ಆರ್ ಸಿಬಿಗೆ ತವರೇ ಕಂಟಕ: ಪ್ಲೇ ಆಫ್​ ಎಂಟ್ರಿ ಭವಿಷ್ಯ ಅಷ್ಟು ಸುಲಭ ಅಲ್ಲ!

ಎಪ್ರಿಲ್ 16, 2025 - 09:02
 0  14
ಆರ್ ಸಿಬಿಗೆ ತವರೇ ಕಂಟಕ: ಪ್ಲೇ ಆಫ್​ ಎಂಟ್ರಿ ಭವಿಷ್ಯ ಅಷ್ಟು ಸುಲಭ  ಅಲ್ಲ!

2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಹಳ ಬಲಿಷ್ಠವಾಗಿ ಕಾಣ್ತಿದೆ. ಆಡಿದ 6 ಪಂದ್ಯದಲ್ಲಿ 4 ಪಂದ್ಯ ಗೆದ್ದಿದ್ದು, ಎರಡರಲ್ಲಿ ಮಾತ್ರ ಸೋಲು ಕಂಡಿದೆ. ಆ ಸೋಲು ಕಂಡ ಎರಡು ಪಂದ್ಯಗಳು ತವರು ಮೈದಾನ ಚಿನ್ನಸ್ವಾಮಿಯಲ್ಲಿ. ತವರಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಪರದಾಡಿರೋ ರೆಡ್ ಆರ್ಮಿ ಮುಂದೆ ಈಗ ಸಾಲು ಸಾಲು ಅಗ್ನಿಪರೀಕ್ಷೆಗಳಿವೆ. ಕೊಲ್ಕತ್ತಾ, ಚೆನ್ನೈ, ಮುಂಬೈ, ರಾಜಸ್ಥಾನ್.. ಹೀಗೆ ನಾಲ್ಕಕ್ಕೇ ನಾಲ್ಕು ಅವೇ ಮ್ಯಾಚ್ ಗೆದ್ದಿರುವ ಆರ್​ಸಿಬಿ ಐಪಿಎಲ್​ ರಣರಂಗದಲ್ಲಿ ಅದ್ಭುತ ಪ್ರದರ್ಶನ ನೀಡ್ತಿದೆ. ಎದುರಾಳಿಗಳ ಮೇಲೆ ದಂಡಯಾತ್ರೆ ಮಾಡ್ತಿದೆ. ಅವೇ ಮ್ಯಾಚ್​ಗಳಲ್ಲಿ ಡಾಮೀನೇಟಿಂಗ್ ಪರ್ಫಾಮೆನ್ಸ್ ನೀಡ್ತಿರೋ ಆರ್​​ಸಿಬಿ ಹೋಮ್ ಕಂಡೀಷನ್ಸ್​ನಲ್ಲಿ ಕಂಪ್ಲೀಟ್​ ಉಲ್ಟಾ ಇದೆ.

ಸೋಲಿಲ್ಲದ ಸರದಾರನಾಗಿ ಮೆರೆದಾಡ್ತಿರುವ ಆರ್​ಸಿಬಿ ಆಡಿದ 2 ಪಂದ್ಯಗಳಲ್ಲೂ ತವರಿನಲ್ಲಿ ಮುಂಖಭಂಗ ಅನುಭವಿಸಿದೆ. ಗುಜರಾತ್, ಡೆಲ್ಲಿ ಎದುರು ಹೀನಾಯ ಸೋಲು ಅನುಭವಿಸಿದೆ. ಇದೀಗ ಜೈಪುರದಲ್ಲಿ ವಿಜಯ ಸಾಧಿಸಿ ಮತ್ತೆ ತವರಿಗೆ ಆಗಮಿಸಿರುವ ಆರ್​ಸಿಬಿ ಹಾಗೂ ಆರ್​ಸಿಬಿ ಅಭಿಮಾನಿಗಳಿಗೆ ಬೆಂಗಳೂರಿನದ್ದೇ ಟೆನ್ಶ್ ಶುರುವಾಗಿದೆ.

