಲಾಗಿದೆ. A ಎಂದರೆ ಅರುಣ್ ಕುಮಾರ್, p ಎಂದರೆ ಪುಷ್ಪಾ. ಈ ಪ್ರೊಡಕ್ಷನ್ ಮೊದಲ ಸಿನಿಮಾಗೆ ಪೃಥ್ವಿ ಅಂಬರ್ ಹೀರೋ ಆಗಿದ್ದಾರೆ. ಆದ್ರೆ ಈ ಬಗ್ಗೆ ಯಶ್ ತಾಯಿ ನಿರ್ಮಾಣ ಸಂಸ್ಥೆ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳಲಿದೆ.
ಸದ್ಯ ನಟ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ರಾಮಾಯಣ’ ಸಿನಿಮಾ ಕೆಲಸಗಳು ಇತ್ತೀಚೆಗೆ ಆರಂಭ ಆಗಿವೆ.
ನಿಮ್ಮ ಪ್ರತಿಕ್ರಿಯೆ ಏನು?






