ಕಿರುತೆರೆಗೆ ಮರಳಿದ ಮೇಘಾ ಶೆಟ್ಟಿ: ಸೀರಿಯಲ್ ನಿರ್ಮಾಣದ ಜೊತೆ, ವಿಶೇಷ ಪಾತ್ರದಲ್ಲಿ ಎಂಟ್ರಿ

ಕಿರುತೆರೆಯಲ್ಲಿ ದಾಖಲೆ ಬರೆದ ಸೀರಿಯಲ್ಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದು. ಜೊತೆ ಜೊತೆಯಲ್ಲಿ ಖ್ಯಾತಿಯ ಮೇಘಾ ಶೆಟ್ಟಿ ಈಗ ಸ್ಯಾಂಡಲ್ವುಡ್ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ.
ಹೌದು, ಸದಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ವೀವ್ ಆಗಿದ್ದ ನಟಿ ಮೇಘಾ ಶೆಟ್ಟಿ, ‘ಮುದ್ದು ಸೊಸೆ’ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಅವರು ದರ್ಶನ ನೀಡುತ್ತಿದ್ದಾರೆ.
ಈ ಧಾರವಾಹಿಯಲ್ಲಿ ನಟನಾಗಿ ಬಿಗ್ ಬಾಸ್’ ಖ್ಯಾತಿಯ ತ್ರಿವಿಕ್ರಮ್ ಮತ್ತು ನಟಿಯಾಗಿ ಪ್ರತಿಮಾ ಹಾಗೂ ಅತಿಥಿ ಪಾತ್ರವನ್ನು ಮೇಘಾ ಶೆಟ್ಟಿ ನಿಭಾಯಿಸಿದ್ದಾರೆ. ಈ ಸೀರಿಯಲ್ ಅನ್ನು ಅವರೇ ಪ್ರಸ್ತುತಪಡಿಸುತ್ತಿದ್ದಾರೆ. ಈ ಸೀರಿಯಲ್ ನಿರ್ಮಾಣಕ್ಕೆ ಅವರು ಕೂಡ ಸಾಥ್ ನೀಡಿರೋದು ವಿಶೇಷವಾಗಿದೆ.
ಇನ್ನೂ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ ಈಗ ಸ್ಯಾಂಡಲ್ವುಡ್ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಸದ್ಯ ಇವರ ಕೈಯಲ್ಲಿ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’, ‘ಚೀತಾ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






