ರೋಲರ್‌ ಕೋಸ್ಟರ್‌ ಆಟದ ವೇಳೆ ದುರಂತ: ಫೆಬ್ರವರಿಯಲ್ಲಿ ಹಸೆಮಣೆ ಏರಬೇಕಿದ್ದ ಮಹಿಳೆ ದುರ್ಮರಣ!

ಎಪ್ರಿಲ್ 6, 2025 - 11:59
 0  13
ರೋಲರ್‌ ಕೋಸ್ಟರ್‌ ಆಟದ ವೇಳೆ ದುರಂತ: ಫೆಬ್ರವರಿಯಲ್ಲಿ ಹಸೆಮಣೆ ಏರಬೇಕಿದ್ದ ಮಹಿಳೆ ದುರ್ಮರಣ!

ನವದೆಹಲಿ:- ರೋಲರ್‌ ಕೋಸ್ಟರ್‌ ಆಟದ ವೇಳೆ ದುರಂತ ಸಂಭವಿಸಿದ್ದು, ಫೆಬ್ರವರಿಯಲ್ಲಿ ಹಸೆಮಣೆ ಏರಬೇಕಿದ್ದ ಮಹಿಳೆ ದುರ್ಮರಣ ಹೊಂದಿದ ಘಟನೆ ನವದೆಹಲಿಯಲ್ಲಿ ಜರುಗಿದೆ. ಮೃತ ಮಹಿಳೆಯನ್ನು ಪ್ರಿಯಾಂಕ ಎಂದು ಗುರುತಿಸಲಾಗಿದೆ. 

ಪ್ರಿಯಾಂಕಾ 2023ರ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2026 ರ ಫೆಬ್ರವರಿಗೆ ಮದುವೆ ನಿಗದಿಯಾಗಿತ್ತು. ಆದರೆ ವಿಧಿಯಾಟ ಬಾಳಿ ಬದುಕಬೇಕಾಗಿದ್ದ ಮಹಿಳೆ ಇದೀಗ ಇಹಲೋಕ ತ್ಯಜಿಸಿದ್ದಾರೆ.

ದೆಹಲಿಯ ಹೊರವಲಯದಲ್ಲಿರುವ ಜನಪ್ರಿಯ ಮನೋರಂಜನಾ ಉದ್ಯಾನವನದಲ್ಲಿ ಈ ದುರಂತ ಸಂಭವಿಸಿದೆ. ನಿಶ್ಚಿತಾರ್ಥವಾದ ವರನೊಂದಿಗೆ ನೈಋತ್ಯ ದೆಹಲಿಯ ಕಪಶೇರಾ ಬಳಿಯ ಫನ್ ಎನ್ ಫುಡ್ ವಾಟರ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಪ್ರಿಯಾಂಕಾ ತನ್ನ ನಿಶ್ಚಿತ ವರ ನಿಖಿಲ್ ಜೊತೆ ವಾಟರ್ & ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋಗಿದ್ದರು. ಸ್ವಿಂಗ್ ತರಹದ ರೈಡ್‌ನಲ್ಲಿ ಕುಳಿತಿದ್ದ ಪ್ರಿಯಾಂಕಾ, ಸ್ಟ್ಯಾಂಡ್ ಮುರಿದಾಗ ಎತ್ತರದಿಂದ ಕೆಳಗೆ ಬಿದ್ದರು. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow