ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ? 32,438 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಂದೇ ಅಪ್ಲೈ ಮಾಡಿ!

ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಎಸ್ ಕೆಲಸ ಇಲ್ಲದೇ ಖಾಲಿ ಕೂತಿದ್ರೆ ಇಂದೇ ಅಪ್ಲೈ ಮಾಡಿ.
ಎಸ್ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಭಾರತೀಯ ರೈಲ್ವೆ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಡಿ ಹುದ್ದೆಗಳ ನೇಮಕಾತಿ 2025ಕ್ಕೆ ಸಂಬಂಧಿಸಿದಂತೆ RRB ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ. ಅಜಿ ಸಲ್ಲಿಕೆಯು ಜನವರಿ 23ರಿಂದ ಆರಂಭವಾಗಲಿದೆ. ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ರೈಲ್ವೇ ನೇಮಕಾತಿ ಮಂಡಳಿ ಗ್ರೂಪ್ ಡಿ ನೇಮಕಾತಿ ಪ್ರಕ್ರಿಯೆ ಗೆ ಸಂಬಂಧಿಸಿದಂತೆ ಒಟ್ಟು 32,438 ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೂಡಲೇ ಅಧಿಕೃತ ವೆಬ್ಸೈಟ್ rrbcdg.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಫೆಬ್ರವರಿ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಕೆಗೂ ಮೊದಲು ವೇತನ, ಹುದ್ದೆಗಳು ವಿಭಾಗವಾರು ಮಾಹಿತಿ, ಶೈಕಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಮಾಸಿಕ ವೇತನ ಇನ್ನಿತರ ನೇಮಕಾತಿ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಆರ್ಆರ್ಬಿ
ಅರ್ಜಿ ಸಲ್ಲಿಕೆ: ಆನ್ನೈಲ್
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ ಆರಂಭ: ಜನವರಿ 23
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 22
ಒಟ್ಟು ಹುದ್ದೆಗಳು: 32,438 ಹುದ್ದೆಗಳು
ಹುದ್ದೆಗಳ ಪೂರ್ತಿ ಮಾಹಿತಿ, ಪಟ್ಟಿ
ಟ್ರ್ಯಾಕ್ ಮೇಂಟೇನರ್: 13,187 ಹುದ್ದೆಗಳು
ಪಾಯಿಂಟ್ಸ್ಮನ್: 5058 ಹುದ್ದೆಗಳು
ಸಹಾಯಕ (ವಿವಿಧ): ಒಟ್ಟು 3,077 ಹುದ್ದೆಗಳು
ಇಂಜಿನಿಯರಿಂಗ್ ಸಹಾಯಕ (ಟ್ರ್ಯಾಕ್ ಮೆಷಿನ್) 799
ಸಹಾಯಕ (ಸೇತುವೆ): 301
ಸಹಾಯಕ ಪಿ-ವೇ: 247
ಮೆಕ್ಯಾನಿಕಲ್ ಸಹಾಯಕ : 2587
ಸಹಾಯಕ ಲೋಕೋ ಶೆಡ್ (ಡೀಸೆಲ್): 420
ಸಹಾಯಕ (ಕಾರ್ಯಾಗಾರ): 3077
ಎಸ್ಆಂಡ್ ಟಿ ಸಹಾಯಕ: 2012
ಎಲೆಕ್ಟ್ರಿಕಲ್ ಸಹಾಯಕ (ಆರ್ಟಿ): 1381
ಸಹಾಯಕ ಲೋಕೋ ಶೆಡ್ (ಎಲೆಕ್ಟ್ರಿಕಲ್): 950
ಸಹಾಯಕ ಕಾರ್ಯಾಚರಣೆಗಳು (ವಿದ್ಯುತ್): 744
ಸಹಾಯಕ ಟಿಎಲ್ ಆಂಡ್ ಎಸಿ: 1041
ಸಹಾಯಕ ಟಿಎಲ್ ಆಂಡ್ ಎಸಿ: (ವರ್ಕ್ಶಾಪ್) 624
ಶೈಕ್ಷಣಿಕ ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು. ಅಥವಾ ಎನ್ಸಿವಿಟಿ ಅಥವಾ ಐಟಿಐಯಿಂದ ಎನ್ಇಸಿ ಪ್ರಮಾಣಪತ್ರ ಪಡೆದಿರುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳ ವಯೋಮಿತಿ
ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬಯಸುವ ಅರ್ಜಿದಾರರಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 36 ವರ್ಷ ವಯಸ್ಸಾಗಿರಬೇಕು
ರೈಲ್ವೆ ಇಲಾಖೆ, ಆರ್ಆರ್ಬಿ ನೇಮಕಾತಿಗೆ ಸಂಬಂಧಿಸಿದ ಉದ್ಯೋಗ ಮಾಹಿತಿಗೆ ನೀವು ಕೂಡಲೇ ಅಧಿಕೃತ ವೆಬ್ಸೈಟ್ಗೆ https://www.rrbcdg.gov.in/ ಭೇಟಿ ನೀಡಬೇಕು. ಸೂಕ್ತ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬೇಕು.
ನಿಮ್ಮ ಪ್ರತಿಕ್ರಿಯೆ ಏನು?






