ಮದರಂಗಿ ಸಂಭ್ರಮದಲ್ಲಿ ಚೈತ್ರಾ ಕುಂದಾಪುರ: ಬಿಗ್ ಬಾಸ್ ಮಾಜಿ ಸ್ಪರ್ಧಿಯ ಕೈ ಹಿಡಿಯುವ ಹುಡುಗ ಯಾರು?

ಚೈತ್ರಾ ಕುಂದಾಪುರ... ಬಿಗ್ ಬಾಸ್ ಮನೆಯಲ್ಲಿ ಮಾತಿನಿಂದಲೇ ಛಾಪು ಮೂಡಿಸಿದ್ದ ಈ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಹಿಂದೂ ಫೈರ್ ಬ್ರಾಂಡ್ ಎಂದು ಖ್ಯಾತಿ ಗಳಿಸಿದ್ದ ಚೈತ್ರಾ ಕುಂದಾಪುರ ಅವರಿಗೆ ಕಂಕಣ ಭಾಗ್ಯ ಕೂಡಿ ಬಂತಾ ಅನುಮಾನ ಕಾಡಿದೆ. ಹೌದು ಚೈತ್ರಾ ಕುಂದಾಪುರ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.
ಇದಕ್ಕೆ ಕಾರಣ ಆಗಿದ್ದು ಅವರ ಬಿಗ್ ಬಾಸ್ ಪ್ರಯಾಣ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಲವ್ ಅಫೇರ್ ಇಟ್ಟುಕೊಂಡು ಸುದ್ದಿ ಆಗಲು ಅವರಿಗೆ ಇಷ್ಟ ಇರಲಿಲ್ಲ. ಹುಡುಗ ಫಿಕ್ಸ್ ಆಗಿದ್ದರಿಂದ ಈ ರೀತಿ ವಿಚಾರಗಳಿಗೆ ಕಿವಿ ಕೊಡದೇ ಇರಲು ಚೈತ್ರಾ ಕುಂದಾಪುರ ಅವರು ನಿರ್ಧರಿಸಿದ್ದರು. ಈಗ ಅವರು ವಿವಾಹ ಆಗುತ್ತಿದ್ದಾರೆ.
ಚೈತ್ರಾ ತಾವು ಯಾರನ್ನು ವಿವಾಹ ಆಗುತ್ತಿದ್ದೇನೆ ಎಂಬ ವಿಚಾರವನ್ನು ಈವರೆಗೆ ರಿವೀಲ್ ಮಾಡಿಲ್ಲ. ಅದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಈಗ ಅವರ ಮದುವೆ ಕಾರ್ಯ ನಡೆದರೆ ಆ ಬಳಿಕ ಹಂಚಿಕೊಳ್ಳೋ ಫೋಟೋದಿಂದ ಪತಿಯ ವಿಚಾರ ರಿವೀಲ್ ಆಗಲಿದೆ. ಚೈತ್ರಾ ಮದುವೆಗಾಗಿ ಫ್ಯಾನ್ಸ್ ಕಾದಿದ್ದಾರೆ.
ಚೈತ್ರಾ ಕುಂದಾಪುರ ಅವರು ವಿವಾಹಕ್ಕಾಗಿ ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಕೈ ತುಂಬ ಮೆಹಂದಿ ಹಾಕಿಕೊಂಡು, ಮದುವೆಗೆ ರೆಡಿ ಆಗಿದ್ದಾರೆ. ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಹುಡುಗನ ಮುಖ ರಿವೀಲ್ ಮಾಡಲು ಕೋರುತ್ತಿದ್ದಾರೆ.
ಚೈತ್ರಾ ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಪಾಲ್ಗೊಂಡಿದ್ದರು. ಚೈತ್ರಾ ಮಂಗಳಪತ್ರ ಹಿಡಿದು ಬಂದಿದ್ದ ವಿಡಿಯೋ ವೈರಲ್ ಆಗಿತ್ತು. ಹಿಂದಿನ ವಾರ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಸೃಜನ್ ಲೋಕೇಶ್, ಚೈತ್ರಾ ಮದುವೆ ಆಗ್ತಿರೋದನ್ನು ದೃಢಪಡಿಸಿದ್ದರು. ಚೈತ್ರಾಗೆ ಶುಭ ಕೋರಿದ್ದ ಸೃಜನ್ ಲೋಕೇಶ್ ಹುಡುಗನ ಬಗ್ಗೆ ಒಂದಿಷ್ಟು ಮಾಹಿತಿ ಪಡೆದಿದ್ದರು. ಚೈತ್ರಾ ಹುಡುಗ ಸಾಫ್ಟ್ ಅನ್ನೋ ಗುಟ್ಟನ್ನು ಅನುಷಾ ಹೊರ ಹಾಕಿದ್ದರು.
ಚೈತ್ರಾ ಲವ್ ಕಂ ಅರೇಂಜ್ಡ್ ಮ್ಯಾರೇಜ್ ಮಾಡಿಕೊಳ್ತಿದ್ದಾರೆ ಅನ್ನೋದು ಬಿಟ್ರೆ ಹೆಚ್ಚಿನ ವಿಷ್ಯ ಈವರೆಗೂ ಹೊರಗೆ ಬಿದ್ದಿಲ್ಲ. ಚೈತ್ರಾ ಯಾರ ಕೈ ಹಿಡಿಯುತ್ತಿದ್ದಾರೆ ಅನ್ನೋದು ರಿವೀಲ್ ಆಗಿಲ್ಲ. ಹನ್ನೆರಡು ವರ್ಷಗಳಿಂದ ಪ್ರೀತಿಯಲ್ಲಿದ್ದ ಚೈತ್ರಾ ಈಗ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಹುಡುಗ ಯಾರೇ ಆಗ್ಲಿ, ಚೈತ್ರಾ ಮುಂದಿನ ಜೀವನ ಸುಖವಾಗಿರಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






