ನಟಿ ಪೂಜಾ ಹೆಗ್ಡೆಗೆ ಎದುರಾಯ್ತು ಬಿಗ್ ಶಾಕ್: ಸ್ಟಾರ್‌ ನಟನ ಸಿನಿಮಾದಿಂದ ಹೊರಕ್ಕೆ!

ಆಗಸ್ಟ್ 25, 2025 - 20:03
ಆಗಸ್ಟ್ 24, 2025 - 16:48
 0  16
ನಟಿ ಪೂಜಾ ಹೆಗ್ಡೆಗೆ ಎದುರಾಯ್ತು ಬಿಗ್ ಶಾಕ್: ಸ್ಟಾರ್‌ ನಟನ ಸಿನಿಮಾದಿಂದ ಹೊರಕ್ಕೆ!

ನಟಿ ಪೂಜಾ ಹೆಗ್ಡೆ ಅವರ ವೃತ್ತಿ ಜೀವನ ಇತ್ತೀಚೆಗೆ ಇಳಿಮುಖವಾಗಿದೆ. ಪ್ರಾಜೆಕ್ಟ್ಗಳು ಸಿಗುತ್ತಿದ್ದರೂ ಯಶಸ್ಸು ಕೈ ಸೇರದೇ ಹೋದ ಪರಿಣಾಮ, ಚಿತ್ರಗಳ ಸೋಲಿನ ಹೊಣೆಗಾರಿಕೆಯನ್ನು ಅವರ ಮೇಲೆಯೇ ಹೊರಲಾಗುತ್ತಿದೆ.

ಇದರ ನಡುವೆ, ದುಲ್ಕರ್ ಸಲ್ಮಾನ್ ನಟನೆಯ ಹೊಸ ಚಿತ್ರದಿಂದ ಪೂಜಾ ಹೆಗ್ಡೆ ಅವರನ್ನು ಹೊರಗಿಟ್ಟಿರುವ ಸುದ್ದಿ ಬಹಿರಂಗವಾಗಿದೆ. ಅವರ ಬದಲು ನಟಿ ಶ್ರುತಿ ಹಾಸನ್ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬುದನ್ನು ಶ್ರುತಿ ಸ್ವತಃ ಖಚಿತಪಡಿಸಿದ್ದಾರೆ.

ಪೂಜಾ ಹೆಗ್ಡೆ ಕೊನೆಯದಾಗಿ ತೆಲುಗು ಚಿತ್ರರಂಗದಲ್ಲಿ 2022ರಲ್ಲಿ ಬಿಡುಗಡೆಯಾದ ಆಚಾರ್ಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಯಾವುದೇ ತೆಲುಗು ಸಿನಿಮಾ ರಿಲೀಸ್ ಆಗಿಲ್ಲ. ಇತ್ತೀಚೆಗೆ ತಮಿಳು ಸಿನಿಮಾದ ಪ್ರಚಾರದ ವೇಳೆ ಶೀಘ್ರವೇ ತೆಲುಗು ಚಿತ್ರರಂಗಕ್ಕೆ ಮರಳುವುದಾಗಿ ಹೇಳಿದ್ದರೂ, ಈಗಾಗಲೇ ಎರಡು ದೊಡ್ಡ ಪ್ರಾಜೆಕ್ಟ್ಗಳಿಂದ ಅವರು ಹೊರಬಿದ್ದಿದ್ದಾರೆ. ಮೊದಲು ಗುಂಟೂರು ಕಾರಂ ಚಿತ್ರದಿಂದ ಅವರು ಹಿಂದೆ ಸರಿದರೆ, ಇದೀಗ ದುಲ್ಕರ್ ಸಲ್ಮಾನ್ ಸಿನಿಮಾ ಕೂಡ ಕೈ ತಪ್ಪಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow