ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಗೃಹಿಣಿಯರ ಖಾತೆಗೆ ಬರಲಿದೆ 50 ಸಾವಿರ!

ಸೆಪ್ಟೆಂಬರ್ 27, 2024 - 08:06
 0  21
ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಗೃಹಿಣಿಯರ ಖಾತೆಗೆ ಬರಲಿದೆ 50 ಸಾವಿರ!

ನವದೆಹಲಿ:- ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಪ್ರಧಾನ ಮಂತ್ರಿ ಅನುಶುಚಿತ್ ಜಾತಿ ಅಭ್ಯುದೈ ಯೋಜನೆ  ಯೋಜನೆಯನ್ನು ಕೇಂದ್ರ ಸರ್ಕಾರವು ಎರಡು ವರ್ಷಗಳ ಹಿಂದೆ ಜಾರಿಗೆ ತಂದಿದೆ. ಇದನ್ನು ಪ್ರಧಾನ ಮಂತ್ರಿ ಅಜಯ್ ಯೋಜನೆ ಎಂದೂ ಸಹ ಕರೆಯುತ್ತಾರೆ. ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು 2021-22 ನೇ ಸಾಲಿನಲ್ಲಿ ಜಾರಿಗೆ ತರಲಾಗಿದೆ.

ಈ ಯೋಜನೆಯ ಮೂಲಕ ಮಹಿಳೆಯರಿಗೆ 50 ಸಾವಿರ ರೂ.ನೀಡುವ ಯೋಜನೆ ಆಗಿದೆ ಅಂದ್ರೆ ಪುರುಷರಿಗೆ ಸರಿಸಮನಾಗಿ ಮಹಿಳೆಯರಿಗೆ ಉದ್ಯೋಗಾವಕಾಶ ಸಿಗಬೇಕು ಎಂಬ ಕಲ್ಪನೆಯನ್ನು ಹೊಂದಿದೆ. ಈ ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ.

ಮಹಿಳೆಯರ ಜೀವನೋಪಾಯಕ್ಕಾಗಿ ಸರ್ಕಾರ ಪ್ರಧಾನಮಂತ್ರಿ ಅಜಯ್ ಯೋಜನೆ ಆರಂಭಿಸಿದೆ. ಇದರಲ್ಲಿ ಡ್ವಾಕ್ರಾ ಮೂಲಕ ಎಸ್ಸಿ/ಎಸ್ಟಿ ಮಹಿಳೆಯರಿಗೆ ರೂ.3 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತರು ಡ್ವಾಕ್ರಾಗೆ ಸಂಬಂಧಿಸಿದಂತೆ ಗ್ರಾಮದ ಸಿಸಿ ಅಥವಾ ಡ್ವಾಕ್ರಾ ಗುಂಪಿನ ಮುಖಂಡರನ್ನು ಸಂಪರ್ಕಿಸಿ ಯಾವುದೇ ಬಡ್ಡಿಯಿಲ್ಲದೆ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಇದು 50% ವರೆಗೆ ಸಹಾಯಧನವನ್ನು ಹೊಂದಿದೆ. ಅಂದರೆ ರೂ.1 ಲಕ್ಷದವರೆಗೆ ಸಾಲ ಪಡೆದರೆ ರೂ.50 ಸಾವಿರ ಮಾತ್ರ ಮರು ಪಾವತಿಸಬೇಕಾಗುತ್ತದೆ. ಉಳಿದದ್ದನ್ನು ಕೇಂದ್ರವು ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಆದರೆ ಉಳಿದ ರೂ.50 ಸಾವಿರಕ್ಕೆ ಯಾವುದೇ ಬಡ್ಡಿ ಅನ್ವಯವಾಗುವುದಿಲ್ಲ ಈ ಯೋಜನೆಯಲ್ಲಿ ಗರಿಷ್ಠ ಆದಾಯ ಮಿತಿ ಇಲ್ಲ. ಆದರೆ ರೂ. 2.50 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು.

ಪರಿಶಿಷ್ಟ ಜಾತಿಗೆ ಸೇರಿದ ನುರಿತ ಯುವಕರನ್ನು ಈಗ ಕ್ಲಸ್ಟರ್/ಗುಂಪು ಮಾಡಿ ಉದ್ಯೋಗದೊಂದಿಗೆ ಜೋಡಿಸಲಾಗುವುದು ಎಂದು ಹೇಳಲಾಗಿದೆ. ಕ್ಲಸ್ಟರ್/ಗುಂಪುಗಳನ್ನು ರಚಿಸುವ ಮೂಲಕ ಪರಿಶಿಷ್ಟ ಜಾತಿಯ ಫಲಾನುಭವಿಗಳು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಆಹಾರ ಸಂಸ್ಕರಣೆ ಮತ್ತು ಕರಕುಶಲ, ಕೈಮಗ್ಗ ಇತ್ಯಾದಿಗಳಲ್ಲಿ ಉದ್ಯೋಗ ಮಾಡಲು ಈ ಯೋಜನೆ ಮೂಲಕ ಹಣ ಪಡೆಯಬಹುದಾಗಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow