ಲವ್ ಬ್ರೇಕಪ್ ಆಗಿದ್ಯಾ? ಹಾಗಿದ್ರೆ ಬೆಂಗಳೂರಿನ ಈ ಕಂಪನಿಯಲ್ಲಿದೆ ಭರ್ಜರಿ ಉದ್ಯೋಗ! ಅರ್ಹತೆ ಏನು?

ಫೆಬ್ರವರಿ 6, 2025 - 08:17
 0  10
ಲವ್ ಬ್ರೇಕಪ್ ಆಗಿದ್ಯಾ? ಹಾಗಿದ್ರೆ ಬೆಂಗಳೂರಿನ ಈ ಕಂಪನಿಯಲ್ಲಿದೆ ಭರ್ಜರಿ ಉದ್ಯೋಗ! ಅರ್ಹತೆ ಏನು?

ಬೆಂಗಳೂರಿನ ಟಾಪ್​ಮೇಟ್​ ಎನ್ನುವ ಕಂಪನಿ ಲವ್ ಬ್ರೇಕ್​ ಅಪ್ ಆದವರಿಂದ ಅರ್ಜಿ ಆಹ್ವಾನ ಮಾಡಿದೆ.

ಲವ್​​ನಲ್ಲಿ ಸಾಕಷ್ಟು ಅನುಭವ ಪಡೆದಿರಬೇಕು. ಯಾರು ಲವ್​ನಲ್ಲಿ ಫೇಲ್ ಆಗಿರುತ್ತಾರೋ ಅವರು ಈ ಕೆಲಸಕ್ಕೆ ಅರ್ಹರು ಆಗಿರುತ್ತಾರೆ. ಡೇಟಿಂಗ್ ಬಗ್ಗೆ ಹೊಸದಾಗಿ ಮಾಹಿತಿ ಕೊಡುವ ಕೌಶಲ್ಯ ಹೊಂದಿರಬೇಕು. ಪ್ರೀತಿ, ಡೇಟಿಂಗ್ ಕುರಿತು ಹೊಸ ಪದಗಳನ್ನು ಸೃಷ್ಟಿಸುವ ಚಾಣಕ್ಷತೆ ನಿಮ್ಮಲ್ಲಿ ಇರಬೇಕು.

ಇದು ಅಲ್ಲದೇ 2 ರಿಂದ 3 ವೈವಾಹಿಕ ವೆಬ್​ಸೈಟ್ ಬಳಕೆ ಮಾಡಿದ ಅನುಭವ ಇರಬೇಕು. ಅಂದರೆ ಆನ್‌ಲೈನ್ ಡೇಟಿಂಗ್ ಕುರಿತು ಮಾಹಿತಿ ತಿಳಿದಿರಬೇಕು ಎಂದು ಕಂಪನಿ ಹೇಳಿದೆ. ಈ ಎಲ್ಲ ಅರ್ಹತೆಗಳು ನಿಮ್ಮಲ್ಲಿ ಇದ್ದರೇ ಟಾಪ್​ಮೇಟ್ ಕಂಪನಿಯ ಮುಖ್ಯಡೇಟಿಂಗ್ ಅಧಿಕಾರಿ ಹುದ್ದೆಗೆ ಅಪ್ಲೇ ಮಾಡಬಹುದು.

ಯಾವುದೇ ಹುದ್ದೆಗಳಿಗೆ ಆಹ್ವಾನ ಮಾಡಬೇಕಾದರೆ ಶೈಕ್ಷಣಿಕ ಹಿನ್ನೆಲೆ, ಎಷ್ಟು ಅಂಕ ಪಡೆದಿದ್ದೀರಿ, ಈ ಮೊದಲು ಯಾವ ಕೆಲಸ ಮಾಡುದ್ದೀರಿ, ಎಷ್ಟು ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ ಎಂದು ಕೇಳಬೇಕು. ಆದರೆ ಟಾಪ್​ಮೇಟ್ ಕಂಪನಿ ಮಾತ್ರ ಲವ್​ನಲ್ಲಿ ಬ್ರೇಕ್ ಅಪ್ ಆಗಿದ್ದರೇ ಕೆಲಸ ಕೊಡಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ., 

ಅರ್ಹತೆಗಳು

1 ಲವ್ ಬ್ರೇಕ್ ಆಗಿರಬೇಕು, ಪ್ರೀತಿಯಲ್ಲಿ 2 ಘಟನೆಗಳು ನಡೆದಿರಬೇಕು, 3 ಡೇಟ್ಸ್ ಆಗಿರಬೇಕು. (ಸಂದರ್ಶನದಲ್ಲಿ ಕೇಳುತ್ತಾರೆ ಅಷ್ಟೇ, ಅನುಭವ ಹೇಳಬೇಕು.)
ಡೇಟಿಂಗ್ ನಿಯಮಗಳು ಹಾಗೂ ಹೊಸದನ್ನು ರಚಿಸಲು ಗೊತ್ತಿರಬೇಕು. ಇದರ ಬಗ್ಗೆ ಮಾಹಿತಿ ಇದ್ದರೇ ಸಾಕು
2-3 ಡೇಟಿಂಗ್ ಆಪ್​ಗಳಲ್ಲಿ ಡೇಟಿಂಗ್​ಗೆ ಪ್ರಯತ್ನ ಮಾಡಿರಬೇಕು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow