Bank Holidays: ಏಪ್ರಿಲ್‌ ತಿಂಗಳು ಎಷ್ಟು ದಿನ ಬ್ಯಾಂಕ್‌ ಕ್ಲೋಸ್‌.? ಯಾವ ಹಬ್ಬಗಳ ಇವೆ..? ಇಲ್ಲಿದೆ ಮಾಹಿತಿ

ಎಪ್ರಿಲ್ 1, 2025 - 08:02
 0  12
Bank Holidays: ಏಪ್ರಿಲ್‌ ತಿಂಗಳು ಎಷ್ಟು ದಿನ ಬ್ಯಾಂಕ್‌ ಕ್ಲೋಸ್‌.? ಯಾವ ಹಬ್ಬಗಳ ಇವೆ..? ಇಲ್ಲಿದೆ ಮಾಹಿತಿ

2025ರ ನಾಲ್ಕನೇ ತಿಂಗಳು ಬಂದೆ ಬಿಟ್ಟಿತು. ಈ ತಿಂಗಳಿನಲ್ಲಿ ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 2025 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಆರ್ ಬಿಐ ರಜಾ ದಿನಗಳ ಪಟ್ಟಿ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳು 15 ದಿನಗಳು ಕಾಲ ಮುಚ್ಚಲ್ಪಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಏಪ್ರಿಲ್ ನಲ್ಲಿ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ಒಮ್ಮೆ ರಜಾದಿನಗಳ ಪಟ್ಟಿಯನ್ನು ಗಮನಿಸಿ.

2025ರ ಏಪ್ರಿಲ್​​ನಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಇರುವ ರಜಾ ದಿನಗಳು

  • ಏಪ್ರಿಲ್ 1, ಮಂಗಳವಾರ: ಸರಹುಲ್ ಹಬ್ಬ (ಜಾರ್ಖಂಡ್​​ನಲ್ಲಿ ರಜೆ)
  • ಏಪ್ರಿಲ್ 5, ಶನಿವಾರ: ಬಾಬು ಜಗಜೀವನ್ ರಾಮ್ ಜಯಂತಿ (ತೆಲಂಗಾಣದಲ್ಲಿ ರಜೆ)
  • ಏಪ್ರಿಲ್ 6: ಭಾನುವಾರದ ರಜೆ
  • ಏಪ್ರಿಲ್ 10, ಗುರುವಾರ: ಮಹಾವೀರ್ ಜಯಂತಿ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 12: ಎರಡನೇ ಶನಿವಾರದ ರಜೆ
  • ಏಪ್ರಿಲ್ 13: ಭಾನುವಾರದ ರಜೆ
  • ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ, ವಿಷು, ಬಿಹು, ತಮಿಳು ಹೊಸ ವರ್ಷ (ಕರ್ನಾಟಕ, ತಮಿಳುನಾಡು ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 15, ಮಂಗಳವಾರ: ಬಂಗಾಳ ಹೊಸ ವರ್ಷ, ಹಿಮಾಚಲ ದಿನ, ಬೋಹಾಗ್ ಬಿಹು (ಅಸ್ಸಾಂ, ಪಶ್ಚಿಮ ಬಂಗಾಳ, ಅರುಣಾಚಲಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 18, ಶುಕ್ರವಾರ: ಗೂಡ್ ಫ್ರೈಡೆ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 20: ಭಾನುವಾರದ ರಜೆ
  • ಏಪ್ರಿಲ್ 21, ಸೋಮವಾರ: ಗರಿಯಾ ಪೂಜೆ (ತ್ರಿಪುರಾದಲ್ಲಿ ರಜೆ)
  • ಏಪ್ರಿಲ್ 26: ನಾಲ್ಕನೇ ಶನಿವಾರದ ರಜೆ
  • ಏಪ್ರಿಲ್ 27: ಭಾನುವಾರದ ರಜೆ
  • ಏಪ್ರಿಲ್ 29, ಮಂಗಳವಾರ: ಭಗವಾನ್ ಶ್ರೀ ಪರಷುರಾಮ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
  • ಏಪ್ರಿಲ್ 30, ಬುಧವಾರ: ಬಸವಜಯಂತಿ (ಕರ್ನಾಟಕ ರಾಜ್ಯದಲ್ಲಿ ರಜೆ)

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow