ಬಾಲಿವುಡ್ ಹೀರೋನೊಂದಿಗೆ ಶ್ರೀಲೀಲಾ ಲವ್ವಿ-ಡವ್ವಿ! ಅನುಮಾನ ಹೆಚ್ಚಿಸಿದ ನಟನ ತಾಯಿಯ ಹೇಳಿಕೆ

ಸ್ಯಾಂಡಲ್ವುಡ್ನ ಸುಂದರಿ ಶ್ರೀಲೀಲಾ ಗ್ಲಾಮರಸ್ ಆಗಿದ್ದಾರೆ. ಮಾದಕವಾಗಿಯೂ ಕಾಣಿಸುತ್ತಾರೆ. ಆದರೆ ಕ್ಯೂಟ್ ಮೇಸ್ ಇರೋ ಈ ಮುದ್ದು ಚೆಲುವೆಯ ಬೇಡಿಕೆಯ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಲ್ಲೂ ಟಾಲಿವುಡ್ನಲ್ಲಿ ಶ್ರೀಲೀಲಾ ಟಾಪ್ ಅಲ್ಲಿಯೇ ಸದ್ಯ ಓಡ್ತಿದ್ದಾರೆ. ಭರಾಟೆ ಬೆಡಗಿ ಶ್ರೀಲೀಲಾ ಸದ್ಯ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಟಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಾನೇ ಇದ್ದಾರೆ. ಇಲ್ಲಿಯ ಸೂಪರ್ ಸ್ಟಾರ್ಗಳ ಜೊತೆಗೆ ಸಿನಿಮಾ ಮಾಡ್ತಾನೇ ಕನ್ನಡದ ನಂಟು ಉಳಿಸಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಬಿಟೌನ್ ಹೀರೋ ಕಾರ್ತಿಕ್ ಆರ್ಯನ್ರನ್ನು ಶ್ರೀಲೀಲಾ ಪ್ರೀತಿಸ್ತಾ ಇದ್ದಾರೆ ಅನ್ನೋದು ಸಖತ್ ಸುದ್ದಿ ಆಗಿದೆ. ಇತ್ತೀಚೆಗೆ ನಡೆದ ಅವಾರ್ಡ್ ಫಂಕ್ಷನ್ನಲ್ಲಿ ಕಾರ್ತಿಕ್ ಆರ್ಯನ್ ತಾಯಿಗೆ ಯಾವ ಥರದ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ‘ಡಾಕ್ಟರ್ ಆಗಿರುವ ಸೊಸೆ ಬೇಕು’ ಎಂದಿದ್ದರು. ಕಾರ್ತಿಕ್ ಆರ್ಯನ್ ತಾಯಿ ಆಡಿದ ಮಾತು ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡಿದೆ.
ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿಕೊಂಡಿದ್ದಾರೆ. ಅಲ್ಲಿ ಕಾರ್ತಿಕ್ ತಾಯಿ ‘ಡಾಕ್ಟರ್ ಸೊಸೆ ಬೇಕು’ ಎಂದ ಕೂಡಲೇ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿದೆ. ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದ್ದರೂ, ಈ ಜೋಡಿ ಮಾತ್ರ ಏನು ಪ್ರತಿಕ್ರಿಯೆ ನೀಡುತ್ತಿಲ್ಲ. ಅಂದಹಾಗೆ, ಅನುರಾಗ್ ಬಸು ನಿರ್ದೇಶನದ ‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. 2025ರ ದೀಪಾವಳಿಯಂದು ಈ ಸಿನಿಮಾ ರಿಲೀಸ್ ಆಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






