ಮನೆ ಕೆಲಸದವಳ ಹೆಸರಿಗೆ ಬರೆದಿದ್ರು 5 ಕೋಟಿ ಆಸ್ತಿ:ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಯುವತಿ
ಬೆಂಗಳೂರು: ಅನ್ನ ಹಾಕಿದ ಮನೆಗೆ ಖತರ್ನಾಕ್ ಯುವತಿ ಕನ್ನ ಹಾಕಿದ್ದಾಳೆ. ಕೋಟ್ಯಂತರ ಮೌಲ್ಯದ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕುತ್ತಿದ್ದವರ ಮನೆಗೆ ಕನ್ನ ಹಾಕಿದ್ದಾಳೆ. ಈ ಸಂಬಂಧ ಜೆಪಿ ನಗರ ಪೊಲೀಸರಿಂದ ಆರೋಪಿ ಮಂಗಳ ಳನ್ನು ಅರೆಸ್ಟ್ ಮಾಡಿದ್ದಾರೆ. ಆನ್ ಲೈನ್ ಬೆಟ್ಟಿಂಗ್ ಹುಚ್ಚಿಗೆ ಚಿನ್ನ ಕದ್ದು ಈ ಕನ್ನ ಹಾಕುವ ಕೆಲಸ ಮಾಡಿದ್ದಾಳೆ. 58 ವರ್ಷದ ಆಶಾ ಜಾಧವ್ ಅವರಿಗೆ ಗಂಡ-ಮಕ್ಕಳು ಇರಲಿಲ್ಲ.
ಮನೆ ಮಾಲೀಕರಾದ ಆಶಾ ಜಾಧವ್ ತಾಯಿ ಈಗ 58 ವರ್ಷದವರು. ತಾಯಿಯನ್ನು ನೋಡಿಕೊಳ್ಳಲು 15 ವರ್ಷಗಳ ಹಿಂದೆ ಕೇರ್ ಟೇಕರ್ ಆಗಿ ಮಂಗಳರನ್ನು ನೇಮಿಸಿದ್ದರು. ಆಶಾ ಅವರ ತಾಯಿಯನ್ನು ಮಂಗಳ ಚೆನ್ನಾಗಿ ನೋಡಿಕೊಂಡಿದ್ದಳು. ಆಶಾ ಅವರಿಗೆ ಮಕ್ಕಳಿಲ್ಲದೆ, ಪತಿಯೂ ಮೃತಪಟ್ಟಿದ್ದಾರೆ. ಪ್ರತಿಷ್ಠಿತ ಜೆಪಿ ನಗರದಲ್ಲಿರುವ ಕೋಟ್ಯಂತರ ಮೌಲ್ಯದ ಆಸ್ತಿಯೊಂದಿಗೆ ಆಶಾ ಕುಟುಂಬವು ವಾಸಿಸುತ್ತಿತ್ತು.
ಇವರ ಹೆಸರಲ್ಲಿ ಪ್ರತಿಷ್ಠಿತ ಜೆಪಿ ನಗರದಲ್ಲಿ ಕೋಟಿ ಕೋಟಿ ಬೆಲೆಯ ಆಸ್ತಿ ಹೊಂದಿದ್ದರು. ತನಗ್ಯಾರು ಇಲ್ಲ ಎಂದು 5 ಕೋಟಿ ಮೌಲ್ಯದ ಮನೆಯನ್ನ ಕೆಲಸಕ್ಕೆಂದು ಸೇರಿದ ಮಂಗಳ ಹೆಸರಿಗೆ ವಿಲ್ ಮಾಡಿಸಿದ್ರು. ಅಷ್ಟೊಂದು ನಂಬಿದ್ದ ಆಶಾಗೆ ಮಂಗಳ ಮಕ್ಮಲ್ ಟೋಪಿ ಹಾಕಿದ್ದಾಳೆ.
