ಬೆಳಗಿನ ಸಮಯದ ಈ ಅಭ್ಯಾಸಗಳು ನಿಮ್ಮ ಆರೋಗ್ಯವನ್ನೇ ಹಾಳುಮಾಡುತ್ತೆ!
ಬೆಳಗ್ಗೆ ಎದ್ದ ಬಳಿಕ ಹಲವರು ತಮ್ಮದೇ ಆದ ದಿನಚರಿಯನ್ನು ಪಾಲಿಸುತ್ತಾರೆ. ಕೆಲವರು ಯೋಗ, ವ್ಯಾಯಾಮದ ಮೂಲಕ ದಿನವನ್ನು ಪ್ರಾರಂಭಿಸಿದರೆ, ಇನ್ನೂ ಕೆಲವರು ಮೊಬೈಲ್ ನೋಡುತ್ತಾ ಸಮಯ ಕಳೆಯುತ್ತಾರೆ. ಆದರೆ ಇಂತಹ ತಪ್ಪು ಅಭ್ಯಾಸಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವುದು ಕಣ್ಣುಗಳಿಗೆ ಒತ್ತಡವನ್ನುಂಟುಮಾಡುವುದರ ಜೊತೆಗೆ ಒತ್ತಡವನ್ನು ಹೆಚ್ಚಿಸುತ್ತದೆ. ಬೆಳಗಿನ ಉಪಹಾರವನ್ನು ತಪ್ಪಿಸುವುದು ಮಧುಮೇಹ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅದೇ ರೀತಿ ನೀರು ಕುಡಿಯದೇ ಇರುವ ಅಭ್ಯಾಸ ದೇಹದಲ್ಲಿ ನಿರ್ಜಲೀಕರಣ ಉಂಟುಮಾಡಿ ಆಯಾಸ ಹೆಚ್ಚಿಸುತ್ತದೆ.
ಇದೇ ರೀತಿಯಲ್ಲಿ ಬೆಳಗ್ಗೆ ನಕಾರಾತ್ಮಕ ಆಲೋಚನೆಗಳಲ್ಲಿ ಮುಳುಗುವುದರಿಂದ ದಿನವಿಡೀ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ದೈಹಿಕ ಚಟುವಟಿಕೆಗಳ ಕೊರತೆಯೂ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ತಜ್ಞರು ಬೆಳಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರನ್ನು ಕುಡಿಯುವುದು, ಧ್ಯಾನ, ವ್ಯಾಯಾಮ, ಯೋಗ ಮಾಡುವುದು ಮತ್ತು ಪೌಷ್ಠಿಕಾಂಶಯುಕ್ತ ಉಪಹಾರ ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡರೆ ದೈಹಿಕ-ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?