ಟೂರ್ನಿಯಲ್ಲಿ ಆಡಿರೋ 6ರಲ್ಲಿ 4 ಪಂದ್ಯ ಗೆದ್ದಿರುವ ಆರ್​ಸಿಬಿಗೆ ಮುಂದಿನ 8 ಪಂದ್ಯಗಳೂ ಮಹತ್ವದ್ದಾಗಿದೆ. ಅವೇ ಮ್ಯಾಚಸ್​​ನಲ್ಲಿ ಗೆದ್ದು​, ತವರಲ್ಲೇ ಸೋತಿರುವ ಆರ್​ಸಿಬಿ, ಬೆಂಗಳೂರಿನಲ್ಲೇ ಮುಂದಿನ 5 ಪಂದ್ಯಗಳನ್ನಾಡಲಿದೆ. ಈ ಹೋಮ್​ ಮ್ಯಾಚ್​ಗಳೇ ರೆಡ್ ಆರ್ಮಿಯ ಅಳಿವು ಉಳಿವು ನಿರ್ಧರಿಸಲಿದೆ. ಹೀಗಾಗಿ ಈ ಸವಾಲನ್ನ ಹೇಗೆ ಮೆಟ್ಟಿ ನಿಲ್ಲುತ್ತೆ ಎಂಬ ಪ್ರಶ್ನೆ ಕಾಡ್ತಿದೆ.

ಸೀಸನ್​ನಲ್ಲಿ ಉಳಿದ 8 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಆರ್​ಸಿಬಿ, ಹೋಮ್​ ಗ್ರೌಂಡ್ ಚಿನ್ನಸ್ವಾಮಿಯಲ್ಲೇ ಆಡಲಿದೆ. ಇಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ರೆಡ್ ಆರ್ಮಿ, ಉಳಿದ ಪಂದ್ಯಗಳಲ್ಲಿ ಕನಿಷ್ಠ ಮೂರು ಮ್ಯಾಚ್ ಗೆಲ್ಲಬೇಕು. ಇದು ಅಂದುಕೊಂಡಷ್ಟು ಸುಲಭ ಇಲ್ಲ. ಚಿನ್ನಸ್ವಾಮಿಯಲ್ಲಿ ಪಂಜಾಬ್ ಕಿಂಗ್ಸ್, ಸನ್ ರೈರ್ಸರ್ಸ್ ಹೈದ್ರಾಬಾದ್​​ನಂಥ ಬಲಿಷ್ಠ ತಂಡಗಳ ಸವಾಲು ಎದುರಾಗಲಿದೆ. ಇವುಗಳ ಜೊತೆಗೆ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್​ ರೈಡರ್ಸ್ ತಂಡಗಳು ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಸವಾಲೊಡ್ಡಲಿವೆ. ಬಲಿಷ್ಟ ಬ್ಯಾಟಿಂಗ್​ ಲೈನ್​ ಅಪ್​ ಹೊಂದಿರೋ ಈ ತಂಡಗಳನ್ನ ಕಟ್ಟಿ ಹಾಕೋದು ಅಂದುಕೊಂಡಷ್ಟು ಸುಲಭವಿಲ್ಲ

ಸದ್ಯ ತವರಿನ ಅಂಗಳದಾಚೆ ಆಡಿರೋ 4 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿಗೆ ಇನ್ನುಳಿದ 3 ಪಂದ್ಯಗಳಲ್ಲಿ ಕಠಿಣ ಸವಾಲು ಎದುರಾಗಿದೆ. ಪಂಜಾಬ್ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್​ನಂತ ಬಲಿಷ್ಟ ತಂಡಗಳನ್ನ ಅವೇ ಕಂಡೀಷನ್ಸ್​ನಲ್ಲಿ ಎದುರಿಸಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow