ಕುಟುಂಬದಲ್ಲಿ ತುರ್ತು ಸ್ಥಿತಿ: ಏಕಾಏಕಿ ಬಿಗ್ ಮನೆಯಿಂದ ಹೊರ ಬಂದ ಗೋಲ್ಡ್ ಸುರೇಶ್! 

ಡಿಸೆಂಬರ್ 15, 2024 - 17:28
 0  10
ಕುಟುಂಬದಲ್ಲಿ ತುರ್ತು ಸ್ಥಿತಿ: ಏಕಾಏಕಿ ಬಿಗ್ ಮನೆಯಿಂದ ಹೊರ ಬಂದ ಗೋಲ್ಡ್ ಸುರೇಶ್! 

     

ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್‌ ಆಗಿದ್ದ ಗೋಲ್ಡ್‌ ಸುರೇಶ್‌ ಮನೆಯಿಂದ ಆಚೆ ಬಂದಿರುವ ಸುದ್ದಿ ಬಹಿರಂಗವಾಗಿದೆ. 

 ಈ ಬಗ್ಗೆ ಕಲರ್ಸ್‌ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ.

ಗೋಲ್ಡ್‌ ಸುರೇಶ್‌ ಅವರ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಅವರ ಅವಶ್ಯಕತೆ ಬಿಗ್‌ ಬಾಸ್‌ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಗೋಲ್ಡ್‌ ಸುರೇಶ್‌ ಹೆಚ್ಚು ತಡ ಮಾಡದೇ ನಿಮ್ಮ ವಸ್ತುಗಳನ್ನು ಪ್ಯಾಕ್‌ ಮಾಡಿಕೊಂಡು ಹೊರಗೆ ಬನ್ನಿ ಎಂದು ಬಿಗ್‌ ಬಾಸ್‌ ಆದೇಶಿಸಿದ್ದಾರೆ.

ಈ ವಾರ ಗೋಲ್ಡ್ ಸುರೇಶ್ ಕ್ಯಾಪ್ಟನ್ ಆಗಿದ್ದರು. ಅಲ್ಲದೇ, ಅವರಿಗೆ ‘ಉತ್ತಮ’ ಪಟ್ಟ ಕೂಡ ಸಿಕ್ಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಗಿದೆ. ‘ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ. ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬನ್ನಿ’ ಎಂದು ಸೂಚನೆ ನೀಡಲಾಗಿದೆ.

ಈ ವಿಷಯ ಕೇಳಿ ಮನೆ ಮಂದಿ ಕಣ್ಣೀರು ಹಾಕಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಗೋಲ್ಡ್‌ ಸುರೇಶ್‌ ಅವರು ಅತ್ಯಂತ ಪ್ರಬಲ ಸ್ಪರ್ಧಿಯಾಗಿದ್ದರು. ಮೊದಲಿಗೆ ಅಷ್ಟಾಗಿ ಆಟವನ್ನು ಚೆನ್ನಾಗಿ ನಿಭಾಯಿಸದೇ ಇದ್ದರೂ ಬರಬರುತ್ತಾ ಸಖತ್‌ ಆಗಿಯೇ ಆಟ ಆಡಿದ್ದರು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow