ಬಂದವರಿಗೆಲ್ಲಾ ಧರ್ಮನ ಮೇಲೆ ಕಣ್ಣು: I like You ಎಂದ ಶೋಭಾ!

ಬಿಗ್ ಬಾಸ್ ಸೀಸನ್ 11 ಒಂದಲ್ಲ ಒಂದು ರೀತಿಯಲ್ಲಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಗ್ ಬಾಸ್ ನಲ್ಲಿರುವ ಕೆಲವು ಸ್ಪರ್ಧಿಗಳು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ. ಅದರಂತೆ ಧರ್ಮ ಕೀರ್ತಿ ಕೂಡ ಒಬ್ಬರು.
ಇವರು ಪ್ರೇಕ್ಷಕರಿಗೆ ಮಾತ್ರವಲ್ಲ. ಅಲ್ಲಿನ ಮಹಿಳಾ ಸ್ಪರ್ಧಿಗಳಿಗೂ ಹೆಚ್ಚು ಇಷ್ಟ ಆಗುತ್ತಾರೆ. ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಮತ್ತು ಶೋಭಾ ಶೆಟ್ಟಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಒಳಗಿರುವ ಸದಸ್ಯರಿಗೆ ಇವರಿಬ್ಬರ ಆಗಮನ ಶಾಕ್ ಕೊಟ್ಟಿದೆ. ಜೋಶ್ನಲ್ಲಿರುವ ರಜತ್ ಮತ್ತು ಶೋಭಾಗೆ ‘ಬಿಗ್ ಬಾಸ್’ ಟಾಸ್ಕ್ ಒಂದು ಆಡಿಸಿದರು. ಮನೆಯಲ್ಲಿರುವ ಸ್ಪರ್ಧಿಗಳ ಆಟ ಕುರಿತು ಇಬ್ಬರಿಗೂ ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ, ಧರ್ಮಗೆ ಐ ಲೈಕ್ ಯೂ ಎಂದು ಶೋಭಾ ಶೆಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.
ಮನೆಯ ಗಾರ್ಡನ್ ಏರಿಯಾದಲ್ಲಿ ರಜತ್ ಮತ್ತು ಶೋಭಾ ಅವರನ್ನು ನಿಲ್ಲಿಸಿದ ಬಿಗ್ ಬಾಸ್, ಇಬ್ಬರಿಗೂ ಪ್ರಶ್ನೆಗಳು ಕೇಳುತ್ತಾ ಹೋದರು. ಉತ್ತರ ಹೇಳಿದ ಬಳಿಕ ಇಬ್ಬರು ಕೂಡ ತೆಂಗಿನಕಾಯಿಯನ್ನು ಒಡೆಯಬೇಕು ಎಂದರು. ಅಂದರಂತೆ, ಈ ಮನೆಯಲ್ಲಿ ಯಾರ ಮುಖವಾಡವನ್ನು ಕಳಚಿ, ಅವರ ಅಸಲಿ ಮುಖವನ್ನು ಬಯಲಿಗೆ ಎಳೆಯುತ್ತೀರಿ? ಎಂದು ಶೋಭಾಗೆ ಬಿಗ್ ಬಾಸ್ ಪ್ರಶ್ನೆ ಕೇಳಿದರು. ನನ್ನ ಪ್ರಕಾರ, ಗೌತಮಿ ಇನ್ನೂ ಮುಖವಾಡ ಹಾಕಿಕೊಂಡಿದ್ದಾರೆ. ಅವರ ಅಸಲಿ ಮುಖವನ್ನು ನಾನು ಬಯಲು ಮಾಡಬಹುದು ಎನ್ನುತ್ತಾ ತೆಂಗಿನಕಾಯಿಯನ್ನು ಶೋಭಾ ಒಡೆದಿದ್ದಾರೆ.
ಆ ನಂತರ ನೀವು ಈ ಮನೆಯ ಯಾವ ಸದಸ್ಯರ ಜೊತೆ ಸ್ನೇಹದಿಂದ ಇರಲು ಬಯಸುತ್ತೀರಿ? ಶೋಭಾಗೆ ಪ್ರಶ್ನೆ ಎದುರಾಯಿತು. ಇರೋದ್ರಲ್ಲಿ ಒಬ್ಬರು ನನಗೆ ಇಂಪ್ರೆಸ್ ಎನ್ನಿಸಿದರು. ಅದು ಧರ್ಮ. ನಾನು ಒಳಗೆ ಲಗೇಜ್ ತರುವಾಗ ಅವರು ಬಂದು ಅದನ್ನು ತೆಗೆದುಕೊಂಡರು. ಅವರು ನಡೆದುಕೊಂಡ ರೀತಿ ನನಗೆ ಇಷ್ಟ ಆಯ್ತು. ಐ ಲೈಕ್ ಯೂ ಧರ್ಮ ಎಂದರು. ಶೋಭಾರ ಮಾತಿಗೆ ಧರ್ಮ ನಾಚಿ ನೀರಾದರು
ನಿಮ್ಮ ಪ್ರತಿಕ್ರಿಯೆ ಏನು?






