ಲಾಹೋರ್ ನಲ್ಲಿ ಹೆಚ್ಚಾದ ವಾಯುಮಾಲಿನ್ಯ: ಭಾರತವನ್ನು ಧೂಷಿಸಿದ ಪಾಕಿಸ್ತಾನ!

ವಾಯುಮಾಲಿನ್ಯದಿಂದ ಜಗತ್ತಿನ ಅತಿ ಕಲುಷಿತ ನಗರವಾಗಿ ಲಾಹೋರ್ ಇದ್ದು, ಇದಕ್ಕೆ ಭಾರತವೇ ಕಾರಣವೆಂದು ಪಾಕಿಸ್ತಾನ್ ಆರೋಪಿಸಿದೆ.
ವಾಯುಮಾಲಿನ್ಯದ ಮಟ್ಟದ ಹಠಾತ್ ಹೆಚ್ಚಳಕ್ಕೆ ಪಾಕಿಸ್ತಾನದ ಸಚಿವರು ಭಾರತವನ್ನು ದೂಷಿಸಲು ಪ್ರಾರಂಭಿಸಿದ್ದಾರೆ. ಹಿರಿಯ ಸಚಿವ ಮರಿಯುಮ್ ಔರಂಗಜೇಬ್ ಭಾರತದಿಂದ ಪಾಕಿಸ್ತಾನಕ್ಕೆ ಬರುತ್ತಿರುವ ಹೊಗೆಯ ಬಗ್ಗೆ ತಮ್ಮ ದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕನಿಷ್ಠ ಒಂದು ವಾರದವರೆಗೆ ಗಾಳಿಯು ಲಾಹೋರ್ ಕಡೆಗೆ ಬೀಸಲಿದೆ ಎಂದು ಹೇಳಿದ್ದಾರೆ.
ಇನ್ನೂ ಪಾಕಿಸ್ತಾನದ ಎರಡನೇ ಅತಿದೊಡ್ಡ ನಗರವಾದ ಲಾಹೋರ್ ಭಾನುವಾರ ದಟ್ಟವಾದ ಹೊಗೆಯಿಂದ ಆವೃತವಾಗಿತ್ತು. ಏಕೆಂದರೆ ವಾಯು ಗುಣಮಟ್ಟ ಸೂಚ್ಯಂಕವು 1,067ಕ್ಕೆ ತಲುಪಿತ್ತು. ಸ್ವಿಜರ್ಲೆಂಡ್ ಮೂಲದ ವಾಯು ಗುಣಮಟ್ಟದ ವಾಚ್ಡಾಗ್ IQAir ಈ ಗಾಳಿಯ ಗುಣಮಟ್ಟವನ್ನು “ಅಪಾಯಕಾರಿ” ಎಂದು ವರ್ಗೀಕರಿಸಿದೆ.
ನಾಗರಿಕರು ಮನೆಯೊಳಗೆ ಇರಲು, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿದೆ. ಆಸ್ಪತ್ರೆಗಳಿಗೆ ಸ್ಮಾಗ್ ಕೌಂಟರ್ಗಳನ್ನು ನೀಡಲಾಗಿದೆ. ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು, 50% ಕಚೇರಿ ನೌಕರರು ಮನೆಯಿಂದಲೇ ಕೆಲಸ ಮಾಡಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