ಆನ್ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದಿದ್ದ ಯುವತಿ, ಬಾಯ್ಫ್ರೆಂಡ್ಸ್ ಹಾಗೂ ಪಾರ್ಟಿ, ಪಬ್ಬು ಅಂತಾ ಸುತ್ತಾಡ್ತಿದ್ದಳು. ಅದಕ್ಕಾಗಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದಳು. ಈಕೆ ಮಾಡಿಕೊಂಡಿದ್ದ 40 ಲಕ್ಷ ಸಾಲವನ್ನು ತೀರಿಸಿದ್ದರು. ಅಲ್ಲದೇ ಒಂದೂವರೆ ಕೋಟಿಯ ಮನೆಯನ್ನು ಮಂಗಳ ಹೆಸರಿಗೆ ಬರೆದಿದ್ದರು. ಆನ್ಲೈನ್ ಹುಚ್ಚಿಗೆ ಮನೆ ಮಾರಿ ಮಂಗಳ ಹಣ ಕಳೆದುಕೊಂಡಿದ್ದಳು. ಆದರೂ ಆಕೆಯನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದ ಆಶಾ ಸಾಕಿದ್ದರು.
ತಾನು ವಾಸ ಇರುವ ಐದು ಕೋಟಿಯ ಮನೆ ವಿಲ್ ಕೂಡ ಮಂಗಳ ಹೆಸರಿಗೆ ಮಾಡಿದ್ದರು. ಆದ್ರೆ ಮತ್ತದೇ ಆನ್ ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದಿದ್ದ ಮಂಗಳ, ಒರಿಜಿನಲ್ ಕೀ ಬಳಸಿ ಬೀರುವಿನಲ್ಲಿದ್ದ ಚಿನ್ನ-ಬೆಳ್ಳಿ ಕದ್ದಿದ್ದಾಳಂತೆ. ಬಳಿಕ ಕೀನನ್ನು ಗೊತ್ತಿಲ್ಲದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು. ಕೀ ಕಳೆದು ಹೋಗಿದೆ ಎಂದು ಆಶಾ ಸುಮ್ಮನಾಗಿದ್ರು.
ದೀಪಾವಳಿ ಹಬ್ಬಕ್ಕೆ ಚಿನ್ನ ಹಾಕಿಕೊಳ್ಳಲು ಡೂಪ್ಲಿಕೇಟ್ ಕೀ ಮೂಲಕ ಬೀರು ತೆಗೆಸಿದ ವೇಳೆ ಚಿನ್ನ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಯಾರೊ ಅಪರಿಚಿತರು ಕಳ್ಳತನ ಮಾಡಿರಬಹುದೆಂದು ಆಶಾ ದೂರು ನೀಡಿದ್ದರು. ಆದ್ರೆ ಪೊಲೀಸರಿಗೆ ಮಂಗಳ ಮೇಲೆ ಅನುಮಾನ ಮೂಡಿದೆ.
ಈ ಸಂದರ್ಭದಲ್ಲೂ ಆಶಾ ಜಾದವ್, ಮಂಗಳ ಮೇಲೆ ಅನುಮಾನ ಪಡಬೇಡಿ ಆಕೆ ಅಂತವಳಲ್ಲ ಎಂದಿದ್ದರಂತೆ. ಆದ್ರೆ ಪೊಲೀಸರು ತಮ್ಮ ಸ್ಟೈಲ್ನಲ್ಲಿ ವಿಚಾರಣೆ ನಡೆಸಿದಾಗ ಮಗಳ ಸತ್ಯ ಬಾಯ್ಬಿಟ್ಟಿದ್ದಾಳಂತೆ. 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ಕಳ್ಳತನ ಮಾಡಿದ್ದ ಮಗಳ ಎಲ್ಲವನ್ನ ಕೂಡ ಅಡವಿಟ್ಟದ್ದಳು. ಜೆಪಿ ನಗರ ಪೊಲೀಸರು ಆಕೆಯನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಕೆಲಸದಾಕೆಯೇ ಚಿನ್ನ ಕದ್ದ ವಿಚಾರ ತಿಳಿದ ಬಳಿಕ ಮಂಗಳಗಾಗಿ ಬರೆದಿದ್ದ ಮನೆಯ ವಿಲ್ ಅನ್ನು ಆಶಾ ಜಾದವ್ ವಾಪಸ್ ಪಡೆದುಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?