ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ: ಕ್ಯಾಪ್ಟನ್ ಹಂಸಾ ಮೇಲೆ ಕಣ್ಣಾಕಿದ ಜಗದೀಶ್!

ಲಾಯರ್ ಜಗದೀಶ್, ಇವರ ಹೆಸರು ಕೇಳಿದ್ರೆ ಬಿಗ್ ಬಾಸ್ ಮನೆಯಲ್ಲಿ ತಕ್ಷಣ ನೆನಪಿಗೆ ಬರೋದು ಜಗಳ, ಕಿರಿಕ್, ಲಾ ಪಾಯಿಂಟ್ ಗಳು ಸಾಮಾನ್ಯ. ಆದರೆ ಇದೇ ಜಗದೀಶ್ ಗೆ ಲವ್ ಆಗಿದೆ ಅಂದ್ರೆ ನಂಬ್ತೀರಾ!? ನಿಜಕ್ಕೂ ನಂಬಲೇಬೇಕು.
ಬಿಗ್ ಬಾಸ್’ನಲ್ಲಿ ಕ್ಯಾಪ್ಟನ್ ಹಂಸಗೆ ಟಾರ್ಚರ್ ಕೊಡಬೇಕು ಎಂದು ಜಗದೀಶ್ ಅವರು ನಿರ್ಧರಿಸಿ ಆಗಿದೆ. ಈ ಕಾರಣಕ್ಕೆ ಅವರಿಗೆ ನಿರಂತರವಾಗಿ ಗೋಳುಹೊಯ್ದುಕೊಳ್ಳುತ್ತಿದ್ದಾರೆ. ಅಕ್ಟೋಬರ್ 7ರ ಎಪಿಸೋಡ್ನಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದರು. ಈಗ ಅಕ್ಟೋಬರ್ 8ರ ಎಪಿಸೋಡ್ ಫನ್ನಿ ಆಗಿ ಮೂಡಿ ಬಂದಿದೆ.
ನಟಿ ಹಂಸಾ ಮನೆಯ ನಾಯಕತ್ವ ವಹಿಸಿದ್ದು, ಇದೀಗ ಲಾಯರ್ ಜಗದೀಶ್ ಅವರ ಕಾಲೆಳೆಯಲು ಶುರು ಮಾಡಿದ್ದಾರೆ. ಅಷ್ಟೇ ಏಕೆ ‘ಐ ಲವ್ ಯೂ ಕ್ಯಾಪ್ಟನ್’ ಎಂದು ಹೇಳಿದ್ದಾರೆ.
ಲಾಯರ್ ಜಗದೀಶ್ ಕ್ಯಾಪ್ಟನ್ ಹಂಸಾ ಅವರಿಗೆ ಕೋಪಿಸಿಕೊಳ್ಳುವಂತೆ ಮಾಡಿದ್ದಾರೆ. ಈ ವೇಳೆ ತಮಾಷೆಯ ಜೊತೆಗೆ ಕಾಲೆಳೆಯುತ್ತಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳನ್ನು ತಂದು ಕೊಡುವಂತೆ ಆಗ್ರಹಿಸಿದ್ದಾರೆ. ಅಷ್ಟು ಮಾತ್ರವಲ್ಲ ನನಗೆ ಚಿಕನ್ ಮಂಚೂರಿ ಬೇಕು ಎಂದು ಜಗದೀಶ್ರವರು ಹಂಸಾ ಬಳಿ ಕೇಳಿದ್ದಾರೆ. ತಂದಿಲ್ಲ ಅಂದ್ರೆ ನಿನ್ನನ್ನೇ ಮಾಡ್ತೀನಿ ನೋಡ್ತಿರು ಎಂದಿದ್ದಾರೆ.
ಇದಲ್ಲದೆ ಹಂಸಾ ಅವರಿಗೆ ಉಪೇಂದ್ರ ನಟನೆಯ ಗೋಕರ್ಣ ಸಿನಿಮಾದ ‘ಮಾರಿ ಕಣ್ಣು ಹೋರಿ ಮ್ಯಾಲೆ’ ಹಾಡು ಹಾಡಿದ್ದಾರೆ. ನನ್ನ ಕಣ್ಣು ಅವಳ ಮೇಲೆ ಅವಳ ಕಣ್ಣು ನನ್ನ ಮೇಲೆ ಎಂದಿದ್ದಾರೆ. ಇದಲ್ಲದೆ, ಹಂಸಾ ಅವರನ್ನು ಹಂಸ್ ಎಂದು ಕರೆದಿದ್ದಾರೆ.
ಹಂಸಾಗೆ ನಾನು ನಿಮ್ಮ ಫ್ಯಾನ್ ಎಂದು ಜಗದೀಶ್ ಹೇಳಿದ್ದಾರೆ. ಮುಂಗಾರು ಮಳೆ ಸಿನಿಮಾದಂತೆ ಹಂಸಾರವರು ಜಗದೀಶ್ ಎದೆ ಮೇಲೆ ಕಾಲಿಟ್ಟು ನಡೆದಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






