Samantha: ಹೊಸ ಪಯಣ ಆರಂಭ: ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ನಟಿ ಸಮಂತಾ!

ಮೇ 8, 2025 - 19:59
 0  15
Samantha: ಹೊಸ ಪಯಣ ಆರಂಭ: ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ನಟಿ ಸಮಂತಾ!

ದಕ್ಷಿಣದಿಂದ ಬಾಲಿವುಡ್‌ವರೆಗೆ ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಟಿ ಸಮಂತಾ ರುತ್ ಪ್ರಭು, ಹೊಸ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಹೌದು ಕೆಲವೇ ದಿನಗಳ ಹಿಂದೆ ಅವರು ತಿರುಪತಿ ದೇವಾಲಯಕ್ಕೆ ಒಟ್ಟಾಗಿ ಬಂದಿದ್ದರು. ಈಗ ಮತ್ತೆ ರಾಜ್ ನಿಧಿಮೋರು ಜೊತೆ ಇರುವ ಫೋಟೋಗಳನ್ನು ಸಮಂತಾ ಅವರು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ‘ಹಾಗಾದ್ರೆ ನಿಮ್ ಲವ್ ಖಚಿತ’ ಎಂದು ಕಮೆಂಟ್ ಮಾಡುತ್ತಿದ್ದಾರೆ.

‘ಫ್ಯಾಮಿಲಿ ಮ್ಯಾನ್ 2’, ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಗಳಲ್ಲಿ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಧಿಮೋರು ಅವರು ಒಟ್ಟಿಗೆ ಕೆಲಸ ಮಾಡಿದ್ದರು. ಆ ಬಳಿಕ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದ್ದರೂ ಕೂಡ ಅದನ್ನು ಅವರು ತಿರಸ್ಕರಿಸಿಲ್ಲ. ಹಾಗೆಯೇ ಒಪ್ಪಿಕೊಂಡಿಲ್ಲ ಕೂಡ. ಆದರೆ ಫೋಟೋ ಪೋಸ್ಟ್ ಮಾಡಿದ್ದರಿಂದ ಜನರಿಗೆ ಖಚಿತತೆ ಸಿಕ್ಕಂತೆ ಆಗಿದೆ.

ಇತ್ತೀಚೆಗೆ ಒಂದಿಷ್ಟು ಫೋಟೋಗಳನ್ನು ಶೇರ್‌ ಮಾಡಿರುವ ಸಮಂತಾ, "ಹೊಸ ಆರಂಭ" ಎಂದು ಹೇಳಿದ್ದಾರೆ. ಇದರಲ್ಲಿ ರಾಜ್‌ ನಿಡಿಮೊರು ಕೂಡ ಇದ್ದಾರೆ. ಇವರಿಬ್ಬರು ಡೇಟ್‌ಮಾಡುತ್ತಿರುವ ವಿಷಯ ಕೇಳಿ ಬರುತ್ತಿರೋದು ನಿನ್ನೆ ಮೊನ್ನೆಯಿಂದಲ್ಲ. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಸಾಕಷ್ಟು ಒಟ್ಟಿಗೆ ಕಾಣಿಸಿದ್ದಾರೆ. ಅಂದಹಾಗೆ ಶ್ಯಾಮಿಲಿ ದೇ ಎನ್ನುವವರ ಜೊತೆ ರಾಜ್‌ ಮದುವೆ ಆಗಿದೆ. ರಾಜ್‌ ಅವರ ಪತ್ನಿ ಶ್ಯಾಮಿಲಿ ಅವರು 2023ರಲ್ಲಿ ವಿವಾಹ ವಾರ್ಷಿಕೋತ್ಸವದ ಪೋಸ್ಟ್‌ ಹಂಚಿಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಪತಿಯ ಜೊತೆಗಿನ ಪೋಸ್ಟ್‌ ಹಂಚಿಕೊಂಡಿಲ್ಲ, ಹಳೇ ಫೋಟೋಗಳನ್ನು ಕೂಡ ಡಿಲಿಟ್‌ ಮಾಡಿಲ್ಲ.

ಇನ್ನು ಡೇಟಿಂಗ್‌ ಗಾಸಿಪ್ ಬಗ್ಗೆ ಸಮಂತಾ ಆಗಲೀ, ರಾಜ್‌ಆಗಲೀ ಮೌನ ಮುರಿದಿಲ್ಲ. "ಶುಭಂ" ಎನ್ನುವ ಸಿನಿಮಾದಲ್ಲಿ ಸಮಂತಾ ನಟಿಸಿದ್ದಲ್ಲದೆ, ಹಣ ಕೂಡ ಹಾಕಿದ್ದಾರೆ. ಈ ಮೂಲಕ ಅವರು ನಿರ್ಮಾಪಕಿ ಆಗಿ ಬಡ್ತಿ ಪಡೆದಿದ್ದಾರೆ. ಹೈದರಾಬಾದ್‌ಮನೆಯಲ್ಲಿ ತನ್ನ ಶ್ವಾನ, ರಾಜ್‌ ಅವರು ಇರುವ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದಾರೆ. ಇನ್ನು ರಾಜ್‌ಜೊತೆ ಇನ್ನೋರ್ವ ಸ್ನೇಹಿತ ಇರುವ ಫೋಟೋವನ್ನು ಕೂಡ ಸಮಂತಾ ಹಂಚಿಕೊಂಡಿದ್ದಾರೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow