ರಮ್ಯಾ-ವಿನಯ್ ರಾಜ್‌ಕುಮಾರ್ ಫೋಟೋಶೂಟ್ ವೈರಲ್..!ಏನಿದು ಅಪ್‌ಡೇಟ್‌?

ಜುಲೈ 24, 2025 - 20:05
 0  16
ರಮ್ಯಾ-ವಿನಯ್ ರಾಜ್‌ಕುಮಾರ್ ಫೋಟೋಶೂಟ್ ವೈರಲ್..!ಏನಿದು ಅಪ್‌ಡೇಟ್‌?

ಕನ್ನಡದ ಪ್ರಮುಖ ನಟಿ ರಮ್ಯಾ ಮತ್ತು ನಟ ವಿನಯ್ ರಾಜ್‌ಕುಮಾರ್ ಫೋಟೋಶೂಟ್‌ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳನ್ನು ನೋಡಿ ರಮ್ಯಾ ಫ್ಯಾನ್ಸ್ ಖುಷಿಯಾಗಿದ್ದಾರೆ. ಹಲವರು ಇದು ಹೊಸ ಸಿನಿಮಾದ ಪ್ರಾರಂಭವೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಈ ಫೋಟೋಶೂಟ್‌ ಹೊಸ ಸಿನಿಮಾ ಸಂಬಂಧಿತವಲ್ಲ.

ರಮ್ಯಾ ಮತ್ತು ವಿನಯ್, ‘ಸ್ವಾಸ ಲೈಫ್’ ಎಂಬ ಮ್ಯಾಗಜಿನ್‌ಗಾಗಿ ಈ ಫೋಟೋಶೂಟ್‌ ಮಾಡಿಸಿದ್ದಾರೆ.ಇಬ್ಬರೂ ಆಕರ್ಷಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು,  ವಿನಯ್ ಅವರು ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಅವರು ಈಗಲೂ ಸಾಕಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರ ಸೌಂದರ್ಯ ಯಾವಾಗಲೂ ಕಡಿಮೆ ಆಗುವಂಥದ್ದಲ್ಲ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ರಮ್ಯಾ ಹಾಗೂ ವಿನಯ್​ಗೆ ಮೊದಲಿನಿಂದಲೂ ಪರಿಚಯ ಇದೆ. ರಮ್ಯಾ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ರಾಜ್​ಕುಮಾರ್ ಕುಟುಂಬದ ಬ್ಯಾನರ್ ಮೂಲಕ. ಇನ್ನು, ಪುನೀತ್ ಜೊತೆ ಅವರು ಕೆಲವು ಸಿನಿಮಾ ಮಾಡಿದ್ದಾರೆ. ಹೀಗಾಗಿ, ಸೆಟ್​ನಲ್ಲಿ ಇರುವಾಗ ವಿನಯ್ ಹಾಗೂ ರಮ್ಯಾ ಅನೇಕ ಬಾರಿ ಭೇಟಿ ಮಾಡಿದ್ದು ಇದೆ. ಇವರು ತೆರೆಮೇಲೆ ಒಟ್ಟಾಗಿ ಕಾಣಿಸಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow