ಮೋದಿ ಭಾರತದ ಪ್ರಚಂಡ: ಕವನದ ಮೂಲಕ ಹೊಗಳಿದ ಜಗ್ಗೇಶ್!

ಮೋದಿ ಭಾರತದ ಪ್ರಚಂಡ ಎಂದು ಹೇಳುವ ಮೂಲಕ ಕವನದ ಮೂಲಕ ನವರಸ ನಾಯಕ ನಟ ಜಗ್ಗೇಶ್ ಹೊಗಳಿದ್ದಾರೆ.
ಪಾಕ್ ಉಗ್ರರ ನೆಲೆಗಳ ಮೇಲೆ ಭಾರತ ‘ಆಪರೇಷನ್ ಸಿಂಧೂರ’ ಮೂಲಕ ತಕ್ಕ ಪಾಠ ಕಲಿಸಿದೆ. ಉಗ್ರರ ನೆಲೆಗಳನ್ನು ಉಡೀಸ್ ಮಾಡಿರುವ ಭಾರತೀಯ ಸೇನೆಗೆ ಜಗ್ಗೇಶ್ ಕೊಂಡಾಡಿದ್ದಾರೆ. ಮೋದಿ ಭಾರತದ ಪ್ರಚಂಡ ಎಂದು ಜಗ್ಗೇಶ್ ಕವನ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಕವನ ಹೀಗಿದೆ!?
ಭಾರತದ ರಕ್ಷಕ ಇವ
ನುಡಿದಂತೆ ನಡೆದವ..
ಆಧುನಿಕ ಭಾರತದ ಕಲಿ
ನೊಂದ ಭಾರತೀಯ ನಲಿ..
ಹೊರ ಶತೃಗಳ ಪಕ್ಷ
ಒಳ ಶತೃಗಳು ಪಕ್ಷ
ಆಚರಿಸುವರು (ಪಿತೃ) ಪಕ್ಷ
ಸಾಮ ಬೇಧ ದಂಡ
ನಡೆಯ ರಣಭಂಡ
ಮೋದಿ ಭಾರತದ ಪ್ರಚಂಡ
ಸಮಾಧಾನವಾಗಲಿ ಪ್ರಾಣ
ತೆತ್ತ ಆತ್ಮಗಳಿಗೆ
ನಿದಿರೆ ತಪ್ಪಿದ ರಾತ್ರಿಗಳು ನಿರಂತರ ಶತೃಗಳಿಗೆ.
ಪಾಪಿಸ್ತಾನದ ಶತೃಸಂಹಾರ ಮಾಡಿದಕ್ಕೆ
ನರೇಂದ್ರ ಮೋದಿರವರಿಗೆ ಧನ್ಯವಾದ ಸೇಡಿಗೆ ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






