ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಮೂರು ದಿನ ಭಾರಿ ಮಳೆ! ಹವಾಮಾನ ಇಲಾಖೆ 

ಸೆಪ್ಟೆಂಬರ್ 12, 2025 - 12:02
 0  11
ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಮೂರು ದಿನ ಭಾರಿ ಮಳೆ! ಹವಾಮಾನ ಇಲಾಖೆ 

ಬೆಂಗಳೂರು: ರಾಜ್ಯದಲ್ಲಿ ಮಳೆ ಮತ್ತೆ ಚುರುಕುಗೊಂಡಿದ್ದು, ಗುರುವಾರದಿಂದ ಹಲವೆಡೆ ಮಳೆಯಾಗಿದೆ. ಹವಾಮಾನ ಇಲಾಖೆ ಎಚ್ಚರಿಕೆ ಹೊರಡಿಸಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಮಳೆ ಜೋರಾಗುವ ಸಾಧ್ಯತೆ ಇದೆ.

ಆರೆಂಜ್ ಅಲರ್ಟ್ ಘೋಷಣೆ

  • ಕಲಬುರಗಿ

  • ಕೊಪ್ಪಳ

  • ವಿಜಯಪುರ

ಯೆಲ್ಲೋ ಅಲರ್ಟ್ ಘೋಷಣೆ
ಬೆಳಗಾವಿ, ಬೀದರ್, ಗದಗ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.

ಸಾಧಾರಣ ಮಳೆ
ದಕ್ಷಿಣ ಒಳನಾಡು, ಉಡುಪಿ, ಉತ್ತರ ಕನ್ನಡ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಈಗಾಗಲೇ ಮಳೆ ದಾಖಲೆಗೊಂಡ ಪ್ರದೇಶಗಳು
ಕಮಲಾಪುರ, ಎಂಎಂಹಿಲ್ಸ್, ಕಲಬುರಗಿ, ಚಿಂತಾಮಣಿ, ಟಿಜಿ ಹಳ್ಳಿ, ಕೋಲಾರ, ಗಂಗಾವತಿ, ಆಳಂದ, ಸೇಡಂ, ಹುಣಸಗಿ, ಅಫ್ಜಲ್ಪುರ, ವಿಜಯಪುರ, ತಾವರಗೇರಾ, ಸಿಂಧನೂರು, ರಾಯಚೂರು, ಮುನಿರಾಬಾದ್, ಮಾನ್ವಿ, ಲಿಂಗಸುಗೂರು, ಕುರ್ಡಿ, ಕೆಂಭಾವಿ, ಇಂಡಿ, ಹೊಸಕೋಟೆ, ಹೆಸರಘಟ್ಟ, ದೇವರಹಿಪ್ಪರಗಿ, ಶೋರಾಪುರ, ನಾಗಮಂಗಲ, ಮಾಗಡಿ, ಕೃಷ್ಣರಾಜಸಾಗರ, ಕರಟಗಿ, ಕನಕಪುರ, ಕಕ್ಕೇರಿ, ಕೆಆರ್ ನಗರ, ಇಳಕಲ್, ಚಿಂಚೋಳಿ, ಚಿಕ್ಕಬಳ್ಳಾಪುರ, ಭಾಲ್ಕಿ, ಬಸವನಬಾಗೇವಾಡಿ, ಗಂಗಾಪುರ, ಗಬ್ಬೂರಿನಲ್ಲಿ ಮಳೆಯಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow