ಬೆಂಗಳೂರಿನಲ್ಲಿ ನಾಯಿಯ ಮೇಲೆ ಅತ್ಯಾಚಾರ ಎಸಗಿದ ಕಾಮಾಂಧರು..!

ಅಕ್ಟೋಬರ್ 17, 2025 - 22:01
 0  20
ಬೆಂಗಳೂರಿನಲ್ಲಿ ನಾಯಿಯ ಮೇಲೆ ಅತ್ಯಾಚಾರ ಎಸಗಿದ ಕಾಮಾಂಧರು..!

ಬೆಂಗಳೂರು: ಲೈಂಗಿಕ ಕಿರುಕುಳ ಕೇವಲ ಹೆಣ್ಣಿ ಮೇಲೆ ಮಾತ್ರ ಆಗುತ್ತಿತ್ತು.. ಈಗ ಪ್ರಾಣಿಗಳ ಮೇಲೂ ಅತ್ಯಾಚಾರ ನಡೆಯುತ್ತಿದೆ. ಕಾಮಾಂಧನೊಬ್ಬ ಮಾಡಿದ ಕೃತ್ಯ ಮಾನವ ಸಾಮಜವೇ ತಲೆತಗ್ಗಿಸುವಂತಿದೆ. ನಾಲ್ವರು ವಿಕೃತ ಕಾಮುಕರು ಬೀದಿ ನಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿಸುವ ಪೈಶಾಚಿಕ ಕೃತ್ಯ ಬೆಂಗಳೂರಿನ ಕೊಡತಿ ಗ್ರಾಮದಲ್ಲಿ ನಡೆದಿದೆ.

ಅ.13ರಂದು ರಾತ್ರಿ 10:30ರ ಸುಮಾರಿಗೆ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ ಬಳಿಕ ಬೆಳಕಿಗೆ ಬಂದಿದೆ. ನಾಯಿ ಕಾಣೆಯಾಗಿರುವುದಾಗಿ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದರು. ಬಳಿಕ ಬೆಳ್ಳಂದೂರು ಠಾಣೆಯಲ್ಲಿ ನಾಯಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂದು ದೂರು ದಾಖಲಾಗಿತ್ತು.

ಮಹಿಳೆಯೊಬ್ಬರು ನಾಯಿಗೆ ವಾಕ್‌ ಮಾಡಿಸುತ್ತಿದ್ದರು. ಈ ವೇಳೆ ಮತ್ತೊಂದು ನಾಯಿ ಕಿರುಚಿದ ಶಬ್ಧ ಕೇಳಿಬಂದಿದೆ. ಅಲ್ಲಿ ಹೋಗಿ ನೋಡಿದಾಗ ಪೈಶಾಚಿಕ ಕೃತ್ಯ ನಡೆದಿರೋದು ಬೆಳಕಿಗೆ ಬಂದಿದೆ. ಗುರುವಾರ ಮಧ್ಯಾಹ್ನ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow