ಬಿಗ್ ಬಾಸ್ ಮನೆಯಲ್ಲಿ ಧನು-ರಜತ್ ಕಿರಿಕ್! ಕೈ-ಕೈ ಮಿಲಾಯಿಸೋ ಹಂತಕ್ಕೋದ ಸ್ಪರ್ಧಿಗಳು!

ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್, ಆರಂಭದಿಂದಲೂ ಒಂದು ವಿಚಾರಕ್ಕೆ ನೆಗೆಟಿವ್ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದಾರೆ, ಅದೇ ಪದಬಳಕೆ! ಹೌದು, ಮನೆಗೆ ಎಂಟ್ರಿ ಕೊಟ್ಟ ದಿನವೇ 'ಸೆಡೆ' ಎಂದು 'ಗೋಲ್ಡ್' ಸುರೇಶ್ಗೆ ಬೈದಿದ್ದ ರಜತ್, ಅದು ದೊಡ್ಡ ಗಲಾಟೆ ಆಗುವುದಕ್ಕೆ ಕಾರಣವಾಗಿದ್ದರು. ಇದೀಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ರಜತ್ ಹಾಗೂ ಧನರಾಜ್ ಅವರ ನಡುವೆ ಕಿರಿಕ್ ನಡೆಯುತ್ತಲೇ ಇದೆ. ಅದೇ ರೀತಿ ಇಂದು ಒಂದು ಹಂತಕ್ಕೆ ಮುಂದೆ ಹೋಗಿ ರಜತ್ ಹಾಗೂ ಧನರಾಜ್ ನಡುವೆ ಮಾರಾಮಾರಿ ನಡೆದಿದೆ.
ಈ ವಾರದ ಕಳಪೆ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದ್ದು, ಉಳಿದ ಸ್ಪರ್ಧಿಗಳು ಇಬ್ಬರ ನಡುವಿನ ಮಾರಾಮಾರಿ ತಪ್ಪಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆ ನೀಡುವ ಪ್ರಕ್ರಿಯೆ ನಡೆಯುತ್ತಿತ್ತು. ಅಂತೆಯೇ ಧನು ಅವರು ಕಳಪೆಗೆ ರಜತ್ ಅವರ ಹೆಸರನ್ನು ಹೇಳಿದ್ದಾರೆ. ಅದಕ್ಕೆ ಕಾರಣ ಕೂಡ ಕೊಟ್ಟಿದ್ದಾರೆ. ನನ್ನ ಕಳಪೆ ಬಂದುಬಿಟ್ಟು ರಜತ್. ಕೈಕಾಲು ಮುರೀತಿನಿ ಅಂತಾರೆ, ಬೆದರಿಕೆ ಹಾಕೋ ಥರಾ ಅವರ ಮಾತುಗಳು ಇರುತ್ತದೆ ಎಂದು ಕಿಡಿಕಾರಿದ್ದಾರೆ.
ಧನು ಮಾತಿಗೆ ಅಲ್ಲೇ ಕೌಂಟರ್ ನೀಡುವ ರಜತ್.. ಧನು ಜೊತೆಗೆ ನಡೆದ ಒಂದು ಪ್ರಸಂಗವನ್ನು ರಜತ್ ನೆನಪಿಸಿಕೊಂಡರು. ಅಂದು ನೀವು ನನ್ನ ಮುಖವನ್ನು ಟಚ್ ಮಾಡಿದಾಗ ಅದು, ಸಾಫ್ಟ್ ಆಗಿರಲಿಲ್ಲ. ಅದಕ್ಕೆ ಧನು, ‘ನನಗೆ ಗೊತ್ತು, ನಾನು ಎಷ್ಟು ಸಾಫ್ಟ್ ಆಗಿ ಮಾಡಿದ್ದೀನಿ’ ಎಂದು ಅಂತಾ ಹೇಳ್ತಾರೆ. ಅದಕ್ಕೆ ‘ಅಂದರೆ ಮುಗು ಮುಟ್ಟಿದ ಹಾಗೆ ಮುಟ್ಟಿರೋದಾ?’ ಅಂತಾ ರಜತ್ ಪ್ರಶ್ನೆ ಮಾಡ್ತಾರೆ. ‘ನಾನೇನು ನಿನ್ನೆ ಮೊನ್ನೆ ಹುಟ್ಟಿ ಬಿಗ್ಬಾಸ್ಗೆ ಬಂದಿಲ್ಲ. ನನಗೆ ಬರ್ತಿರೋ ಸಿಟ್ಟಿಗೆ ನಿನ್ನ ಮಕ-ಮೂತಿ ಒಡೆದು ಹಾಕಿಯೇ ಆಚೆ ಹೋಗಬೇಕಾಗಿತ್ತು ಎನ್ನುತ್ತಾರೆ ರಜತ್
ಅದಕ್ಕೆ ಕೋಪಿಸಿಕೊಂಡ ಧನು, ಅದೇನೋ ಮುಕ-ಮೂತಿ ಒಡೆಯುತ್ತೀನಿ ಅಂದ್ರಲ್ಲ. ಹೊಡೆಯಿರಿ ನೋಡೋಣ ಎನ್ನುತ್ತಾರೆ. ಅದಕ್ಕೆ ನಿಂಗೆ ತಾಖತ್ತಿದ್ದರೆ ನನ್ನ ಮುಟ್ಟಿ ತೋರಿಸೋ ಎಂದು ಧನು ಮೇಲೆ ರಜತ್ ಮತ್ತಷ್ಟು ಗರಂ ಆಗ್ತಾರೆ. ಅಷ್ಟಕ್ಕೂ ಸುಮ್ಮನಾಗದ ಧನು ಹೊಡೆಯುತ್ತೀರಾ.. ಹೊಡೆಯಿರಿ.. ಎಂದಿದ್ದಾರೆ. ರೊಚ್ಚಿಗೇಳುವ ರಜತ್, ಧನು ಮೇಲೆ ಕೈಮಾಡಲು ಹೋಗಿದ್ದಾರೆ. ಅಷ್ಟರಲ್ಲೇ ಉಳಿದ ಸ್ಪರ್ಧಿಗಳು ತಡೆಯುವ ಪ್ರಯತ್ನ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






