ಬಿಳಿ ಕೂದಲು ಕಪ್ಪಾಗಿ, ದಷ್ಟಪುಷ್ಟವಾಗಿ ಉದ್ದವಾಗಿ ಬೆಳೆಯಲು ಕೊಬ್ಬರಿ ಎಣ್ಣೆ ಹೀಗೆ ಬಳಸಿ
ಹೇರ್ ಡೈ ಬಳಕೆಯಿಂದ ಬಿಳಿ ಕೂದಲಿನ ಸಮಸ್ಯೆಯಿಂದ ತಾತ್ಕಾಲಿಕ ಪರಿಹಾರವಷ್ಟೇ ದೊರೆಯುತ್ತದೆ. ಆದರೆ, ಮನೆಯಲ್ಲಿ ತಯಾರಿಸಬಹುದಾದ ಈ ಎಣ್ಣೆ ಬಿಳಿ ಕೂದಲನ್ನು ಕಪ್ಪಾಗಿಸಲು ಹಾಗೂ ಬಿಳಿ ಕೂದಲು ಬರದಂತೆ ತಡೆಯಲು ಇದು ಲಾಭದಾಯಕವಾಗಿದೆ.
ಈ ಹೇರ್ ಆಯಿಲ್ ಅನ್ನು ಒಮ್ಮೆ ತಯಾರಿಸಿ ತಿಂಗಳವರೆಗೆ ಶೇಖರಿಸಿ ಇಡಬಹುದು. ನಿಯಮಿತವಾಗಿ ಈ ಹೇರ್ ಆಯಿಲ್ ಬಳಸುವುದರಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲ, ಹೇರ್ ಫಾಲ್, ತಲೆಹೊಟ್ಟು, ಸ್ಪ್ಲಿಟ್ ಹೇರ್ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದು.
ಇತ್ತೀಚಿನ ವರ್ಷಗಳಲ್ಲಿ ಧೂಳು, ಮಾಲಿನ್ಯ, ಕೆಟ್ಟ ಜೀವನಶೈಲಿಯಿಂದಾಗಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತವೆ. ಆದರೆ, ಇದರಿಂದ ಪರಿಹಾರ ಪಡೆಯಲು ಹೇರ್ ಡೈ ಬಳಸುವ ಅನಿವಾರ್ಯತೆ ಇಲ್ಲ. ಬದಲಿಗೆ, ಮನೆಯಲ್ಲಿರುವ ಕೊಬ್ಬರಿ ಎಣ್ಣೆಯಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ಮರಳಿಸಬಹುದು
ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೆಂತ್ಯ, ಲವಂಗ, ಅರಿಶಿನವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಬಳಸುವುದರಿಂದ ಬಿಳಿ ಕೂದಲು ನ್ಯಾಚುರಲ್ ಆಗಿ ಕಪ್ಪಾಗುತ್ತದೆ. ಆದರೆ, ಇದನ್ನು ಬಳಸುವ ಸರಿಯಾದ ವಿಧಾನ ತಿಳಿದಿರಬೇಕು.
ಮೊದಲಿಗೆ ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಅದನ್ನು ಅಂಗೈ ಅಗಲದಷ್ಟು ಹಾಸಿ, ಅದರಲ್ಲಿ ಒಂದು ಸ್ಪೂನ್ ಮೆಂತ್ಯ, 5-6 ಲವಂಗ, ಕಾಲು ಚಮಚ ಅರಿಶಿನವನ್ನು ಹಾಕಿ. ತುಪ್ಪದ ಬತ್ತಿ ಮಾಡುವಂತೆ ಹತ್ತಿಯೊಳಗೆ ಮೆಂತ್ಯ, ಲವಂಗ, ಅರಿಶಿನ ಸ್ಟಫ್ ಮಾಡಿ ಹತ್ತಿ ಉಂಡೆ ತಯಾರಿಸಿ.
ತಯಾರಿಸಿದ ಹತ್ತಿ ಉಂಡೆಯನ್ನು ಒಂದು ಮಣ್ಣಿನ ದೀಪದೊಳಗೆ ಇಟ್ಟು ಅದರ ಮೇಲೆ ತುಪ್ಪ ಹಾಕಿ ಅದನ್ನು ಹಚ್ಚಿ. ನಂತರ ಕೆಳಗೆ ಏನಾದರೂ ಸಪೋರ್ಟ್ ನೀಡಿ ಆ ದೀಪದ ಮೇಲೆ ತಟ್ಟೆಯನ್ನು ಬೋರಲು ಹಾಕಿಡಿ. ದೀಪ ಸಂಪೂರ್ಣವಾಗಿ ಉರಿಯುವವರೆಗೂ ಅದನ್ನು ಹಾಗೆಯೇ ಬಿಡಿ
ದೀಪ ಆರಿದ ಬಳಿಕ ಅದರ ಮೇಲೆ ಬೋರಲು ಹಾಕಿದ ತಟ್ಟೆಯನ್ನು ತೆಗೆದು ಅದಕ್ಕೆ ಅಂಟಿರುವ ಕಪ್ಪನ್ನು ಕೆರೆದು ಬೇರೆಪಡಿಸಿ ಒಂದು ಬಟ್ಟಲಿಗೆ ಹಾಕಿ. ಇದರಲ್ಲಿ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಸಂಗ್ರಹಿಸಿ
ನೀವು ಹೇರ್ ವಾಶ್ ಮಾಡುವ ಒಂದೆರಡು ಗಂಟೆಗೂ ಮೊದಲು ಕಪ್ಪು ಮಿಶ್ರಿತ ಕೊಬ್ಬರಿ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿದರೆ ಬಿಳಿ ಕೂದಲು ಕಪ್ಪಾಗುವುದು ಮಾತ್ರವಲ್ಲ, ಕೂದಲು ಉದ್ದವಾಗಿ, ದಪ್ಪವಾಗಿ ಬೆಳೆಯುತ್ತದೆ
ನಿಮ್ಮ ಪ್ರತಿಕ್ರಿಯೆ ಏನು?