ದೂರು ಕೊಡಲು ಬಂದಿದ್ದ ಮಹಿಳೆ ಜೊತೆಗೆ DYSP ರಾಸಲೀಲೆ.! ವಿಡಿಯೋ ವೈರಲ್

ಜನವರಿ 3, 2025 - 14:05
 0  27
ದೂರು ಕೊಡಲು ಬಂದಿದ್ದ ಮಹಿಳೆ ಜೊತೆಗೆ DYSP ರಾಸಲೀಲೆ.! ವಿಡಿಯೋ ವೈರಲ್

ತುಮಕೂರು: ಕಾನೂನು ಕಾಪಾಡಬೇಕಾದ ಪೊಲೀಸ್ ಅಧಿಕಾರಿಯೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಬೆಳಕಿಗೆ ಬಂದಿದೆ. ಹೌದು ದೂರು ನೀಡಲು ಕಚೇರಿಗೆ ಬಂದ ಮಹಿಳೆಯೊಂದಿಗೆ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.. ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪರದ್ದು ಎನ್ನಲಾದ ವಿಡಿಯೊ ವೈರಲ್‌ ಆಗಿದೆ.

ಪಾವಗಡ ಮೂಲದ ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು, ಮಾತುಕತೆ ನಡೆಸಲು ಡಿವೈಎಸ್ ಪಿ ಕಚೇರಿಗೆ ಬಂದಿದ್ರು.  ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್ ಪಿ ರಾಮಚಂದ್ರಪ್ಪ, ಶೌಚಾಲಯದ ಬಳಿ ಕರೆದುಕೊಂಡು ಹೋಗಿ ರಾಸಲೀಲೆ ನಡೆಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೆ ತಲೆಮರೆಸಿಕೊಂಡ ಡಿವೈಎಸ್ ಪಿ ರಾಮಚಂದ್ರಪ್ಪ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ‌ಯಾಗಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow