ಒಳ ಮೀಸಲಾತಿಯಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ: ಸಂಸದ ಬಸವರಾಜ ಬೊಮ್ಮಾಯಿ

ಅಕ್ಟೋಬರ್ 8, 2024 - 21:00
ಅಕ್ಟೋಬರ್ 8, 2024 - 13:24
 0  8
ಒಳ ಮೀಸಲಾತಿಯಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ: ಸಂಸದ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಶಿಫಾರಸ್ಸು ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರದಲ್ಲಿ ನಮ್ಮದು ಸ್ಪಷ್ಟ ನಿಲುವಿದೆ. ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಶಿಫಾರಸ್ಸು ಮಾಡಿದ್ದೇವೆ. ಕಾಂಗ್ರೆಸ್ ನವರು ಡಬಲ್ ಗೇಮ್ ಆಡುತ್ತಿದ್ದಾರೆ. ಮೊದಲು ಸಂವಿಧಾನ‌ ತಿದ್ದುಪಡಿ ಆದ ಮೇಲೆ ಮಾಡುತ್ತೇವೆ ಅಂತ ಕಣ್ಣೊರೆಸುವ ತಂತ್ರ ಮಾಡಿದರು. ಈಗ ಸುಪ್ರೀಂ ಕೋರ್ಟ್  ಆದೇಶ ಬಂದ ಮೇಲೆ ಚರ್ಚೆ ಮಾಡುತ್ತೇವೆ ಅಂತ ಹೇಳುತ್ತಾರೆ. ಅವರಿಗೆ ದಲಿತರಾಗಲಿ ಹಿಂದುಳಿದವರಾಗಲಿ ಅಭಿವೃದ್ಧಿ ಆಗುವುದು ಬೇಡ ಎಂದರು.

ಜಾತಿ ಗಣತಿ ವಿಚಾರದಲ್ಲಿಯೂ ಅಷ್ಟೆ, ಜಾತಿ ಗಣತಿ ವರದಿಯನ್ನು ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸ್ವೀಕಾರ ಮಾಡಲಿಲ್ಲ ಅಂತ ಹೇಳಿದ್ದಾರೆ. ಕಾಂತರಾಜು ಅವರು ಸಿದ್ದರಾಮಯ್ಯ ಅವರ ಅವಧಿಯಲ್ಲಿ  2017 ರಲ್ಲಿಯೇ ವರದಿ ನೀಡಿದ್ದಾರೆ.  ಹಿಂದುಳಿಸ ವರ್ಗದ ಚಾಂಪಿಯನ್ ಅಂತ ಹೇಳಿಕೊಳ್ಳುವವರು ಆಗ ಯಾಕೆ ಒಪ್ಪಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.  ಕಾಂತರಾಜ್ ಅವರು ಅಧ್ಯಯನ ಮಾಡಿ ವರದಿ ಸಿದ್ದಪಡಿಸಿದ್ದರು.

ಜಯಪ್ರಕಾಶ್ ಹೆಗಡೆ ಜಿಲ್ಲಾಧಿಕಾರಿಗಳಿಂದ ಮಾಹಿತಿ  ಪಡೆದು ವರದಿ ತಿದ್ದುಪಡಿ ಮಾಡಿಸಿಕೊಂಡಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಹಿಂದುಳಿದ ವರ್ಗದವರ ಅಭಿವೃದ್ಧಿ  ಆಗಬೇಕು. ಇದು ಗೊಂದಲದ ಗೂಡಾಗಬಾರದು, ಸಮಾಜದಲ್ಲಿ ಗೊಂದಲ ಉಂಟು ಮಾಡಬಾರದು. ಸಿಎಂ ತಮ್ಮ ಮೇಲೆ ಮುಡಾ ಹಗರಣದ ಆರೋಪ ಬಂದ ಕೂಡಲೆ ಅದರಿಂದ ದಾರಿ ತಪ್ಪಿಸಲು ಜಾತಿ ಗಣತಿ ವರದಿ ಪ್ರಸ್ತಾಪ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ  ಎಂದು ಪ್ರಶ್ನಿಸಿದರು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow