ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಉದ್ಯೋಗ! ಅರ್ಹರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಭಾರತ ಸರ್ಕಾರದಡಿಯ ಕರ್ನಾಟಕ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ಗ್ರಾಜುಯೇಟ್ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಆಯ್ಕೆಯಾದವರಿಗೆ ಆಕರ್ಷಕ ಮಾಸಿಕ ಸ್ಟೈಫಂಡ್ ಜತೆಗೆ, ಊಟದ ಭತ್ಯೆಗಳನ್ನು ನೀಡಲಾಗುತ್ತದೆ.
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ವಿವರ (ವಿಭಾಗವಾರು)
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ 2
ಮೆಕ್ಯಾನಿಕಲ್ ಇಂಜಿನಿಯರಿಂಗ್ 3
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ವಿವರ (ವಿಭಾಗವಾರು)
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ 2
ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ 1
ಮೆಕ್ಯಾನಿಕಲ್ ಇಂಜಿನಿಯರಿಂಗ್ 2
ವಿದ್ಯಾರ್ಹತೆ ವಿವರ
ಗ್ರಾಜುಯೇಟ್ ಅಪ್ರೆಂಟಿಸ್: ಈ ಹುದ್ದೆಗಳಿಗೆ ಇಲೆಕ್ಟ್ರಿಕಲ್ ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ಬಿಇ / ಬಿ.ಟೆಕ್ ಪದವಿ ಪಾಸ್ ಮಾಡಿರಬೇಕು. ಮಾಸಿಕ ರೂ.12,000 ಸ್ಟೈಫಂಡ್ ಜತೆಗೆ, ಊಟದ ಭತ್ಯೆ ನೀಡಲಾಗುತ್ತದೆ.
ಟೆಕ್ನೀಷಿಯನ್ ಅಪ್ರೆಂಟಿಸ್: ಇಲೆಕ್ಟ್ರಿಕಲ್ /ಇಲೆಕ್ಟ್ರಾನಿಕ್ಸ್/ ಮೆಕ್ಯಾನಿಕಲ್ ಬ್ರ್ಯಾಂಚ್ನಲ್ಲಿ ಡಿಪ್ಲೊಮ ಪಾಸಾಗಿರಬೇಕು. ಮಾಸಿಕ ರೂ.10,200 ಸ್ಟೈಫಂಡ್ ನೀಡಲಾಗುತ್ತದೆ. ಜತೆಗೆ ಊಟದ ಭತ್ಯೆ ನೀಡಲಾಗುತ್ತದೆ
ತರಬೇತಿ ಅವಧಿ
ಈ ಹುದ್ದೆಗಳ ತರಬೇತಿ ಅವಧಿ ಒಂದು ವರ್ಷ ಮಾತ್ರ ಇರುತ್ತದೆ. ನಂತರ ಹುದ್ದೆಯ ಮೇಲೆ ಯಾವುದೇ ಹಕ್ಕು ಅಭ್ಯರ್ಥಿಗಳಿಗೆ ಇರುವುದಿಲ್ಲ.
ಆಯ್ಕೆ ವಿಧಾನ ಹೇಗೆ?
ಅರ್ಜಿ ಹಾಕಿದ ಅಭ್ಯರ್ಥಿಗಳನ್ನು ಅವರು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನಕ್ಕೆ ಕರೆಯಲಾಗುತ್ತದೆ. ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ವೆಬ್ ವಿಳಾಸ https://nats.education.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ
ನಿಮ್ಮ ಪ್ರತಿಕ್ರಿಯೆ ಏನು?






