ಮಂಗಳವಾರ ಈ ಕೆಲಸ ಮಾಡಿದ್ರೆ ಮನೆಯಲ್ಲಿ ಕಾಡುತ್ತೆ ಹಣದ ಸಮಸ್ಯೆ..!

ಕ್ಷೌರ ಮಾಡದಿರಿ:
ಮಂಗಳವಾರ ಕ್ಷೌರ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದು ಮಂಗಳ ದೋಷಕ್ಕೂ ಕಾರಣವಾಗುತ್ತದೆ. ಈ ಕಾರಣಕ್ಕಾಗಿ ಅಂದರೆ, ಬುಧವಾರವನ್ನು ಕ್ಷೌರ ಮಾಡುವುದಕ್ಕೆ ಅತ್ಯಂತ ವಿಶೇಷವಾದ ದಿನವೆಂದು ಪರಿಗಣಿಸಲಾಗುತ್ತದೆ.
ಇದನ್ನು ಖರೀದಿಸದಿರಿ:
ಮಂಗಳವಾರ ಮೇಕಪ್ ವಸ್ತುಗಳನ್ನು ಖರೀದಿಸಬೇಡಿ. ಈ ದಿನ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದರಿಂದ ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎನ್ನುವ ನಂಬಿಕೆಯಿದೆ. ಸೋಮವಾರ ಮತ್ತು ಶುಕ್ರವಾರವನ್ನು ಇದಕ್ಕಾಗಿ ಉತ್ತಮ ದಿನವೆಂದು ಪರಿಗಣಿಸಲಾಗುತ್ತದೆ.
ಉಗುರುಗಳನ್ನು ಕತ್ತರಿಸದಿರಿ:
ಮಂಗಳವಾರ ಉಗುರುಗಳನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ ನೀವು ಅನೇಕ ತೊಂದರೆಗಳನ್ನು ಎದುರಿಸಬಹುದು. ಮಂಗಳವಾರ ತಪ್ಪಿಯೂ ಉಗುರುಗಳನ್ನು ಕತ್ತರಿಸುವ ಸಹವಾಸಕ್ಕೆ ಕೈಹಾಕಲೇಬೇಡಿ.
ಸಹೋದರರೊಂದಿಗೆ ಜಗಳವಾಡದಿರಿ:
ಮಂಗಳವಾರ ಹಿರಿಯ ಸಹೋದರರೊಂದಿಗೆ ಜಗಳವಾಡಬೇಡಿ. ಮಂಗಳವು ಅಣ್ಣನಿಗೆ ಸಂಬಂಧಿಸಿದ ಗ್ರಹವೆಂದು ಹೇಳಲಾಗುತ್ತದೆ. ಸಹೋದರನೊಂದಿಗಿನ ವಿವಾದವು ಜ್ಯೋತಿಷ್ಯದಲ್ಲಿ ಮಂಗಳ ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆ ವ್ಯಕ್ತಿಯು ಅಪಘಾತ ಮತ್ತು ಇತರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಷ್ಟು ಮಾತ್ರವಲ್ಲ, ಕೌಟುಂಬಿಕ ಜೀವನದಲ್ಲೂ ನಿಮಗೆ ಸಮಸ್ಯೆಗಳು ಎದುರಾಗಬಹುದು.
ನಿಮ್ಮ ಪ್ರತಿಕ್ರಿಯೆ ಏನು?






