ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಇರಲ್ವಾ ಎಲಿಮಿನೇಷನ್!? ಟ್ವಿಸ್ಟ್ ಏನು?

ಕನ್ನಡದ ಬಿಗ್ ಬಾಸ್ ಸೀಸನ್ 11 ಜಗಳ, ಕೂಗಾಟ, ಕಿತ್ತಾಟದ ಬಳಿಕ ಪ್ರೀತಿ, ಸ್ನೇಹ, ಬಾಂಧವ್ಯ, ಕಣ್ಣೀರು, ಆತ್ಮೀಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಈ ವಾರ ಬಿಗ್ ಬಾಸ್ ಮನೆಗೆ 9 ಸ್ಪರ್ಧಿಗಳ ಕುಟುಂಬಸ್ಥರು, ಆತ್ಮೀಯರು ಬಂದು ಹೋಗಿದ್ದಾರೆ. ಇಷ್ಟು ದಿನ ಟಾಸ್ಕ್, ಎಲಿಮಿನೇಷನ್ ಅನ್ನೋ ಹೋರಾಟದಲ್ಲಿದ್ದ ಸ್ಪರ್ಧಿಗಳಿಗೆ ಈಗ ನೆಮ್ಮದಿ ಸಿಕ್ಕಿದೆ.
ಬಿಗ್ ಬಾಸ್ ಮನೆಗೆ ನಿಜವಾದ ಮನೆ ಸದಸ್ಯರು ಬಂದ ಮೇಲೆ ಸ್ಪರ್ಧಿಗಳ ಎನರ್ಜಿ ಲೆವೆಲ್ ಜಾಸ್ತಿಯಾಗಿದೆ. ಪ್ರತಿಯೊಬ್ಬ ಸ್ಪರ್ಧಿಗಳಿಗೂ ಇಷ್ಟು ದಿನ ಕಾಯುತ್ತಿದ್ದ ಗಳಿಗೆ ಎದುರಾಗಿದ್ದು, ಅತ್ಯಂತ ಪ್ರೀತಿಯ ಮಾತುಗಳನ್ನ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11’ ಒಳ್ಳೆಯ ಟಿಆರ್ಪಿ ಪಡೆಯುತ್ತಿದೆ ನಿಜ. ಅದರ ಜೊತೆಗೆ ಡ್ರಾಮಾಗಳ ಸಂಖ್ಯೆಯೂ ಅಧಿಕವಾಗಿದೆ. ಸುಖಾಸುಮ್ಮನೆ ಎಲಿಮಿನೇಷನ್ ಮಾಡದೆ ಇರುವ ಕೆಲಸ ಆಗುತ್ತಿದೆ. ಈಗ ಈ ವಾರ ಫ್ಯಾಮಿಲಿ ವೀಕ್ ಆಗಿದ್ದು, ಯಾವುದೇ ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ.
ಸದ್ಯ 9 ಮಂದಿ ಬಿಗ್ ಬಾಸ್ನಲ್ಲಿ ಇದ್ದು, ಜನವರಿ ಅಂತ್ಯಕ್ಕೆ ಫಿನಾಲೆ ನಡೆಯುವ ಸಾಧ್ಯತೆ ಇದೆ. ದೊಡ್ಮನೆಯಲ್ಲಿ ಈಗ ಉಳಿದುಕೊಂಡಿರೋದು 9 ಮಂದಿ. ಹೀಗಾಗಿ, ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ದಟ್ಟವಾಗಿದೆ. ಆ ವಾರ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಈಗ ಕ್ಯಾಪ್ಟನ್ ಆಗುವುದು ತುಂಬಾನೇ ಮುಖ್ಯವಾಗುತ್ತದೆ. ಈ ವಾರ ಕ್ಯಾಪ್ಟನ್ ಆದರೆ ಮುಂದಿನ ವಾರಕ್ಕೆ ಇಮ್ಯೂನಿಟಿ ಸಿಗಲಿದೆ. ಈ ವಾರವಂತೂ ಯಾವುದೇ ಎಲಿಮಿನೇಷನ್ ಇಲ್ಲದೆ ಅವರು ಸೇಫ್ ಆಗಲಿದ್ದಾರೆ. ಇದರ ಜೊತೆಗೆ ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ.
ಈ ಬಾರಿಯ ಬಿಗ್ ಬಾಸ್ ನಿರ್ವಹಣೆ ಬಗ್ಗೆ ಅಪಸ್ವರ ಎದ್ದಿದೆ. ಸರಿಯಾದ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗುತ್ತಿಲ್ಲ ಎನ್ನುವ ಆರೋಪವನ್ನು ಅನೇಕರು ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






