ಮಿಕ್ಸರ್ ಜಾರ್ನ ಕೆಳಭಾಗ ತುಂಬಾ ಗಲೀಜಾಗಿದ್ಯಾ!? ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ!
ಮಿಕ್ಸರ್ ಜಾರ್ ಅನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಅದರಲ್ಲೂ ಬ್ಲೇಡ್ ಬಳಿ ಸಂಗ್ರಹವಾಗಿರುವ ಕೊಳೆ ಮತ್ತು ಗ್ರೀಸ್ ಸುಲಭವಾಗಿ ಹೋಗಲ್ಲ. ಒಂದು ವೇಳೆ ಒತ್ತಡ ಹಾಕಿ ಸ್ವಚ್ಛ ಮಾಡಿದರೆ ಕೈಗಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಕಿಚನ್ ಟಿಪ್ಸ್ನ್ನು ಅನುಸರಿಸುವ ಮೂಲಕ ನಿಮಿಷಗಳಲ್ಲಿ ಮಿಕ್ಸರ್ ಜಾರ್ನ್ನು ಸ್ವಚ್ಛಗೊಳಿಸಬಹುದು.
ಮನೆಯಲ್ಲಿ ಮಿಕ್ಸರ್ ಜಾರ್ ಇದ್ದರೆ ಅಡುಗೆ ಮಾಡುವ ಕೆಲಸ ಸುಲಭವಾಗುತ್ತದೆ. ಇದಕ್ಕಾಗಿ ಹೆಚ್ಚು ಸಮಯ ಹಿಡಿಯುವುದಿಲ್ಲ. ಕಾಲೇಜು, ಆಫಿಸ್, ಬ್ಯಾಚುರಲ್ಗಳಿಗೆ ಅಡುಗೆ ಮಾಡುವ ಸಮಯವನ್ನು ಉಳಿಸುತ್ತದೆ. ಆದರೆ ಒಂದು ದಿನ ಮಿಕ್ಸರ್ ಕೆಟ್ಟು ಹೋದರೆ ಅನೇಕ ಮಂದಿಗೆ ಕೈ-ಕಾಲು ಅಲುಗಾಡುವುದೇ ಇಲ್ಲ. ಇದ್ದಕ್ಕಿದ್ದಂತೆ ಇಂತಹ ಸಮಸ್ಯೆಗಳು ಉದ್ಭವಿಸಿದಾಗ, ತಕ್ಷಣ ಅದು ಇನ್ನೂ ಕೆಲಸಕ್ಕೆ ಬರಲ್ಲ ಎಂದು ಮೂಲೆಯಲ್ಲಿಡುವ ಬದಲು ಕಾಲಕಾಲಕ್ಕೆ ಅದನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದು ಅವಶ್ಯಕ.
ವಿಶೇಷವಾಗಿ ಮಿಕ್ಸರ್ನಲ್ಲಿ ಬಳಸುವ ಜಾರ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸಿದರೆ, ಆಹಾರವು ಚೆನ್ನಾಗಿ ಮಿಶ್ರಣವಾಗುತ್ತದೆ ಮತ್ತು ಸುಲಭವಾಗಿ ಕೆಲಸ ಮಾಡುತ್ತದೆ. ಸಾಕಷ್ಟು ಮಂದಿ ಮಿಕ್ಸರ್ ಜಾರ್ ಮೇಲ್ಭಾಗವನ್ನು ತೊಳೆಯುತ್ತಾರೆ. ಆದರೆ ಕೆಳ ಭಾಗವನ್ನು ತೊಳೆಯುವುದನ್ನು ಮರೆಯುತ್ತಾರೆ. ಏಕೆಂದರೆ ಅದನ್ನು ಸ್ವಚ್ಛಗೊಳಿಸಲು ತುಂಬಾ ಕಷ್ಟ. ಆದ್ದರಿಂದ ಇದನ್ನು ಹೆಚ್ಚಾಗಿ ಕಡೆಗಣಿಸುತ್ತಾರೆ. ಹೀಗಾಗಿ ಅನೇಕ ಮನೆಗಳಲ್ಲಿ ಮಿಕ್ಸರ್ ಜಾರ್ನ ಕೆಳಭಾಗ ಮಾತ್ರ ಹೆಚ್ಚಾಗಿ ಕೊಳಕಾಗಿರುವುದನ್ನು ನೀವು ಗಮನಿಸಬಹುದು. ಈ ಕೊಳಕು ಸಂಗ್ರಹವಾದಾಗ ಜಾರ್ ಬ್ಲೇಡ್ಗಳು ಸರಿಯಾಗಿ ತಿರುಗಲು ಕಷ್ಟವಾಗುತ್ತದೆ. ಅದು ಮುಚ್ಚಿಹೋಗಬಹುದು ಮತ್ತು ಮುರಿಯಬಹುದು.
