RCB ಬಿಟ್ಟು ಬಂದ್ರೆ 30 ಕೋಟಿ ರೂಪಾಯಿ.. ಕೊಹ್ಲಿಗೆ ಬಿಗ್ ಆಫರ್.!

ಐಪಿಎಲ್ 2025ರ ಪಂದ್ಯಕ್ಕಾಗಿ ಕ್ರಿಕೆಟ್ ಫ್ಯಾನ್ಸ್ ಎದುರು ನೊಡುತ್ತಿದ್ದಾರೆ. ಅದರಲ್ಲೂ ಆರ್ಸಿಬಿ ಮೇಲೆ ಎಲ್ಲರ ಕಣ್ಣಿದೆ. ಈ ತಂಡದಲ್ಲಿ ಯಾರು ಉಳಿಯಲಿದ್ದಾರೆ? ಯಾರು ಹೊರ ಹೋಗಲಿದ್ದಾರೆ? ತಂಡದ ನಾಯಕತ್ವ ಬದಲಾಗಲಿದೆಯಾ? ಹೀಗೆ ನಾನಾ ಪ್ರಶ್ನೆಗಳು ಈಗಾಗಲೇ ಫ್ಯಾನ್ಸ್ ಮನದಲ್ಲಿ ಮೂಡಿವೆ. ಆದರೆ ಹರಾಜುದಾರರೊಬ್ಬರು ಕಿಂಗ್ ಕೊಹ್ಲಿಯೇ ಬಿಗ್ ಆಫರ್ ಮಾಡಿದ್ದು, ಬಂದ್ರೆ 30 ಕೋಟಿ ಕೊಡುತ್ತೇವೆ ಎಂದಿದ್ದಾರೆ!.
2025ರ ಹರಾಜುದಾದ ಹ್ಯೂ ಎಡ್ಮೀಡ್ಸ್ ಮಾಡಿರುವ ಕಾಮೆಂಟ್ವೊಂದು ವೈರಲ್ ಆಗಿದೆ. ಸದ್ಯ ಈ ಕುರಿತಾಗಿ ಬಾರಿ ಚರ್ಚೆ ನಡೆಯುತ್ತಿದೆ. 2025ರ ಮೆಗಾ ಹರಾಜಿನಲ್ಲಿ ಕೊಹ್ಲಿ ಬಂದ್ರೆ 30 ಕೋಟಿ ನೀಡಿ ಖರೀದಿಸುತ್ತೇವೆ ಎಂದಿದ್ದಾರೆ.
ಕಿಂಗ್ ಕೊಹ್ಲಿಗೆ ಆರ್ಸಿಬಿ ಅಂದ್ರೆ ತವರು ಮನೆ. ನಾಯಕತ್ವದ ಜೊತೆಗೆ ಆರ್ಸಿಬಿಯನ್ನು ಮುನ್ನಡೆಸಿಕೊಂಡ ಬಂದವರು ಇವರು. ಆದರೆ ಸದ್ಯ ನಾಯಕತ್ವದಲ್ಲಿ ಇಲ್ಲದಿದ್ದರು ತಂಡಕ್ಕೆ ಪ್ರಬಲ ಬ್ಯಾಟ್ಸ್ಮನ್ ಆಗಿ ಆಡುತ್ತಿದ್ದಾರೆ. ಗೆಲುವಿಗಾಗಿ ಹೋರಾಡುತ್ತಿದ್ದಾರೆ.
ಇಂಥಾ ರನ್ ಮೆಷಿನ್ ಇರುವ ಆರ್ಸಿಬಿ ತಂಡ 16 ವರ್ಷದಿಂದ ಟ್ರೋಫಿಗಾಗಿ ಹೋರಾಡುತ್ತಿದೆ. ಆದರೆ ಇದನ್ನೆಲ್ಲಾ ಗಮನಿಸಿದ ಹರಾಜುದಾರ ಹ್ಯೂ ಎಡ್ಮೀಡ್ಸ್ ಕಾಮೆಂಟ್ ಮಾಡಿದ್ದಾರೆ. ಕೊಹ್ಲಿ ಬಂದ್ರೆ 30 ಕೋಟಿ ಆಫರ್ ಮಾಡೋದಾಗಿ ತಿಳಿಸಿದ್ದಾರೆ. ಸದ್ಯ ಈ ವಿಚಾರ ಆರ್ಸಿಬಿ ಅಭಿಮಾನಿಗಳ ಮನದಲ್ಲಿ ಕೊಂಚ ನಡುಕ ಹುಟ್ಟಿಸಿದೆ.
ಇನ್ನು ಕೊಹ್ಲಿ ಅಪ್ಪಟ ಆರ್ಸಿಬಿ ಆಟಗಾರ. ಇದುವರೆಗೆ ತಂಡವನ್ನು ಬದಲಾಯಿಸದ ಪ್ಲೇಯರ್. ತಂಡದ ಜಯಕ್ಕಾಗಿ ನಿರಂತರ ಪರಿಶ್ರಮ ಹಾಕುತ್ತಾ ಬಂದಿದ್ದಾರೆ. ಆದರೆ ಕೊಹ್ಲಿ ಎಂಥಹದ್ದೇ ಆಫರ್ ಬಂದರು ಆರ್ಸಿಬಿ ತಂಡವನ್ನು ಬಿಟ್ಟುಕೊಡಲಾರರು ಎಂಬುದು ಅಭಿಮಾನಿಗಳ ನಂಬಿಕೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






