ಬಿಗ್ ಬಾಸ್ ಮನೆಯಿಂದ ಹೊರ ಬಂದ್ರಾ ಐಶ್ವರ್ಯ ಸಿಂಧೋಗಿ..!

‘ಬಿಗ್ ಬಾಸ್ ಸೀಸನ್ 11’ರ ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು 90ನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಿರುವಾಗ ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಶಾಕ್ ಕೊಟ್ಟಿದೆ ಎನ್ನಲಾಗ್ತಿದೆ. ದೊಡ್ಮನೆಯಿಂದ ಸ್ಟ್ರಾಂಗ್ ಸ್ಪರ್ಧಿಯೇ ಹೊರ ನಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೌದು ಬಿಗ್ ಬಾಸ್ ಕನ್ನಡ ಸೀಸನ್ 11 ಈ ವಾರ ಐಶ್ವರ್ಯ ಸಿಂಧೋಗಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಐಶ್ವರ್ಯ ಸಿಂಧೋಗಿ ನೇರವಾಗಿ ಮುಖದ ಮೇಲೆಯೇ ಮಾತನಾಡುತ್ತಿದ್ದರು. ಮೊದಲ ದಿನದಿಂದಲೂ ತಮ್ಮ ದಿಟ್ಟ ಮಾತುಗಳಿಂದಲೇ ಜನರ ಪ್ರೀತಿ ಗಳಿಸಿದ್ದರು. ಐಶ್ವರ್ಯ ಸಿಂಧೋಗಿ ಬ್ಯೂಟಿಗೆ ಮನಸೋತ ಹುಡುಗರು ಅನೇಕರು. ಐಶ್ವರ್ಯ ಸಿಂಧೋಗಿ ಈ ವಾರ ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಬ್ಬರು ಎಲಿಮಿನೇಷನ್ ಆಗೋದು ಫಿಕ್ಸ್ ಆಗಿದೆ. ಪ್ರೇಕ್ಷಕರ ವೋಟಿಂಗ್ ಹಾಗೂ ಬಿಗ್ ಬಾಸ್ ಸದಸ್ಯರ ಗೇಮ್ ಪ್ಲಾನ್ಗೆ ಈಗಾಗಲೇ ಒಬ್ಬರು ತನ್ನ ಆಟ ಮುಗಿಸಿ ಹೊರ ನಡೆದಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಸದಸ್ಯರು ನಾಮಿನೇಟ್ ಆಗಿದ್ದರು. ಕ್ಯಾಪ್ಟನ್ ಭವ್ಯ ಹಾಗೂ ರಜತ್ ಅವರು ಮಾತ್ರ ಸೇಫ್ ಆಗಿದ್ದರು. ಅದರಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಧನರಾಜ್ ಆಚಾರ್ಯ, ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ ಲಂಬಾಣಿ, ಉಗ್ರಂ ಮಂಜು ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಧನರಾಜ್ ಹಾಗೂ ಹನುಮಂತ ಸೇಫ್ ಆಗಿದ್ದಾರೆ. ಕ್ಯಾಪ್ಟನ್ ಭವ್ಯಾ ಗೌಡ ಅವರಿಂದ ಐಶ್ವರ್ಯಾ ಅವರು ನೇರವಾಗಿ ನಾಮಿನೇಟ್ ಆಗಿದ್ದು ಹಾಟ್ ಸೀಟ್ನಲ್ಲಿ ಕುಳಿತಿದ್ದಾರೆ. ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ ಎಪಿಸೋಡ್ನಲ್ಲಿ ಎಲಿಮಿನೇಷನ್ ಯಾರು ಆಗುತ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