ಅಷ್ಟೇ ಅಲ್ಲದೇ, ನೀವು ಇಂತಹ ಕೊಳಕು ಜಾರ್ನಲ್ಲಿ ರುಬ್ಬುವ ಆಹಾರವು ಕೊಳಕಿನೊಂದಿಗೆ ಬೆರೆತರೆ, ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೊಟ್ಟೆಯ ಸಮಸ್ಯೆಗಳನ್ನು ಉಂಟು ಮಾಡಬಹುದು. ವಿಶೇಷವಾಗಿ ಮಕ್ಕಳಿರುವ ಮನೆಯಲ್ಲಿ ಇದೆಲ್ಲದರ ಬಗ್ಗೆ ಗಮನ ಹರಿಸುವುದು ಮುಖ್ಯ. ಆದ್ದರಿಂದ, ಮಿಕ್ಸರ್ ಜಾರ್ನ ಕೆಳಭಾಗವನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.
ಮೊದಲು, ಬ್ಲೆಂಡರ್ ಜಾರ್ನ ಕೆಳಭಾಗದಲ್ಲಿ 1 ಚಮಚ ಅಡುಗೆ ಸೋಡಾವನ್ನು ಹಾಕಿ, ಅದರ ಮೇಲೆ ವಿನೆಗರ್ ಸುರಿಯುತ್ತಾರೆ. ನಂತರ ಈ ಮಿಶ್ರಣವನ್ನು 5 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ಬಳಿಕ ಅದರಲ್ಲಿ ಸ್ವಲ್ಪ ಡಿಶ್ ಸೋಪ್ ಲಿಕ್ವೆಡ್ ಅನ್ನು ಹಾಕಬೇಕು.
ಕೊನೆಗೆ ಫೋರ್ಕ್ ಬಳಸಿ ಟಿಶ್ಯೂ ಪೇಪರ್ ಅನ್ನು ನಾಲ್ಕು ತುಂಡುಗಳಾಗಿ ಮಡಿಸಿ ತುದಿಯಲ್ಲಿ ಹಿಸುಕು ಹಾಕಿ. ಟಿಶ್ಯೂ ಪೇಪರ್ ಮೇಲೆ ಕೊಳೆ ಅಂಟಿಕೊಳ್ಳುವಂತೆ ಜಾರ್ ಸುತ್ತಲೂ ಉಜ್ಜಬೇಕು. ಉಳಿದ ಕೊಳೆಯನ್ನು ಬ್ರಷ್ ನಿಂದ ಕೊಳೆ ಸಂಪೂರ್ಣವಾಗಿ ಹೋಗುವವರೆಗೆ ಉಜ್ಜಿ. ನಂತರ ನೀರಿನಿಂದ ತೊಳೆಯಬೇಕು. ಆಗ ಹೊಸ ಜಾರ್ನಂತೆ ಹೊಳೆಯುತ್ತದೆ. ಹೀಗೆ ನೀವು ಮಾಡಬಹುದು.
ನಿಮ್ಮ ಪ್ರತಿಕ್ರಿಯೆ ಏನು?