Daali Dhananjay: ಬರ್ತ್ಡೇ ಸಂಭ್ರಮಕ್ಕೆ ಬ್ರೇಕ್ ಹಾಕಿದ ಡಾಲಿ ಧನಂಜಯ್..! ಯಾಕೆ ಗೊತ್ತಾ..?

ಆಗಸ್ಟ್ 21, 2025 - 20:11
 0  17
Daali Dhananjay: ಬರ್ತ್ಡೇ ಸಂಭ್ರಮಕ್ಕೆ ಬ್ರೇಕ್ ಹಾಕಿದ ಡಾಲಿ ಧನಂಜಯ್..! ಯಾಕೆ ಗೊತ್ತಾ..?

ಜನಪ್ರಿಯ ನಟ ಡಾಲಿ ಧನಂಜಯ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಆಗಸ್ಟ್ 23ರಂದು ಅವರು 39ನೇ ವಯಸ್ಸಿಗೆ ಕಾಲಿಡಲಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಂದೇಶ ಹಂಚಿಕೊಂಡ ಅವರು, “ಪ್ರತಿ ವರ್ಷ ನನ್ನ ಜನ್ಮದಿನ ನಿಮ್ಮ ಹಬ್ಬವಾಗಿರುತ್ತದೆ. ಆದರೆ ಈ ಬಾರಿ ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ನಿಮ್ಮ ಪ್ರೀತಿ, ಹಾರೈಕೆಗಳು ಸದಾ ನನ್ನೊಡನೆ ಇರುತ್ತವೆ. ಮುಂದಿನ ಸಲ ಡಬ್ಬಲ್ ಸಂಭ್ರಮದಲ್ಲಿ ಹುಟ್ಟುಹಬ್ಬ ಆಚರಿಸೋಣ,” ಎಂದು ತಿಳಿಸಿದ್ದಾರೆ.

ಇದು ಧನಂಜಯ್ ವಿವಾಹದ ನಂತರದ ಮೊದಲ ಜನ್ಮದಿನವಾಗಿದ್ದು, ಪತ್ನಿ ಧನ್ಯಾ ಜೊತೆ ಖಾಸಗಿ ಪ್ಲ್ಯಾನ್ ಮಾಡಿಕೊಂಡಿರಬಹುದೆಂದು ಅಭಿಮಾನಿಗಳು ಅಂದಾಜು ಮಾಡುತ್ತಿದ್ದಾರೆ. ಇದೇ ವೇಳೆ ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ನಡೆದ ಅವಘಡದ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳು ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಸೇರಿಸಲು ಹಿಂಜರಿಯುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow