IPL ಫೈನಲ್ ಮ್ಯಾಚ್ ಗೆ ದಿನಗಣನೆ: RCB ಟ್ರೋಫಿ ಗೆಲ್ಲಲಿ ಎಂದು ಯಾತ್ರೆ ಕೈಗೊಂಡ ಫ್ಯಾನ್ಸ್!

IPL ಫೈನಲ್ ಮ್ಯಾಚ್ ಗೆ ದಿನಗಣನೆ ಶುರುವಾಗಿದ್ದು, RCB ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ಯಾತ್ರೆ ಕೈಗೊಂಡಿದ್ದಾರೆ. 2025 ರಲ್ಲಿ ಪ್ಲೇ ಆಫ್ಗೆ ಎಂಟ್ರಿಕೊಟ್ಟಿರುವ ಆರ್ಸಿಬಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಭರವಸೆಯಲ್ಲಿದೆ. ಈ ಸಲ ಆರ್ಸಿಬಿ ಕಪ್ ಗೆಲ್ಲಲೇಬೇಕು ಅಂತ ಅಭಿಮಾನಿಯೊಬ್ಬರು ಬೆಂಗಳೂರಿನಿಂದ ಸೈಕಲ್ ಯಾತ್ರೆಯಲ್ಲಿ ತೆರಳಿದ್ದಾರೆ.
ಈ ಸಲ ಆರ್ಸಿಬಿ ಟ್ರೋಫಿ ಗೆಲ್ಲಲಿ ಎಂದು ಬೆಂಗಳೂರಿನಿಂದ ಅಂಜಾನಾದ್ರಿಗೆ ಸೈಕಲ್ ಯಾತ್ರೆ ಮಾಡುತ್ತಿದ್ದೇನೆ. 18ನೇ ಸೀಸನ್ನಲ್ಲಿ ಕಪ್ ಗೆಲ್ಲಲಿ ಎಂದು ದೇವಾಸ್ಥಾನಕ್ಕೆ ಹೋಗುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಿಂದ 260 ಕಿಲೋ ಮೀಟರ್ ದೂರ ಬಂದಿದ್ದೇನೆ. ಇನ್ನೂ 176 ಕಿಲೋ ಮೀಟರ್ ದೂರ ಸೈಕಲ್ನಲ್ಲಿ ಹೋಗಿ ಅಂಜನಾದ್ರಿ ಬೆಟ್ಟ ತಲುಪುತ್ತೇನೆ ಎಂದರು
ಅಂಜನಾದ್ರಿ ಬೆಟ್ಟ ತಲುಪಿದ ಮೇಲೆ ಆರ್ಸಿಬಿ ಟ್ರೋಫಿ ಗೆಲ್ಲಲಿ ಎಂದು ವಿಶೇಷವಾದ ಪೂಜೆ ಮಾಡಿಸುತ್ತೇನೆ. ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ಈಗಾಗಲೇ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿಯಾಗಿದೆ. ಕಪ್ ಗೆಲ್ಲುವುದೊಂದೆ ಬಾಕಿ ಇದೆ. ಈ ಸಲ ಕಪ್ ಹೊಡೆದೇ ಹೊಡೆಯುತ್ತೆ. ನನ್ನ ಫೇವರಿಟ್ ಪ್ಲೇಯರ್ ವಿರಾಟ್ ಕೊಹ್ಲಿ. ಅವರ ಅಗ್ರೆಸ್ಸೀವ್ ಎಂದರೆ ತುಂಬಾ ಇಷ್ಟ. ಸ್ಟೇಡಿಯಂಗೆ ಹೋದಾಗ ವಿರಾಟ್ ಕೊಹ್ಲಿ ಅವರನ್ನೇ ಹೆಚ್ಚು ನೋಡುತ್ತೇನೆ. ಅವರು ಪ್ರತಿಯೊಂದು ಬಾಲ್ಗೂ ಇಂಪಾರ್ಟೆಂಟ್ ಕೊಡುತ್ತಾರೆ ಎಂದು RCB ಅಭಿಮಾನಿ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






